Advertisement

Muddebihal ಬರೋಬ್ಬರಿ 5.10 ಲಕ್ಷ ಕ್ಕೆ ಮಾರಾಟವಾದ ಖಿಲಾರಿ ಹೋರಿ ‘ಸೋನ್ಯಾ’!

06:55 PM Oct 12, 2023 | Team Udayavani |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಚೊಂಡಿ ಗ್ರಾಮದ ಖಿಲಾರಿ ತಳಿಯ ಜವಾರಿ ಹೋರಿಯೊಂದು ಬರೋಬ್ಬರಿ 5.10 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ಈ ಭಾಗದಲ್ಲಿ ದಾಖಲೆ ನಿರ್ಮಿಸಿದೆ.

Advertisement

ಸಾಮಾನ್ಯವಾಗಿ ಕಟ್ಟುಮಸ್ತಾದ ಒಂದು ಹೋರಿ ಕನಿಷ್ಠ 40 ಸಾವಿರದಿಂದ ಗರಿಷ್ಠ 1 ಲಕ್ಷದವರೆಗಿನ ಬೆಲೆಗೆ ಮಾರಾಟವಾಗುತ್ತದೆ. ಅಬ್ಬಬ್ಬಾ ಅಂದ್ರೆ 1.50 ಲಕ್ಷ ರೂಪಾಯಿಗೆ ರೈತರು ಮಾರಾಟ ಮಾಡುತ್ತಾರೆ. ಆದರೆ ಚೊಂಡಿಯ ಹೋರಿ ಮಾತ್ರ 5.10 ಲಕ್ಷಕ್ಕೆ ಮಾರಾಟವಾಗುವ ಮೂಲಕ ಈ ಭಾಗದ ಜನರ ಗಮನ ಸೆಳೆದಿದೆ. ತಾಲೂಕಿನ ಚೊಂಡಿ ಗ್ರಾಮದ ಶಿವಪ್ಪ ಕುಂಟೋಜಿ ಅವರು ಮೂಲ ಕಸುಬು ವ್ಯವಸಾಯ ಮಾಡಿಕೊಂಡಿದ್ದಾರೆ.

ಮೊದಲಿನಿಂದಲೂ ಚಿಕ್ಕ ಚಿಕ್ಕ ವಿವಿಧ ತಳಿಯ ಹೋರಿ ಮರಿಗಳನ್ನು ತಂದು ಅವುಗಳನ್ನು ಕಟುಮಸ್ತಾಗಿ ಬೆಳೆಸಿ ಮಾರಾಟ ಮಾಡುತ್ತಲೇ ಬಂದಿದ್ದಾರೆ. ಅದರಂತೆ ಈ ಹೋರಿಯನ್ನು ಮಹಾರಾಷ್ಟ್ರದಲ್ಲಿ ಹೋರಿಗೆ 3 ವರ್ಷ ಇರುವಾಗ ತರಲಾಗಿತ್ತು. ಈಗ ಈ ಹೋರಿ 6 ವರ್ಷದಾಗಿದೆ. ಈ ಹಿಂದೆಯೂ ಸಹ ಜವಾರಿ ಥಳಿಯ ಹೋರಿಗಳನ್ನ 2 ಲಕ್ಷದ ವರೆಗೂ ಮಾರಾಟ ಮಾಡಿದ್ದೇವೆಂದು ಹೋರಿ ಕುಟುಂಬದ ಶ್ರೀಶೈಲ್ ಕುಂಟೋಜಿ ಹೇಳಿದರು. ಆದ್ರೆ ಈ ಬಾರಿ ಮಾತ್ರ ಶಿವಪ್ಪ ಕುಂಟೋಜಿ ಕಳೆದ ಮೂರು ವರ್ಷಗಳಿಂದ ಬೆಳೆಸಿದ ಜವಾರಿ ಹೋರಿಯನ್ನ ಬರೋಬ್ಬರಿ 5.10 ಲಕ್ಷ ರೂಪಾಯಿ ನೀಡಿ ಮಹಾರಾಷ್ಟ್ರದ ಆಲಿಬಾಗದ ರೈತ ಕೊಂಡುಕೊಂಡಿರುವುದು ವಿಶೇಷವಾಗಿದೆ.

ಇದನ್ನೂ ಓದಿ: Panaji: ಪಾಳು ಬಿದ್ದ ಕೃಷಿ ಭೂಮಿಯನ್ನು ಸಾಗುವಳಿ ಮಾಡುವಂತೆ ಕರೆ ನೀಡಿದ ಗೋವಾ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next