Advertisement

ಆಹಾರ ಸಾಮಗ್ರಿ ಪ್ಯಾಕಿಂಗ್‌ ಪರಿಶೀಲನೆ

03:52 PM Apr 18, 2020 | Naveen |

ಮುದ್ದೇಬಿಹಾಳ: ಪಟ್ಟಣದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯದ ಆವರಣದಲ್ಲಿ ತಾಲೂಕಿನ 20,000 ಕಡುಬಡವರಿಗೆ ವಿತರಿಸಲು 12 ರೀತಿಯ ಆಹಾರ ಸಾಮಗ್ರಿ ಕಿಟ್‌ ಪ್ಯಾಕಿಂಗ್‌ ಕೆಲಸ ಸಂಪೂರ್ಣ ಸುರಕ್ಷತೆ ಮತ್ತು ಸ್ವತ್ಛತೆಯಲ್ಲಿ ನಡೆಯುತ್ತಿದೆ.

Advertisement

ಸ್ವತಃ ಶಾಸಕ ನಡಹಳ್ಳಿ ಹಾಗೂ ಅವರ ಪತ್ನಿ ಮಹಾದೇವಿ ಅವರು ಕಿಟ್‌ ತಯಾರಿಸುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಿಟ್‌ ತಯಾರಿಸುವ ಕಾರ್ಮಿಕರು ಮತ್ತು ನಡಹಳ್ಳಿ ಅಭಿಮಾನಿ ಬಳಗದ ಸದಸ್ಯರು ಮುಖಕ್ಕೆ ಮಾಸ್ಕ್, ತಲೆಗೆ ಕವರ್‌ ಮತ್ತು ಸಮವಸ್ತ್ರ ಧರಿಸಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ಯಾಕಿಂಗ್‌ ಸಿಬ್ಬಂದಿ ಆರೋಗ್ಯ ಖಚಿತಪಡಿಸಿಕೊಂಡು ಅವರಿಗೆಲ್ಲ ಗುರುತಿನ ಕಾರ್ಡ್‌ ನೀಡಲಾಗಿದೆ. ಈ ವೇಳೆ ಪ್ಯಾಕಿಂಗ್‌ನಿರತ ಕಾರ್ಮಿಕರಿಗೆ ಮಹಾದೇವಿ ಅವರು ಸ್ವತಃ ಊಟ ಬಡಿಸಿದರು.  ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣದ ಬಡವರಿಗೆ 1 ಕೋಟಿ ರೂ. ಸ್ವಂತದ ಹಣದಲ್ಲಿ ಶಾಸಕರು ಈ ಕಿಟ್‌ ವಿತರಿಸಲು ಮುಂದಾಗಿದ್ದಾರೆ.

ಧುರೀಣರ ಸಭೆ: ಪಟ್ಟಣ ಪ್ರದೇಶದಲ್ಲಿ ನಿಜವಾದ ಬಡವರನ್ನು ಗುರುತಿಸುವ ಕುರಿತು ಶಾಸಕರು ತಮ್ಮ ದಾಸೋಹ ನಿಲಯದಲ್ಲಿ ಬಿಜೆಪಿ ಧುರೀಣರು, ಅಭಿಮಾನಿ ಬಳಗದ ಪ್ರಮುಖರು ಮತ್ತು ವಾರ್ಡ್‌ ಪ್ರಮುಖರ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ತಮ್ಮ ಯೋಜನೆ ಬಗ್ಗೆ ಮಾಹಿತಿ ನೀಡಿದ ಶಾಸಕರು ಎಲ್ಲೆಲ್ಲಿ ಬಡವರಿದ್ದಾರೆ ಅನ್ನುವುದನ್ನು ತಿಳಿದುಕೊಂಡು ಅಂಥವರ ಪಟ್ಟಿ ನೀಡಬೇಕು. ನೇರವಾಗಿ ಅಂಥವರ ಮನೆಗೇ ಕಿಟ್‌ ವಿತರಿಸಲಾಗುತ್ತದೆ. ಇದರಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕಿದೆ ಎಂದರು.

ಬಿಜೆಪಿ ತಾಲೂಕಾಧ್ಯಕ್ಷ ಡಾ| ಪರಶುರಾಮ ಪವಾರ, ಧುರೀಣರಾದ ಪ್ರಭು ಕಡಿ, ಮಾಣಿಕಚಂದ ದಂಡಾವತಿ, ಲಕ್ಷ್ಮಣ ಬಿಜ್ಜೂರ, ಸಂಗಮ್ಮ ದೇವರಳ್ಳಿ, ಮನೋಹರ ತುಪ್ಪದ, ವಿವಿಧ ಬಡಾವಣೆ ಯುವ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next