Advertisement
ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು ಅಲ್ಲಿನ ಪರಿಸರ ಗಮನಿಸಿ, ಕೆರೆಯಂಗಳ ಬಹಳ ಗಲೀಜಾಗಿದ್ದು ಕೂಡಲಾಗದಷ್ಟು ಕಸಕಡ್ಡಿ, ಮುಳ್ಳುಕಂಟಿಗಳಿಂದ ತುಂಬಿದೆ. ಇದೇ ಕಾರಣಕ್ಕೆ ಇಲ್ಲಿ ಕುಳಿತುಕೊಳ್ಳಲು ಅಸಹ್ಯಕರ ವಾತಾವರಣ ಇದೆ. ನಾವೆಲ್ಲ ಸೇರಿ ಕೆಲಸ ಮಾಡಿದಲ್ಲಿ ತಿಂಗಳ ಅವ ಧಿಯಲ್ಲಿ ಸ್ವತ್ಛಗೊಳಿಸುವುದು ಸಾಧ್ಯವಿದೆ.
Related Articles
Advertisement
ಕೆರೆಯನ್ನು ಸುತ್ತು ಹಾಕಿದ ಸಂಘ ಸಂಸ್ಥೆಗಳ ಮುಖಂಡರು ಕೆರೆ ದಂಡೆಗುಂಟ ಇಟ್ಟಿದ್ದ ಉರುವಲು ಕಟ್ಟಿಗೆಗಳನ್ನು ತೆಗೆಯುವಂತೆ, ಕೆರೆಯಂಗಳದಲ್ಲಿ ಶೌಚ ಮಾಡಿ ಗಲೀಜು ಮಾಡದಂತೆ ಅಕ್ಕಪಕ್ಕದ ಸಾರ್ವಜನಿಕರಿಗೆ, ಅಂಗಡಿಕಾರರಿಗೆ, ನಿವಾಸಿಗಳಿಗೆ ಮನವಿ ಮಾಡಿದರು.
ಅಭಿಯಾನದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ, ಸಂಚಾಲಕ ಮಹಾಬಲೇಶ ಗಡೇದ, ಕಾರ್ಯದರ್ಶಿ ರಾಜಶೇಖರ ಕಲ್ಯಾಣಮಠ, ನಿಕಟಪೂರ್ವ ಅಧ್ಯಕ್ಷ ನಾಗಭೂಷಣ ನಾವದಗಿ, ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ವಚನಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಎಸ್.ಎಸ್. ಕರಡ್ಡಿ, ಜೆಸಿ ಸಂಸ್ಥೆ ಅಧ್ಯಕ್ಷ ರವಿ ಗೂಳಿ, ಕಾರ್ಯದರ್ಶಿ ಅಪ್ಪು ಪೂಜಾರಿ, ಲಯನ್ಸ್ ಕ್ಲಬ್ ಅಧ್ಯಕ್ಷ ರಾವಸಾಹೇಬ ದೇಸಾಯಿ, ರಂಗತರಂಗ ಸಂಸ್ಥೆ ಸಂಚಾಲಕ ನೇತಾಜಿ ನಲವಡೆ, ಸೈಕಲ್ ಬಳಕೆದಾರರ ಬಳಗದ ಅಧ್ಯಕ್ಷ ವಿಜಯಮಹಾಂತೇಶ ಬಂಗಾರಗುಂಡ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಕ್ವಾರಿ, ವೈದ್ಯರ ಸಂಘದ ಡಾ| ವೀರೇಶ ಇಟಗಿ, ಹಿರಿಯರಾದ ಎಸ್.ಬಿ. ಬಂಗಾರಿ, ಬಾಪುಗೌಡ ಪಾಟೀಲ, ಕೆ.ಆರ್.ಕಾಮಟೆ, ಬಿ.ಎಸ್.ಮೇಟಿ, ಬಸವರಾಜ ಲಿಂಗದಳ್ಳಿ, ವಿಶ್ವನಾಥ ನಾಗಠಾಣ, ಪತ್ರಕರ್ತರಾದ ಲಾಡ್ಲೇಮಶ್ಯಾಕ್ ನದಾಫ, ಬಸವರಾಜ ಹುಲಗಣ್ಣಿ, ಅಮರೇಶ ಗೂಳಿ, ಸುರೇಶ ಕಲಾಲ, ಕಿರಣ ಕಡಿ, ಪ್ರಭುರಾಜ ಕಲಬುರ್ಗಿ, ವಿಕ್ರಮ ಓಸ್ವಾಲ, ಗೋವಿಂದರೆಡ್ಡಿ ಮೆದಿಕಿನಾಳ, ಶ್ರೀನಿವಾಸ ಇಲ್ಲೂರ, ಡಾ| ವಿಜಯಕುಮಾರ ಗೂಳಿ, ಚಂದ್ರಶೇಖರ ಶಿವಯೋಗಿಮಠ, ಮಹೇಂದ್ರ ಓಸ್ವಾಲ್, ವಿರೂಪಾಕ್ಷಿ ಪತ್ತಾರ, ಬಸವರಾಜ ರಾಮೋಡಗಿ, ಲೋಹಿತ್ ನಾಲತವಾಡ, ನಾರಾಯಣಿ, ಬಸು ಚಲವಾದಿ, ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ, ಮಹಾಂತೇಶ ಬಸನಗೌಡ್ರ, ಆನಂದ ಮಾಳಜಿ, ಕ್ರಿಯೇಟಿವ್ ಫ್ರೆಂಡ್ಸ, ಮಹಾಮನೆ ಬಳಗದ ನೂರಾರು ಜನರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದರು. ಎಲ್‌ಐಸಿ ಅಧಿಕಾರಿ ಶ್ರೀನಿವಾಸರಾವ್ ಕುಲಕರ್ಣಿ ಪರಿಸರಗೀತೆ ಹಾಡಿ ಎಲ್ಲರನ್ನೂ ಕ್ರಿಯಾಶೀಲಗೊಳಿಸಿದರು.