Advertisement

ಜವಾಬ್ದಾರಿ ಅರಿಯಲಿ ಮಾಧ್ಯಮ: ಹೆಗ್ಡೆ

10:56 AM Aug 24, 2019 | Team Udayavani |

ಮುದ್ದೇಬಿಹಾಳ: ದೇಶದ ಸಂವಿಧಾನದ ಮೂರು ಅಂಗಗಳ ಜೊತೆಗೆ ನಾಲ್ಕನೇ ಅಂಗ ಎನ್ನಿಸಿಕೊಂಡಿರುವ ಮಾಧ್ಯಮವೂ ಕಲುಷಿತಗೊಂಡಿದೆ ಎನ್ನುವುದಕ್ಕೆ ವಿಷಾದಿಸುತ್ತೇನೆ ಎಂದು ಲೋಕಾಯುಕ್ತ ನಿವೃತ್ತ ನ್ಯಾ| ಸಂತೋಷ ಹೆಗ್ಡೆ ಹೇಳಿದರು.

Advertisement

ಇಲ್ಲಿನ ಹುಡ್ಕೋದಲ್ಲಿರುವ ಟಾಪ್‌ ಇನ್‌ ಟೌನ್‌ ಕನ್ವೆನ್ಷನ್‌ ಹಾಲ್ನಲ್ಲಿ ಶುಕ್ರವಾರ ಕೆಜೆಯೂ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸಕ್ತ ರಾಜಕೀಯ ಬೆಳವಣಿಗೆ ಶಾಸಕಾಂಗದಲ್ಲಿ ಏನು ನಡೆಯುತ್ತಿದೆ ಎನುವುದಕ್ಕೆ ಸಾಕ್ಷಿಯಾಗಿದೆ. ಸರಕಾರ ಹುದ್ದೆಗಳಿಗೆ ಲಂಚ ನೀಡಿ ಬಂದವನು ಬೇರೊಬ್ಬರಿಂದ ಲಂಚ ಪಡೆಯುವ ಪ್ರವೃತ್ತಿ ಬೆಳಿಸಿಕೊಳ್ಳುತ್ತಾನೆ. ಇಂತಹ ಸ್ಥಿತಿ ಮಾಧ್ಯದಲ್ಲಿಯೂ ಪೇಯ್ಡ ನ್ಯೂಸ್‌ಗಳ ಮೂಲಕ ನಡೆಯುತ್ತಿವೆ. ಬ್ಲ್ಯಾಕ್‌ವೆುೕಲ್ ಪದ್ಧತಿ ನಡೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಮಾತ್ರ ಮುಂದೆ ಇವುಗಳ ಮೇಲೆ ವಿಶ್ವಾಸ ಉಳಿದುಕೊಳ್ಳುತ್ತದೆ ಎಂದು ಹೇಳಿದರು.

ಪೇಯ್ಡ ನ್ಯೂಸ್‌, ಬ್ಲ್ಯಾಕ್‌ವೆುೕಲ್ ಹಾವಳಿಯನ್ನು ಮಾಧ್ಯಮ ಬಹಳ ಗಂಭೀರವಾಗಿ ಪರಿಗಣಿಸಬೇಕು. ಜನರು ತನ್ನಲ್ಲಿ ಇಟ್ಟ ಅಭಿಮಾನ, ಗೌರವ, ನಂಬಿಕೆಗಳಿಗೆ ಇಂಥವುಗಳಿಂದ ಧಕ್ಕೆ ಬರದಂತೆ ದಿಟ್ಟ ನಿರ್ಣಯ ತೆಗೆದುಕೊಳ್ಳಬೇಕು. ಸತ್ಯವನ್ನು ಒಪ್ಪಲೇಬೇಕು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು. ಮಾಧ್ಯಮದವರಿಗೆ ಜವಾಬ್ದಾರಿ ಇರಬೇಕು. ಪ್ರಶಸ್ತಿಗಳು ಅದನ್ನು ಪಡೆಯುವಂಥ ಉತ್ತಮ ವ್ಯಕ್ತಿಗಳ ಕಾರ್ಯಕ್ಕೆ ಮೀಸಲಾಗಿರಬೇಕೆ ಹೊರತು ಬೇರೆ ಕಾರಣಕ್ಕೆ ಪ್ರಶಸ್ತಿ ಕೊಡಬಾರದು ಎಂದರು.

ಒಳ್ಳೆಯವರು, ಜನರ ಪ್ರೀತಿಗೆ ಪಾತ್ರರಾದವರನ್ನು ಗುರುತಿಸಿ ಸನ್ಮಾನಿಸಿದರೆ ಅದು ಸನ್ಮಾನಿಸಿದ ಸಂಸ್ಥೆಯ ಗೌರವ ಎತ್ತರ ಮಟ್ಟಕ್ಕೆ ತಗೊಂಡು ಹೋಗುತ್ತದೆ ಎಂದು ಕಿವಿಮಾತು ಹೇಳಿದರು. ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಅರವಿಂದ ಜಮಖಂಡಿ, ಪ್ರಶಸ್ತಿ ಪುರಸ್ಕೃತರಾದ ಜಿ.ಎಸ್‌. ಕಮತರ, ಸುಕನ್ಯಾ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಮಂಗಳಾದೇವಿ ಬಿರಾದಾರ, ಎಂ.ಬಿ. ನಾವದಗಿ, ಮಲ್ಲಿಕಾರ್ಜುನ ಮದರಿ, ಡಾ| ಬಸವರಾಜ ಅಸ್ಕಿ, ಮಲ್ಲನಗೌಡ ಬಿರಾದಾರ, ಎಸ್‌.ಬಿ. ಚಲವಾದಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್. ಕ್ವಾರಿ, ಪವನ್‌ ಕುಲಕರ್ಣಿ, ಡಿ.ಸಿ. ಪಾಟೀಲ, ಬಿಇಒ ಎಸ್‌.ಡಿ. ಗಾಂಜಿ, ಮಲಕೇಂದ್ರಗೌಡ ಪಾಟೀಲ, ಜಿ.ಟಿ. ಘೋರ್ಪಡೆ, ಗಿರೀಶಗೌಡ ಪಾಟೀಲ, ಬಿ.ನಾರಾಯಣ, ಅಬ್ದುಲ್ಹಕೀಮ್‌ ಇನ್ನಿತರರು ವೇದಿಕೆಯಲ್ಲಿದ್ದರು. ಸಂಗಮೇಶ ಶಿವಣಗಿ ಪ್ರಾರ್ಥಿಸಿದರು. ಪುಂಡಲಿಕ ಮುರಾಳ ಸ್ವಾಗತಿಸಿದರು. ನಾರಾಯಣ ಮಾಯಾಚಾರಿ ಪ್ರಾಸ್ತಾವಿಕ ಮಾತನಾಡಿದರು. ಜಿ.ಎನ್‌. ಹೂಗಾರ ಮತ್ತು ಶ್ರೀಶೈಲ ಹೂಗಾರ ನಿರೂಪಿಸಿದರು. ಮಂಜುನಾಥಸ್ವಾಮಿ ಕುಂದರಗಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next