ಎಂಎಸ್‌ಎ ಇಂಗ್ಲಿಷ್ ಮೀಡಿಯಂ ಆದರ್ಶ ವಿದ್ಯಾಲಯ ಕಟ್ಟಡ ಕಾಮಗಾರಿ ವಿಳಂಬಕ್ಕೆ ನಾನು ಹೊಣೆಗಾರನಲ್ಲ. ನಾನು ಶಾಸಕನಾಗುವುದಕ್ಕಿಂತ ಮೊದಲೇ ಕಟ್ಟಡದ ಕೆಲಸ ಪ್ರಾರಂಭಿಸಲಾಗಿತ್ತು.
Advertisement
ಸೂಕ್ತ ರಸ್ತೆ ಇಲ್ಲದ ಸ್ಥಳದಲ್ಲಿ ಶಾಲೆ ಕಟ್ಟಡಕ್ಕೆ ಜಾಗೆ ಆಯ್ದುಕೊಂಡಿರುವುದು ತಪ್ಪು. ಆದರೂ ಆದಷ್ಟು ಶೀಘ್ರ ಈ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದಾರೆ.
Related Articles
Advertisement
ಮಾರುತಿನಗರ ಮೂಲಕ ತಾರನಾಳಗೆ ಹೋಗುವ ಮುಖ್ಯರಸ್ತೆಯಿಂದ ಶಾಲೆವರೆಗೆ ಅಂದಾಜು ಒಂದೂವರೆ ಕಿ.ಮೀ. ಸಂಪರ್ಕ ರಸ್ತೆಗೆ ಶೀಘ್ರ ಟೆಂಡರ್ ಕರೆದು ಡಾಂಬರ್ ರಸ್ತೆ ನಿರ್ಮಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಶಾಲಾ ಕಟ್ಟಡ ಪರಿಶೀಲಿಸುವ ವೇಳೆ ಹಲವೆಡೆ ಕಳಪೆ ಕಾಮಗಾರಿ ಮಾಡಿದ್ದು ಕಣ್ಣಿಗೆ ರಾಚುವಂತಿತ್ತು. ನೆಲಮಹಡಿ, ಮೊದಲ ಮಹಡಿಯಲ್ಲಿನ ಕೊಠಡಿಗಳು, ವಿವಿಧ ಮೂಲಸೌಕರ್ಯ ಮುಂತಾದವುಗಳನ್ನು ಪರಿಶೀಲಿಸಿದ ಶಾಸಕರು ಸ್ಥಳದಲ್ಲಿದ್ದ ಎನ್‌ಸಿಸಿ ಸುಪರ್‌ವೈಜರ್ ಸುನೀಲ ಅವರನ್ನು ಕರೆದು ಎಲ್ಲೆಲ್ಲಿ ಕಳಪೆ ಕೆಲಸ ನಡೆದಿದೆಯೋ ಅದೆಲ್ಲವನ್ನು ಗುಣಮಟ್ಟದಲ್ಲಿ ನಿರ್ಮಿಸಲು ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸುವಂತೆ ಸಲಹೆ ನೀಡಿದರು. ಈ ಕಟ್ಟಡಕ್ಕೆ ಸ್ವಂತ ನೀರಿನ ಮೂಲ ದೊರಕಿಸಿಕೊಡುವಂತೆ ಜೊತೆಗಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಮಾಜಿ ಸದಸ್ಯರಾದ ಮನೋಹರ ತುಪ್ಪದ, ರಾಜು ಹೊನ್ನುಟಗಿ, ಬಿಜೆಪಿ ಧುರೀಣ ಬಸವರಾಜ ಗುಳಬಾಳ, ಶಿಕ್ಷಕ ಸಂಗಮೇಶ ಸಜ್ಜನ, ನಾಗರಾಜ ಕನ್ನೊಳ್ಳಿ, ಬಸನಗೌಡ ಪಾಟೀಲ ನಡಹಳ್ಳಿ, ಪಿಎಸೈ ಮಲ್ಲಪ್ಪ ಮಡ್ಡಿ ಮತ್ತಿತರರು ಇದ್ದರು.