Advertisement

ಮಾನವೀಯತೆ ಬೆಳೆಸಿಕೊಳ್ಳಲು ಸಲಹೆ

10:33 AM Jun 23, 2019 | Naveen |

ಮುದ್ದೇಬಿಹಾಳ: ಜಗತ್ತಿನಲ್ಲಿ ಮಾನವೀಯತೆಗೆ ಕೊರತೆ ಇಲ್ಲ. ಆದರೆ ಆಧುನಿಕ ಜನರಲ್ಲಿ ಮಾನವೀಯತೆಗೆ ಮುಸುಕು ಕವಿದಿದೆ. ಈ ಮುಸುಕನ್ನು ಸರಿಸುವ ಕೆಲಸ ವನ್ನು ಶಿಕ್ಷಣ ಸಂಸ್ಥೆಗಳು, ಮಠಾಧೀಶರು ಮಾಡಬೇಕು ಎಂದು ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಹೇಳಿದರು.

Advertisement

ಮುದ್ದೇಬಿಹಾಳ ಪಟ್ಟಣದ ಹೊರ ವಲಯದಲ್ಲಿರುವ ಕುಂಟೋಜಿ ಗ್ರಾಮ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾದ ಬೆಸ್ಟ್‌ ಘನಮಠೇಶ್ವರ ಪಬ್ಲಿಕ್‌ ಶಾಲೆ ಕಟ್ಟಡ ಲೋಕಾರ್ಪಣೆ, ಸ್ಮಾರ್ಟ್‌ ಕ್ಲಾಸ್‌ ಉದ್ಘಾಟನೆ ಮತ್ತು ತಾಲೂಕಿನ ಸಜ್ಜನ, ಗಾಣಿಗ ಸಮಾಜದ ಎಸ್ಸೆಸ್ಸೆಲ್ಸಿ , ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಂಯುಕ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಧಕರೆಲ್ಲ ಬಡತನದಲ್ಲೇ ಹುಟ್ಟಿ ಬೆಳೆದವರು. ಇವರಲ್ಲಿ ಪ್ರಯತ್ನಶೀಲತೆ ಹೆಚ್ಚಿರುತ್ತದೆ. ಮಾತೃಭಾಷೆಗೆ ನಾವೆಲ್ಲ ಹೆಚ್ಚು ಒತ್ತು ಕೊಡಬೇಕು. ಇದರೊಂದಿಗೆ ಉಳಿದ ಭಾಷೆಗಳಿಗೂ ಮಹತ್ವ ಕೊಡಬೇಕು. ಮಾತೃಭಾಷೆ ಊಟವಾದರೆ, ಉಳಿದ ಭಾಷೆ ಉಪ್ಪಿನಕಾಯಿಯಂತಿರಬೇಕು. ಉಳಿದ ಭಾಷೆಗಳೇ ಉಟದಂತಾಗಬಾರದು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ತರಗತಿ ಪ್ರಾರಂಭಿಸುವ ಮೂಲಕ ಈಗಿನ ಸರ್ಕಾರ ಖಾಸಗಿ ಶಾಲೆಗಳಿಂದ ಪಾಠ ಕಲಿತಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ತರಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌.ಎಸ್‌. ಪಾಟೀಲ ಕೂಚಬಾಳ, ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ನೇತೃತ್ವ ವಹಿಸಿದ್ದ ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಮಹಾಸ್ವಾಮಿಗಳು ಮಾತನಾಡಿದರು.

ಉತ್ನಾಳದ ಶಿವಪುತ್ರಯ್ಯ ಮಹಾಸ್ವಾಮಿಗಳು, ಕೆಸರಟ್ಟಿಯ ಸೋಮಲಿಂಗ ಮಹಾರಾಜರು ಸಾನ್ನಿಧ್ಯ, ಮಾಜಿ ಶಾಸಕ ಎಂ.ಎಂ. ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಉಮೇಶ ಕೋಳಕೂರ, ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ತಹಸೀಲ್ದಾರ್‌ ನಿಂಗಪ್ಪ ಬಿರಾದಾರ, ಬಿಇಒ ಎಸ್‌.ಡಿ. ಗಾಂಜಿ, ಇಳಕಲ್ ಡೈಟ್ ಹಿರಿಯ ಉಪನ್ಯಾಸಕ ಎಂ.ಎಂ. ಬೆಳಗಲ್ಲ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಂಗಮೇಶ ಹೊಲ್ದೂರ, ಗಣ್ಯರಾದ ಡಾ| ಬಸವರಾಜ ಅಸ್ಕಿ, ಮಲಕೇಂದ್ರಗೌಡ ಪಾಟೀಲ, ಸಿ.ಪಿ. ಸಜ್ಜನ, ವಾಸುದೇವ ಹೆಬಸೂರ, ಬಸವರಾಜ ಯಂಕಂಚಿ, ಪ್ರಭುಗೌಡ ಪಾಟೀಲ ಅಸ್ಕಿ, ಎಸ್‌.ಎಂ. ದೇಗಿನಾಳ, ಎಸ್‌.ಬಿ. ಚಲವಾದಿ, ಬಸವರಾಜ ಚಲವಾದಿ, ಸಂಗನಗೌಡ ಪಾಟೀಲ, ಬಿ.ಜಿ. ಸಜ್ಜನ, ಬಸವಂತ್ರಾಯ ಸಜ್ಜನ, ಬಸವರಾಜ ಅಸ್ಕಿ, ಶರಣಗೌಡ ಬಿರಾದಾರ, ರಮೇಶಗೌಡ ವಡ್ಡೊಡಗಿ, ಕಾಶೀನಾಥ ಕೊಣ್ಣೂರ, ರಾವತ್‌ ದೇಸಾಯಿ, ಮಡಿವಾಳಪ್ಪ ಅಂಬಳನೂರ, ಬಸವಂತ್ರಾಯ ದೇಸಾಯಿ, ಸಿಆರ್‌ಸಿ ದಮ್ಮೂರಮಠ, ಶಾಲೆಯ ಮುಖ್ಯಾಧ್ಯಾಪಕಿಯರಾದ ರೇಖಾ ಬಾರಕೇರ, ದೀಪಾ ದೇಸಾಯಿ ವೇದಿಕೆಯಲ್ಲಿದ್ದರು.

Advertisement

ಸಂಸ್ಥೆ ಅಧ್ಯಕ್ಷ ಎಸ್‌.ಎಂ. ಸಜ್ಜನ ಮತ್ತು ಮುಖ್ಯಾಧ್ಯಾಪಕಿ ಅನಿತಾ ಸಜ್ಜನ ದಂಪತಿಯನ್ನು ಬೆಕಿನಾಳ, ಕಲಕೇರಿ, ಬೂದಿಹಾಳ ಗ್ರಾಮಸ್ಥರು, ತಾಳಿಕೋಟೆ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿ , ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ಸಜ್ಜನ, ಗಾಣಿಗ ಸಮಾಜದ ಹಾಗೂ ಘನಮೇಶ್ವರ ಸಮೂಹ ಶಿಕ್ಷಣ ಸಂಸ್ಥೆ ಅಡಿ ನಡೆಯುವ ವಿವಿಧ ತರಗತಿಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಘನಮಠೇಶ್ವರ ಪಬ್ಲಿಕ್‌ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಂಸ್ಥೆ ಅಧ್ಯಕ್ಷ ಎಸ್‌.ಎಂ. ಸಜ್ಜನ ಸ್ವಾಗತಿಸಿದರು. ಎಸ್‌.ಎಂ. ಗಾಣಿಗೇರ ನಿರೂಪಿಸಿದರು. ಎಂ.ಎಸ್‌. ಮಿರಜಕರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next