Advertisement

Muddebihal: ಪೋಕ್ಸೋ ಪ್ರಕರಣ; ನೇಣಿಗೆ ಶರಣಾದ ಅಪ್ರಾಪ್ತೆ

02:41 PM Dec 03, 2024 | Poornashri K |

ಮುದ್ದೇಬಿಹಾಳ: ತಾಲೂಕಿನ ಪಟ್ಟಣ ಪ್ರದೇಶವೊಂದರಲ್ಲಿ ಅಪ್ರಾಪ್ತೆ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

Advertisement

ಇತ್ತೀಚೆಗೆ 10 ನೇ ತರಗತಿಯ ವಿದ್ಯಾರ್ಥಿನಿಗೆ ಯುವಕನೊಬ್ಬ ಬಲವಂತವಾಗಿ ತಾಳಿ ಕಟ್ಟಿದ್ದ ಘಟನೆಗೆ ಸಂಬಂಧಿಸಿ ದಾಖಲಾಗಿದ್ದ ಪೋಕ್ಸೊ ಪ್ರಕರಣದ ಪಿರ್ಯಾದಿ 15 ವರ್ಷದ ಬಾಲಕಿ ಮೃತ ದುರ್ದೈವಿ.

ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಧಾವಿಸಿದ್ದಾರೆ. ಅವರ ಮನೆಯ ಎದುರು ಜನಸಾಗರ ಸೇರಿದ್ದು, ಬಾಲಕಿಯ ಆತ್ಮಹತ್ಯೆಗೆ ಕಾರಣರಾಗಿರುವ ಉಡಾಳ ಯುವಕರ ತಂಡವನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಯಾಗಿಸಬೇಕು ಎನ್ನುವ ಒತ್ತಾಯ, ಆಕ್ರೋಶ ಜನರಿಂದ ಕೇಳಿ ಬರುತ್ತಿದೆ.

ಅದೇ ಪಟ್ಟಣದಲ್ಲಿ ಸಪ್ಟೆಂಬರ್ 1 ರಂದು ಮತ್ತು ನವೆಂಬರ್ 24 ರಂದು ತಾಳಿ ಕಟ್ಟಿದ ಎರಡು ಘಟನೆ ನಡೆದಿದ್ದವು. ನೇಣಿಗೆ ಶರಣಾದ ಬಾಲಕಿ ಸಪ್ಟೆಂಬರ್ 1 ರಂದು ನಡೆದಿದ್ದ ಘಟನೆಯ ಪಿರ್ಯಾದಿದಾರಳಾಗಿದ್ದಾಳೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next