Advertisement

ನರ್ಸ್‌-ವೈದ್ಯರು ದೇವರ ಅವತಾರವಿದ್ದಂತೆ: ಪಾಟೀಲ

06:29 PM May 13, 2020 | Naveen |

ಮುದ್ದೇಬಿಹಾಳ: ನರ್ಸ್‌, ವೈದ್ಯರು ದೇವರ ಅವತಾರವಿದ್ದಂತೆ. ಕೋವಿಡ್ ಸಾಂಕ್ರಾಮಿಕ ಹಾವಳಿ ಸಂದರ್ಭದಲ್ಲಿ ಇವರ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಿದೆ. ಇವರನ್ನು ಎಲ್ಲರೂ ಗೌರವಿಸಬೇಕು ಎಂದು ಶಾಸಕ ಎ.ಎಸ್‌ .ಪಾಟೀಲ ನಡಹಳ್ಳಿ ಅವರ ಪತ್ನಿ ಮಹಾದೇವಿ ಪಾಟೀಲ ಹೇಳಿದರು.

Advertisement

ತಾಲೂಕು ಸಾರ್ವಜನಿಕ ಅಸ್ಪತ್ರೆಯಲ್ಲಿ ಅಂತಾರಾಷ್ಟ್ರೀಯ ನರ್ಸ್‌ ದಿನಾಚರಣೆ ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶ್ವದ ಮೊದಲ ನರ್ಸ್‌ ಫ್ಲಾರೆನ್ಸ್‌ ನೈಟಿಂಗೇಲ್‌ ಭಾವಚಿತ್ರಕ್ಕೆ ಮೇಣದ ಬತ್ತಿ ಬೆಳಗಿ ಗೌರವ ಸಲ್ಲಿಸಿ ಮಾತನಾಡಿ ಅವರು, ತಮ್ಮ ಆರೋಗ್ಯ ಕಾಳಜಿ ಬದಿಗಿಟ್ಟು ಇನ್ನೊಬ್ಬರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಇವರ ಸೇವೆ ಅನನ್ಯ. ಇವರೇ ನಿಜವಾದ ಕೋವಿಡ್ ವಾರಿಯರ್ಸ್ ಗಳಾಗಿದ್ದಾರೆ ಎಂದರು.

ಆಸ್ಪತ್ರೆ ಪ್ರಭಾರ ಆಡಳಿತ ವೈದ್ಯಾಧಿಕಾರಿ ಡಾ| ಅನಿಲಕುಮಾರ ಶೇಗುಣಸಿ ಮಾತನಾಡಿ, ಮೇ 12ರಂದು ಫ್ಲಾರೆನ್ಸ್‌ ಅವರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬ ನರ್ಸಗಳು ಹಾಗೂ ಅವರ ಸೇವೆ ಸ್ಮರಿಸುವ ದಿನ ಇದಾಗಿದೆ ಎಂದರು. ಇದೇ ಸಂದರ್ಭದಲ್ಲಿ ಆಸ್ಪತ್ರೆ ಹಿರಿಯ ನರ್ಸ್‌ ಕೆ.ಡಿ. ಕುಲಕರ್ಣಿ ಅವರನ್ನು ಸಿಬ್ಬಂದಿ ಪರವಾಗಿ ಮಹಾದೇವಿ ಪಾಟೀಲ ಅವರು ಸನ್ಮಾನಿಸಿದರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ, ಗೌರಮ್ಮ ಹುನಗುಂದ, ನೀಲಮ್ಮ ಚಲವಾದಿ, ಶಿಲ್ಪಾ ಶರ್ಮಾ, ಪ್ರಸನ್ನ ಹಿರೇಮಠ, ಹಿರಿಯ ಶುಶ್ರೂಷಕ ಅಧಿಕಾರಿಗಳಾದ ಬಿ.ಎನ್‌. ಸಾರವಾಡ, ಸಂಜಯ ಭೋಸಲೆ, ಎಂ.ಬಿ. ಬಾಗವಾನ, ವಿ.ಎಚ್‌. ಕಿಲಾರಹಟ್ಟಿ, ವೈ.ಎಸ್‌. ತೊನಶ್ಯಾಳ, ಎಸ್‌.ಎಸ್‌. ಮಾಗಿ, ರಾಜಅಹ್ಮದ್‌ ಖಾಜಿ, ಅಖೀಲಬೇಗಮ್‌, ಫಾರ್ಮಸಿಸ್ಟ್‌ ಈರಣ್ಣ ಚಿನಿವಾರ ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next