Advertisement

Muddebihal: ಮಧ್ಯರಾತ್ರಿ ಅಬಕಾರಿ ಪೊಲೀಸರಿಗೆ ಗ್ರಾಮಸ್ಥರಿಂದ ಘೇರಾವ್; ಅಕ್ರಮ ಮದ್ಯ ವಶಕ್ಕೆ

12:44 PM Apr 21, 2024 | Kavyashree |

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ದಂಡೆಯಲ್ಲಿರುವ ಬಂಗಾರಗುಂಡ ಗ್ರಾಮದಲ್ಲಿ ಅಕ್ರಮ ಮದ್ಯ, ಸಾರಾಯಿ ಮಾರಾಟ ತಡೆಯುವಲ್ಲಿ ವಿಫಲರಾಗಿರುವ ಅಬಕಾರಿ ಪೊಲೀಸರು ಮಧ್ಯರಾತ್ರಿ ಗ್ರಾಮಕ್ಕೆ ಆಗಮಿಸಿದ ವೇಳೆ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಡೆದಿದೆ.

Advertisement

ಇದರಿಂದ ವಿಚಲಿತರಾದ ಅಬಕಾರಿ ಪೊಲೀಸರು ಗ್ರಾಮಸ್ಥರ ಒತ್ತಾಯದ ಮೇರೆಗೆ ಅಕ್ರಮವಾಗಿ ಮದ್ಯ ಸಂಗ್ರಹಿಸಿದ್ದ ಹೊಟೇಲ್, ಮನೆಗಳ ಮೇಲೆ ದಾಳಿ ನಡೆಸಿದಾಗ ಮದ್ಯದ ಪ್ಯಾಕೇಟ್‌ ಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next