Advertisement
ಅಂತೂ ಇಂತೂ ಶ್ರೀನಾಥನ ಮದುವೆ ಮಾಡಿ ಮುಗಿಸೋ ಹೊತ್ತಿಗೆ, ಅವರ ಸೋದರ ಮಾವ- ಅತ್ತೆ ಹೈರಾಣಾಗಿ ಹೋದರು. ಮದುವೆಗೆ ಹಳ್ಳಿಯಿಂದ ಬಂದ ಅಮ್ಮ ತಲೆ ಮೇಲೆ ಅಕ್ಷತೆ ಕಾಳು ಹಾಕಿ ಮತ್ತೆ ಗೂಡು ಸೇರಿಕೊಂಡಳು. ಇನ್ನು ಮುದ್ದಣ್ಣನ ಸರದಿ. ಅವನೇನೋ ಹೆಣ್ಣು ನೋಡೋ ಕಾರ್ಯಕ್ರಮಕ್ಕೆ ಸಡಗರದಿಂದಲೇ ಸಿದ್ಧನಾದ. ತಾನೂ ಹತ್ತು ಹಲವು ಕನ್ಯೆಯರ ವಧೂ ಪರೀಕ್ಷೆ ಮಾಡಿ, ಉಪ್ಪಿಟ್ಟು- ಸಜ್ಜಿಗೆ ಸವಿದು, ಬಜ್ಜಿ, ಮಂಡಕ್ಕಿ ಉಸುಲಿ ಮೆದ್ದು, ಕೆಲವು ಹೆಣ್ಣುಗಳನ್ನು “ಒÇÉೆ’ ಎಂದು, ಮತ್ತೆ ಕೆಲವರಿಗೆ “ಆಮೇಲೆ ವಿಷಯ ತಿಳಿಸುತ್ತೇವೆ’ ಎಂಬ ಸಂದೇಶ ಸೋದರಮಾವ-ಅತ್ತೆಯರ ಮುಖೇನ ರವಾನಿಸಿ, ಕಡೆಗೆ ಕನ್ಯಾಪಿತೃಗಳು ಇವನನ್ನು, ಇವನ ಸರ್ಕಾರಿ ನೌಕರಿಯನ್ನು ಕಂಡು ಸುಪ್ರೀತ- ಸುಪ್ರಸನ್ನರಾಗಿ “ನಮ್ಮ ಮಗಳ ಕನ್ಯಾಸೆರೆ ಬಿಡಿಸಿ’ ಎಂದು ಇವನಿಗೆ ದುಂಬಾಲು ಬಿದ್ದಮೇಲೆ ತನ್ನ ಮನ ಗೆದ್ದ (ಕದ್ದ) ಕನ್ಯೆಯನ್ನು ವರಿಸಲು “ಹುØಂ’ ಎನ್ನಬೇಕು ಅಂತ ಮನಸ್ಸಿನÇÉೇ ಮಂಡಿಗೆ ತಿನ್ನುತ್ತಿದ್ದ. ಆದರೆ ಇದ್ಯಾವುದೂ ಸಾಕಾರವಾಗುವ ಮೊದಲೇ ಮುದ್ದಣ್ಣ ಬಿಕರಿಯಾಗಿಬಿಟ್ಟಿದ್ದ !
Related Articles
Advertisement
ಅಂತೂ ಎರಡೂ ಕಡೆಯಿಂದ ಹೇಳುವುದಕ್ಕೂ ಕೇಳುವುದಕ್ಕೂ ಹೆಚ್ಚೇನೂ ಇಲ್ಲದ ಕಾರಣ ಮುದ್ದಣ್ಣ-ಮನೋರಮೆಯರ ಮದುವೆ ಲಾಡು ಊಟದಲ್ಲಿ ಸಂಪನ್ನವಾಯಿತು!
ಮುದ್ದಣ್ಣ ಭೋಜನ ಪ್ರಿಯ. ಶಾಲಾ – ಕಾಲೇಜಿನ ದಿನದಿಂದಲೂ ಅಮ್ಮ ಹಳ್ಳಿಯಲ್ಲಿದ್ದರಿಂದ ಅವನು, ಅವನಣ್ಣ ಕೂಡಿ ತಾವೇ ಕೂಳು ಬೇಯಿಸಿಕೊಳ್ಳುತ್ತಿದ್ದರಷ್ಟೆ? ಹೀಗಾಗಿ, ಮದುವೆ ನಂತರ ಹೆಂಡತಿ ಕೈಯಿಂದ ರಸಗವಳ ಕತ್ತರಿಸುವ ಕನಸು ಕಟ್ಟಿದ್ದ. ಒಂದೆರಡು ತಿಂಗಳು ಹೊರಗೆ ತಿರುಗಾಟ, ಬಂಧು -ಮಿತ್ರರ ಔತಣ ಕೂಟ ಇತ್ಯಾದಿಯಲ್ಲಿ ಕಳೆದು ಇಬ್ಬರೂ ಗ್ರೌಂಡ್ ರಿಯಾಲಿಟಿಗೆ ಬಂದರು. ಇಂಥದೇ ಒಂದು ರಿಯಾಲಿಟಿ ಚೆಕ್‌ನಲ್ಲಿ ಮುದ್ದಣ್ಣನಿಗೆ ಒಂದು ಡೈರಿ ಕಣ್ಣಿಗೆ ಬಿತ್ತು. ಸುಮ್ಮನೆ ಮಗುಚಿ ನೋಡಿದರೆ ಪುಟದ ಪ್ರಾರಂಭದಲ್ಲಿ “ಶ್ರೀ’ ಎಂದು ಪ್ರಾರಂಭಿಸಿ ಸಾರಿನ ಪುಡಿ ಮಾಡುವ ವಿಧಾನ ಎಂಬ ತಲೆಬರಹದಡಿ ವಿವರಗಳು ಮನೋರಮೆಯ ಕೈಬರಹದಲ್ಲಿ ಕಂಡಿತು. ಬಾಣಲೆಯಲ್ಲಿ ಸಾಸಿವೆ ಚಟಚಟ ಅನ್ನೋವರೆಗೂ, ಮೆಣಸು ಪಟಪಟ ಅನ್ನೊವರೆಗೂ ಹುರಿದು (ಒಂದೊಂದು ಸಾಸಿವೆ, ಮೆಣಸಿನ ಕಾಳು ಬಿಳಿಯ ಬಣ್ಣಕ್ಕೆ ತಿರುಗಿ ಪಟ್ ಪಟ್ ಅಂತ ಬಾಣಲೆಯಿಂದ ಹಾರತೊಡಗುತ್ತೆ. ಆಗ ಹದವಾಗಿ ಹುರಿದಿದೆ ಎಂದರ್ಥ) ಅದನ್ನು ಬದಿಗಿಟ್ಟು ಅದೇ ಬಾಣಲೆಯಲ್ಲಿ ಉದ್ದಿನ ಬೇಳೆಯನ್ನು ಸಂಪಿಗೆ ಬಣ್ಣ ಬರೋವರೆಗೂ ಹುರಿದುಕೊಂಡು (ಕೆಂಡ ಸಂಪಿಗೆ!)… ಈ ಪರಿಯಾದ ಸವಿಸ್ತಾರವಾದ ಸಾರಿನ ಪುಡಿ ಮಾಡುವ ವಿಧಾನದ ರೆಸಿಪಿ ಓದಿ ಮುದ್ದಣ್ಣನಿಗೆ ಮದುವೆ ನಂತರ ತನ್ನ ಸ್ಟೇಟಸ್ “ಸಿಂಗಲ್’ನಿಂದ “ಮ್ಯಾರೀಡ್’ಗೆ ಬದಲಾದ್ರು “ಸ್ಟೇಟಸ್ ಕೋ’ (ಯಥಾಸ್ಥಿತಿ ) ರಿಮೇನ್ಸ್ ದಿ ಸೇಮ್ ಎಂಬ ಜ್ಞಾನೋದಯ ಆಗಿಬಿಟ್ಟಿತು. ತನ್ನ ಡೈರಿ ಬಯಲಾದ ಬ್ರೇಕಿಂಗ್ ನ್ಯೂಸ್‌ನ ಅರಿವಿರದ ಮನೋರಮೆ ಮೊದಲ ಬಾರಿ ಸಾರಿನ ಪುಡಿ ಮಾಡುವಾಗ ನಮ್ಮಮ್ಮ, “ಏನೇ ಮಾಡಿದ್ರು ನಿನ್ನ ಗಂಡನ್ನ ಮುಂದಿಟ್ಟುಕೊಂಡು ಮಾಡು’ ಅಂತ ಹೇಳಿ¨ªಾರೆ ಅಂತ ವಿನಯ ನಟಿಸಿ ಸಾಸಿವೆ, ಮೆಣಸುಗಳ ಚಟಚಟ, ಪಟಪಟಗಳನ್ನು ಮುದ್ದಣ್ಣ ಅಪ್ರೂವ್ ಮಾಡಿದ ಮೇಲೆ ಸಾರಿನ ಪುಡಿ ಮಾಡುವ ಕಾರ್ಯಕ್ರಮ ಮುಗಿಸಿದಳು. “ಈ ಸಲ ಅನುಭವ ಆಯ್ತಲ್ಲ. ಮುಂದಿನ ಸಾರಿ ನೀನೇ ಮಾಡಿಕೊಳ್ಳಕ್ಕೆ ದಂ ಹೈ’ ಎಂಬ ಮುದ್ದಣ್ಣನ ಪ್ರಶ್ನೆಗೆ “ಕಮ್ ಹೈ’ ಎಂದು ಮನೋರಮೆ ಮೆಲುದನಿಯಲ್ಲಿ ಉಸುರಿದಳು. ಅಂದಿನಿಂದ ಪ್ರಾರಂಭವಾದ ಮುದ್ದಣ್ಣ ಮನೋರಮೆಯರ ಅಡುಗೆ ಮನೆಯ ಜಾಯಿಂಟ್ ವೆಂಚರ್ ಸತತವಾಗಿ ನಡೆದೇ ಇದೆ. ಅವರಿಬ್ಬರ ನಡುವಿನ ಸರಸ – ಸÇÉಾಪಗಳಿಗೆ, ವಾದ- ವಿವಾದಗಳಿಗೆ, ಸಾಂಗತ್ಯಕ್ಕೆ ಅಡುಗೆಮನೆಯೇ ವೇದಿಕೆಯಾಯಿತು !
ದಿನಗಳೆದಂತೆ ಮನೋರಮೆ ಭೂರಿ ಭೋಜನವಲ್ಲದಿದ್ದರೂ ಸರಳವಾದ ಅಡುಗೆ ಮಾಡುವಂತಾದಳು. ಆದರೂ ಒಂದೇ ಹದ ಕಾಪಾಡಿಕೊಳ್ಳುವ ಕಲೆ ಇನ್ನೂ ಒಲಿದು ಬರಲಿಲ್ಲ. ಬೆಂಗಳೂರಿನ ಕೊಳಾಯಿಯಲ್ಲಿ ಬರೋ ಕಾವೇರಿ ನೀರಿನಂತೆ ಒಂದು ದಿನ ಚೆನ್ನಾಗಿ ಬಂದರೆ ಇನ್ನೊಂದು ದಿನ ಬರಲ್ಲ. ಹೀಗಾಗಿ, ಒಮ್ಮೊಮ್ಮೆ ಅಡುಗೆ ಫ್ಲಾಪ್ ಶೋ ಆದಾಗ ಅವಳು ಮುದ್ದಣ್ಣನಿಗೆ, “ಇವತ್ತಿನ ಅಡುಗೆ ಅಷ್ಟಕಷ್ಟೇ. ಆದರೂ ನೀವು ಏನೂ ಹೇಳದೆ ಉಂಡಿರಿ. ಪಾಪ ನಿಮ್ಮ ಮನಸ್ಸು ದೊಡ್ಡದು’ ಎಂದರೆ ಅವನು ಹೊಟ್ಟೆ ದೊಡ್ಡದು ಅಂತ ಜೋಕ್ ಕಟ್ ಮಾಡಿ ಅವಳಿಗೆ ಕೇಳದಂತೆ “ನಿಂಗೆ ಮತಿ ಇಲ್ಲ ನಂಗೆ ಗತಿ ಇಲ್ಲ’ ಎಂದು ನಿಡುಸುಯ್ಯುತ್ತಾ¤ನೆ.
ಮದುವೆಯಾದ ಕೆಲವೇ ತಿಂಗಳಲ್ಲಿ ಮುದ್ದಣ್ಣನ ಹುಟ್ಟುಹಬ್ಬ ಬಂತು. ಹುಟ್ಟುಹಬ್ಬ ಆಚರಣೆ, ವಿಶ್ ಮಾಡೋದು, ಉಡುಗೊರೆ ಕೊಡೋದು ತೊಗೊಳ್ಳೋದು ಇದೆಲ್ಲ ಅವನಿಗೆ ರೂಢಿ ಇಲ್ಲ. ಆದರೆ ಮನೋರಮೆಯ ಸಡಗರಕ್ಕೆ ಪಾರವೇ ಇಲ್ಲ. ಅವಳೊಬ್ಬಳು ಸಾಲದೆಂದು ಅವಳ ಅಕ್ಕ ಫೋನ್ ಮಾಡಿ ವಿಶ್ ಮಾಡಿದ್ದಲ್ಲದೆ ಆಕೆಯ ಯಜಮಾನರಿಗೆ ರಿಸೀವರ್ ರವಾನಿಸಿ, ಇದ್ದಕ್ಕಿದಂತೆ ತನ್ನ ಷಡ್ಡಕನ ದನಿ ಕಿವಿಯಲ್ಲಿ ಮೊಳಗಿ, ಆತ “ಹ್ಯಾಪಿ ಬರ್ತ್ ಡೇ’ ಅಂತ ವಿಶ್ ಮಾಡಿದಾಗ ಗಲಿಬಿಲಿಗೊಂಡ ಮುದ್ದಣ್ಣ “ಸೇಮ್ ಟು ಯು’ ಅಂದುಬಿಟ್ಟ. ಓಹೋ! ಇನ್ನು ಮನೋರಮೆ ಬಿಟ್ಟಾಳೆ? ಮುದ್ದಣ್ಣನ ಕಾಲೆಳೆಯಲು ಆರಂಭಿಸಿದಳು. ಅವನೇನೂ ಸೋಲೊಪ್ಪುವ ಪೈಕಿ ಅಲ್ಲ. ತತ್‌ಕ್ಷಣ ಜಾಗೃತಗೊಂಡ ಅವನ ಫನ್, “ನಿನ್ನ ಭಾವನಿಗೆ ನಾನು ಸೇಮ್ ಟು ಯು ಅಂದದ್ದಲ್ಲ, ಶೇಮ್ ಟು ಯು ಅಂದೆ. ನಾನೇನೂ ಚಿಕ್ಕ ಮಗುವೇ ಹ್ಯಾಪಿ ಬರ್ತ್ ಡೇ ಅಂತ ವಿಶ್ ಮಾಡಲು’ ಎಂದು ಮನೋರಮೆಯನ್ನು ಪಂಚ್ ಮಾಡಿ ಕೂಡಿಸಿದ.
ಪ್ರತಿದಿನ ಚಪಾತಿ ಮಾಡೋದು ಮುದ್ದಣ್ಣನ ಕೆಲಸ. ಉಳಿದ ಅಡುಗೆ ಮನೋರಮೆ ನಿಭಾಯಿಸುತ್ತಿದ್ದಳು. ಎಷ್ಟು ಬಾರಿ ಹೇಳಿದರೂ ಅವನು ಪ್ರತಿ ಸಲ ತಪ್ಪದೆ, “ನಿನಗೆಷ್ಟು ಚಪಾತಿ ಮಾಡಲಿ?’ ಎಂದು ಕೇಳುತಿದ್ದ. ಅವಳಿಗೆ ತಲೆ ಕೆಟ್ಟಿದ್ದರೆ, “ಎಷ್ಟು ಸಲ ಹೇಳಬೇಕು ಮೂರು ಅಂತ. ನಿಮ್ಮದು ನನ್ನದು ಏನಿದ್ದರೂ ಮೂರು ಚಪಾತಿ ನಂಟು. ಮೂರು ಗಂಟು ಹಾಕಿದ್ದಕ್ಕೆ ಮೂರು ಚಪಾತಿ ಮಾಡಿಕೊಡಿ. ಮತ್ತೆ ಮತ್ತೆ ನನ್ನ ಎಷ್ಟು ಚಪಾತಿ ಅಂತ ಕೇಳಬೇಡಿ’ ಎಂದು ರೇಗಿ, “ಸಾರಿಗೆ ಒಗ್ಗರಣೆ ನೀವೇ ಹಾಕಿಕೊಳ್ಳಿ’ ಅಂತ ಅಡುಗೆ ಮನೆಯಿಂದ ವಾಕ್‌ಔಟ್ ಮಾಡಿಬಿಡ್ತಾಳೆ. ಒಗ್ಗರಣೆ ಹಾಕಿದವರಿಗೆ ಅಡುಗೆ ಮಾಡಿದ ಪೂರ್ತಿ ಪುಣ್ಯ ಬರೋದು ಎಂದು ಮೊದಲೇ ಕೋಪದಲ್ಲಿದ್ದವಳನ್ನು ಮುದ್ದಣ್ಣ ಮತ್ತಷ್ಟು ರೇಗಿಸ್ತಾನೆ.
ಮುದ್ದಣ್ಣ ಮನೋರಮೆಯರ ಜೀವನದಲ್ಲಿ ಹತ್ತುಹಲವು ವಸಂತಗಳು ಕಳೆಯುವುದರಲ್ಲಿ, ಮನೋರಮೆ ಹಲವಾರು ಕೆಲಸಗಳನ್ನು ಬದಲಿಸಿದ್ದಳು. ಮದುವೆ ನಂತರ ಟಾಟಾ ಕಂಪೆನಿಯಿಂದ ಹೊರ ಬಂದಾಗಲಂತೂ ನಿಜಕ್ಕೂ ಆತಂಕಗೊಂಡಿದ್ದಳು. ಆದರೆ ಮುದ್ದಣ್ಣನದು ಶಾಂತ ಸ್ವಭಾವ. ಅವ ಮಿತಭಾಷಿ. “ಬೇರೆ ಕಡೆ ಸಿಗುತ್ತೆ ಬಿಡು’ ಎಂಬ ಅವನ ಸರಳ- ನೇರ-ನಿರಂತರ ಸಾಂತ್ವನ ಅವಳ ಆತ್ಮಸ್ಥೈರ್ಯ ಹೆಚ್ಚಿಸಿತ್ತಲ್ಲದೆ ಅವನ ಸಲಹೆಯಂತೆ ಸರ್ಕಾರಿ ನೌಕರಿಗೂ ಪ್ರಯತ್ನಿಸತೊಡಗಿದಳು. ಖಾಸಗಿ ವಲಯದಲ್ಲಿ ಕೆಲಸ ಮಾಡಿ ಅನುಭವವಿದ್ದ ಮನೋರಮೆಗೆ ಇಂಗ್ಲಿಷ್ ಮಾತನಾಡೋ ಕಲೆ ಚೆನ್ನಾಗಿ ಒಲಿದಿತ್ತಾದರೂ ಅವಳ ಜನರಲ್ ನಾಲೆಡ್ಜ್ ಅಷ್ಟಕಷ್ಟೇ! ಇದೇ ಕಾರಣಕ್ಕೆ ಎರಡು ಸರ್ಕಾರಿ ಕೆಲಸಗಳು ಕೈತಪ್ಪಿ ಹೋದುವು. ಒಮ್ಮೆ ಹೈಕೋರ್ಟಿನಲ್ಲಿ ಟೈಪಿಸ್ಟ್ ಕೆಲಸಕ್ಕೆ ಕರೆ ಬಂತು. ಜನರಲ್ ನಾಲೆಡ್ಜ್ ಕೆಟಗರಿಯಲ್ಲಿ “ಭಾರತದ ಉಪಾಧ್ಯಕ್ಷರು ಯಾರು’ ಎಂಬ ಪ್ರಶ್ನೆಗೆ ತೋಚಿದ ಉತ್ತರ ಕೊಟ್ಟು ಹೊರಬಂದಳು.
ಮುದ್ದಣನ ಬಳಿ ಸಂದರ್ಶನದ ಪ್ರಕ್ರಿಯೆ ವರದಿ ಮಾಡಿದಾಗ ಆ ಪ್ರಶ್ನೆಗೆ ಮನೋರಮೆ ಕೊಟ್ಟ ಉತ್ತರ ಕೇಳಿ, “ಇರಲಿ ಬಿಡು, ಹತ್ತಿರದÇÉೇ ಇದ್ದೀಯ. ಕಳೆದ ಟರ್ಮ್ನಲ್ಲಷ್ಟೇ ಅವರು ಭಾರತದ ಉಪಾಧ್ಯಕ್ಷರಾಗಿದ್ದುದು’ ಎಂದ.ಇನ್ನೊಮ್ಮೆ ಶಿಕ್ಷಣ ಇಲಾಖೆಯ ಸಂದರ್ಶನದಲ್ಲಿ “ಯುಜಿಸಿ’ ಎಂದರೇನು ಎಂಬ ಪ್ರಶ್ನೆಗೆ “ಇಟ್ ಹ್ಯಾಸ್ ಗಾಟ್ ಸಮ್‌ಥಿಂಗ್ ಟು ಡೂ ವಿಥ್ ಪೇ ಸ್ಕೇಲ್’ ಎಂದು ಉತ್ತರಿಸಿದ್ದಳು. ಇದನ್ನು ಕೇಳಿದ ಸಂದರ್ಶನ ಮಂಡಳಿಯ ಸದಸ್ಯರು, “ಇಗೋ ನೋಡ್ರಪ್ಪಾ ಈಕಿ ಯಜಮಾನರು ಇದೇ ಇಲಾಖೀಲಿ ಕೆಲ್ಸ ಮಾಡ್ತಾರಂತೆ, ಈಕಿಗೆ ಯುಜಿಸಿ ಅಂದ್ರೆ ಏನು ಅಂತ ಗೊತ್ತಿಲ್ಲ’ ಅಂತ ಮನೋರಮೆಯ ಮಕದ್ ನೀರಿಳಿಸಿ ಕಳಿಸಿದ್ರು. ಹೊರಬಂದ ಮನೋರಮೆ ವ್ಯಗ್ರಳಾಗಿದ್ದಳು. “ಎಲ್ಲ ನಿಮ್ಮಿಂದಲೆ’ ಎಂದು ಮುದ್ದಣ್ಣನ ಮೇಲೆ ಮುಗಿಬಿದ್ದಳು. “ನಾನೇನು ಮಾಡಿದೆ?’ ಎಂದ ಅವನಿಗೆ “ನೀವು ಮಾತು ಕಮ್ಮಿ. ನಿಮ್ಮ ಡಿಪಾರ್ಟ್‌ಮೆಂಟ್ ಬಗ್ಗೆ ನನ್ನ ಬಳಿ ಎಂದಾದರೂ ಮಾಹಿತಿ ಹಂಚಿಕೊಂಡಿದ್ದೀರಾ? ಹಾಗೆ ಮಾಡಿದ್ದರೆ ನಾನು ಇಂದು ಈ ರೀತಿ ನಗೆಪಾಟಲಿಗೆ ಗುರಿಯಾಗಬೇಕಿರ್ಲಿಲ್ಲ’ ಎಂದು ಮುಖ ಊದಿಸಿಕೊಂಡಳು. ಅದರ ಮುಂದುವರಿದ ಭಾಗದಲ್ಲಿ ಅಡುಗೆ ಮನೆಗೆ “ನೋ ಎಂಟ್ರಿ’. ಮನೋರಮೆಯ ಈ ರೀತಿಯ ಮೂಡ್ ಸ್ವಿಂಗ್‌ಗಳು ಈಗಾಗಲೇ ಅಭ್ಯಾಸವಾಗಿದ್ದ ಮುದ್ದಣ ಯಾವಾಗಲೂ “ಪ್ಲಾನ್ ಬಿ’ ಮತ್ತು “ಪ್ಲಾನ್ ಸಿ’ ಕಿಸೆಯಲ್ಲಿ ಇಟ್ಟುಕೊಂಡೆ ತಿರುಗ್ತಿರ್ತಾನೆ. ಅದರಂತೆ ತಾನೇ ಕಿಚನ್ ಕಿಂಗ್ ಆಗೋದು ಅಥವಾ ಐಸ್‌ಕ್ರೀಮ್ ಕೊಡಿಸಿ ಅವಳನ್ನು ಪ್ರೀತಮನಸ್ಕಳಾಗಿಸ್ತಾನೆ. ಮುಂದೆ ಇಬ್ಬರು ಸೇರಿ ಕೂಡಿಟ್ಟ ಸ್ವಲ್ಪ ಹಣದಲ್ಲಿ ಒಂದು ಅಪಾರ್ಟ್‌ಮೆಂಟಿಗೆ ಮುಂಗಡ ಹಣ ಕೊಟ್ಟು, ಉಳಿದದ್ದು ಗೃಹಸಾಲ ತೆಗೆದುಕೊಂಡು ಬಲಗಾಲಿಟ್ಟು ಹೊಸಮನೆಗೆ ಎಂಟ್ರಿ ಕೊಟ್ಟರು. ಗೃಹಪ್ರವೇಶದ ಸಿದ್ಧತೆಗಿಂತ, ಬಂಧು-ಮಿತ್ರರನ್ನು ಆಹ್ವಾನಿಸುವ ಕೆಲಸವೇ ಮನೋರಮೆಗೆ ಕ್ಲಿಷ್ಟ ಅನಿಸಿತು. ಅದೇ ನಗರದಲ್ಲಿ ಹುಟ್ಟಿದಾಗಿಂದ ಇದ್ದರೂ ಅವಳಿಗೆ ಯಾವುದೇ ಸ್ಥಳ “ಇದಮಿತ್ಥಂ’ ಅಂತ ಇÇÉೇ ಇದೆ ಎಂದು ಹೇಳಲು ಬರಲ್ಲ , ಆ ಸ್ಥಳವನ್ನು ತಲುಪುವ ದಾರಿ ನೀಲಿನಕ್ಷೆ ಹಾಕಿಕೊಟ್ಟರೂ ಅರ್ಥವಾಗೋಲ್ಲ. ಒಂದೇ ರಸ್ತೆಯÇÉೇ ಹಲವು ಬಾರಿ ತಿರುಗಾಡಿಸಿದರೂ ಪ್ರತಿಬಾರಿ ಕಣ್ಣರಳಿಸಿ ಹೊಸಜಾಗದಂತೆ ಸುತ್ತಮುತ್ತ ನೋಡುತ್ತಿರುತ್ತಾಳೆ. ಆದ್ದರಿಂದ ಮುದ್ದಣ ತಾನೇ ಖು¨ªಾಗಿ ಆಮಂತ್ರಿತರ ಪಟ್ಟಿಯನ್ನು ಅವರು ವಾಸಿಸುವ ಮನೆಯ ಬಡಾವಣೆಯನ್ನು ಆಧರಿಸಿ ಪಟ್ಟಿ ಮಾಡಿ, ಒಂದು ಸಣ್ಣ ಪುಸ್ತಕದಲ್ಲಿ ಅದನ್ನೆÇÉಾ ಗುರುತು ಹಾಕಿ ಮನೋರಮೆಯ ಕೈಗೆ ಕೊಟ್ಟ. ಆದರೆ, ಮನೋರಮೆ ಅದರಲ್ಲೂ ಎಡವಟ್ಟು ಮಾಡಿಕೊಂಡಳು. ಅದೊಂದು ದಿನ ಮುದ್ದಣ್ಣನ ದೊಡ್ಡಪ್ಪನ ಮತ್ತು ಮನೋರಮೆಯ ಮಾವನ ಮನೆಗೆ ಆಮಂತ್ರಣ ಪತ್ರಿಕೆ ಹಂಚಲು ಹೊರಟರು. ಒಂದು ಹಂತದವರೆಗೆ ಪ್ರಯಾಣ ಸುಗಮವಾಗಿ ಸಾಗಿತು. ಆಮೇಲೆ ತಿಪ್ಪರಲಾಗ ಹಾಕಿದ್ರು ಮನೆ ಸಿಗಲೊಲ್ಲದು. ಮುದ್ದಣ್ಣನ ಸ್ಕೂಟರಿನಲ್ಲಿ ಹೋಗುವಾಗ ಗಾಳಿಯ ವೇಗಕ್ಕೆ ಪುಟ ಮಗುಚಿಕೊಂಡಿದೆ. ಆದರೆ ಇದನ್ನರಿಯದ ಮನೋರಮೆ ಪೂರ್ವಾರ್ಧದ ವಿಳಾಸ ಮುದ್ದಣ್ಣನ ದೊಡ್ಡಪ್ಪನ ಮನೇದು, ಉತ್ತರಾರ್ಧ ಅವಳ ಮಾವನ ಮನೇದು ಓದಿ ಹೇಳಿ, ಅವನ ತಲೆಕೆಡಿಸಿ ಕಡೆಗೂ ಮನೆ ಸಿಗದೆ ತಿರುಗಿ ಬಂದರು. ಮತ್ತೆ ಹೇಗೋ ಗೃಹಪ್ರವೇಶ ಎಲ್ಲ ಸುಸೂತ್ರವಾಗಿ ನಡೆಯಿತೆನ್ನಿ. ಈ ಬಗ್ಗೆ ಬನಶಂಕರಮ್ಮನಿಗೆ ನಿಂಬೆಹಣ್ಣಿನ ದೀಪ ಹಚ್ಚಬೇಕು ಅಂತ ಮನೋರಮೆ ಹರಸಿಕೊಂಡಿದ್ದಳು. – ರಮಾ ಎಂ. ಎನ್.