Advertisement

Muddebihal;ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ: ಪ್ರಿಯತಮ ರಾಹುಲ್ ಸಾವು

06:53 PM Jun 09, 2024 | Team Udayavani |

ಮುದ್ದೇಬಿಹಾಳ: ಪ್ರೇಮ ಪ್ರಕರಣದಲ್ಲಿ ಇಲ್ಲಿನ ಪುರಸಭೆ ಮಾಜಿ ಸದಸ್ಯ ರಾವುಜಪ್ಪ ಮದರಿ ಅವರ ಮನೆಯಲ್ಲಿ ಮೇ 26 ರಂದು ಸಂಜೆ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿದ ಘಟನೆಯಲ್ಲಿ ಶೇ 70 ರಷ್ಟು ಬೆಂದು ಹೋಗಿದ್ದ ಪ್ರಿಯಕರ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ (25) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ರವಿವಾರ ಸಂಜೆ 4 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾನೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ ಖಚಿತಪಡಿಸಿದ್ದಾರೆ.

Advertisement

12-13 ದಿನಗಳ‌ ನಂತರ ರಾಹುಲ್ ಚಿಕಿತ್ಸೆಗೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ರಾಹುಲ್ ಮದರಿ ಕುಟುಂಬದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಎರಡು ಮೂರು ವರ್ಷಗಳ ನಂತರ ಪ್ರೀತಿ ಮುರಿದು ಬಿದ್ದು ಯುವತಿ ರಾಹುಲನಿಂದ ದೂರವಾಗಿದ್ದಳು. ಇದನ್ನು ಸಹಿಸದ ರಾಹುಲ್ ಮೇ 26 ರಂದು ಯುವತಿಯ ಮನೆಗೆ ಏಕಾಂಗಿಯಾಗಿ ಬಂದಿದ್ದಾಗ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು.

ಘಟನೆಯಲ್ಲಿ ಯುವತಿಯ ಚಿಕ್ಕಪ್ಪ ಮುತ್ತು ಮದರಿ, ಕೆಲಸಗಾರ ವಾಲಿಕಾರ ಕೂಡ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವತಿಯ ಚಿಕ್ಕಮ್ಮ (ಮುತ್ತು ಅವರ ಪತ್ನಿ) ಸೀಮಾ ಸಕಾಲಿಕ ಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಿಯಕರ ಮತ್ತು ಪ್ರಿಯತಮೆ ಎರಡೂ ಕಡೆಯವರಿಂದ ದೂರು, ಪ್ರತಿ ದೂರು ದಾಖಲಾಗಿದ್ದು ಯುವತಿಯ ತಂದೆಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next