Advertisement

Mudbidri: ಕೊಳಚೆ ನೀರು; ಪರಿಹಾರ ಮಾರ್ಗ ತೋರಲೇಕೆ ಹಿಂದೇಟು?

01:05 PM Nov 13, 2024 | Team Udayavani |

ಮೂಡುಬಿದಿರೆ: ಜೈನ ಪೇಟೆ, ಗಾಂಧಿನಗರ ಸಹಿತ ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಹಲವಾರು ವಸತಿ ಸಂಕೀರ್ಣಗಳಿಂದ ಹೊರಸೂಸುವ ಕೊಳಚೆ ತ್ಯಾಜ್ಯ ನೀರಿನ ಹರಿವಿಗೆ ಸೂಕ್ತ ಕ್ರಮ ಜರಗಿಸಲು ಪುರಸಭೆ ಏಕೆ ಹಿಂದೇಟು ಹಾಕುತ್ತಿದೆ ಎಂದು ಮಂಗಳವಾರ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಸದಸ್ಯರನೇಕರು ಪ್ರಶ್ನಿಸಿದರು.

Advertisement

ವಿಶೇಷವಾಗಿ ಕೊರಗಪ್ಪ, ದಿವ್ಯಾ ಜಗದೀಶ, ಸೌಮ್ಯಾ ಎಸ್‌. ಶೆಟ್ಟಿ ಈ ಗಂಭೀರ ವಿಷಯವನ್ನು ಎತ್ತಿ ಗಾಂಧಿನಗರದ ರೆಸ್ಟಾರೆಂಟ್‌, ದೋಭಿ ಕೇಂದ್ರ, ವಸತಿ ಸಂಕೀರ್ಣಗಳ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಕೇಳಿದರು. ಜೈನ ಪೇಟೆಯ ಕೊಂಡೆಬೀದಿಯಲ್ಲಿರುವ ವಸತಿ ಸಂಕೀರ್ಣದಿಂದ ಕೊಳಚೆ ನೀರು ಅಕ್ಷಯ ವಾಗಿ ಬದಿಯ ವಾರ್ಡ್‌ ನಿಂದ ತನ್ನ ವಾರ್ಡ್‌ಗೆ ಎಗ್ಗಿಲ್ಲದೆ ಹರಿದುಬರುತ್ತಿದೆ ಎಂದು ಸೌಮ್ಯಾ ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳಿ, ಯಾವ ಮುಲಾಜೂ ಬೇಡ ಎಂದು ಆರೋಗ್ಯನಿರೀಕ್ಷಕಿ ಶಶಿರೇಖಾ ಆವರಿಗೆ ಮುಖ್ಯಾಧಿಕಾರಿ ಇಂದು ಎಂ. ನಿದೇಶಿಸಿದರು.

ಎಲ್‌ಇಡಿ ಬೆಳಕು
ವಾಹನಗಳಲ್ಲಿ ಎಲ್‌ಇಡಿ ಬಲ್ಬ್ ಗಳಿರುವುದನ್ನು ನಿವಾರಿಸಲು ರಾಜ್ಯಾದ್ಯಂತ ಕ್ರಮ ಜರಗಿಸಲಾಗುತ್ತಿದೆ, ಮೂಡುಬಿದಿರೆಯಲ್ಲಿ ಒಂದು ದಿನ ಮಾತ್ರ ಈ ಬಗ್ಗೆ ಕಾರ್ಯಾಚರಣೆ ನಡೆದಂತಿದೆ. ಸುರೇಶ ಪ್ರಭು ಪ್ರಸ್ತಾಪಿಸಿದಾಗ ಹಾಜರಿದ್ದ ಪಿಎಸ್‌ಐ ಸಿದ್ದಪ್ಪ ಅವರು ಇಲ್ಲ , ಈಗಲೂ ಕಾರ್ಯಾಚರಣೆ ನಡೆಯುತ್ತಿದೆ ಎಂದರು.

ಎಲ್ಲ ಕಡೆ ಮಡ್ಕಾ
ಮೂಡುಬಿದಿರೆ ಪುರಸಭೆ ಮಾತ್ರವಲ್ಲ ಆಸುಪಾಸಿನ ಗ್ರಾಮಗಳಲ್ಲೂ ಮಡಾR ಜೋರಾಗಿ ನಡೆಯುತ್ತ ಇದೆ ಎಂದು ರಾಜೇಶ್‌ ನಾೖಕ್‌ ಕಳವಳ ವ್ಯಕ್ತಪಡಿಸಿ, ಮೂಡುಬಿದಿರೆ ಪೊಲೀಸರು ಈ ಬಗ್ಗೆಯೂ ಕಠಿನ ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.

Advertisement

ಮಹಾಯೋಜನೆ ಸಮಸ್ಯೆ
ಮೂಡುಬಿದಿರೆ ಮಹಾಯೋಜನೆ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಕನ್ವರ್ಷನ್‌ ಆಗುತ್ತದೆ, ಖಾತೆ ಬದಲಾವಣೆಗೆ “ವಲಯ ಸಮಸ್ಯೆ” ಇದಿರಾಗುತ್ತಿದೆ ಎಂದು ಸುರೇಶ ಕೋಟ್ಯಾನ್‌ ಮಹತ್ವದ ಸಮಸ್ಯೆಯ ಕುರಿತು ಪ್ರಸ್ತಾಪಿಸಿದರು. ಈ ಬಗ್ಗೆ , ಮಹಾಯೋಜನೆ ಜಾರಿಯಾಗುವವರೆಗೆ ಕನ್ವರ್ಷನ್‌ ಕ್ರಿಯೆಗಳನ್ನು ತಡೆಹಿಡಿದಿಡಲು ತಹಶೀಲ್ದಾರರಿಗೆ ಪತ್ರ ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ಇಂದು ತಿಳಿಸಿದರು.

ಗೋಪಾಲಕೃಷ್ಣ ದೇವಸ್ಥಾನದ ಬಳಿ ವಾಸವಾಗಿರುವ ಶ್ವೇತಾ ಪ್ರವೀಣ ಅವರು ಮನೆಯೆದುರಿನ ಚರಂಡಿಯಲ್ಲಿ ತ್ಯಾಜ್ಯ ಸಂಗ್ರಹವಾಗಿ ದುರ್ನಾತ ಬೀರುತ್ತಿರುವ ಬಗ್ಗೆ ಸಾಕ್ಷಿ ಸಹಿತ ಪುರಸಭೆ ಆರೋಗ್ಯ ನಿರೀಕ್ಷಕರ ಗಮನ ಸೆಳೆದಿದ್ದರೂ ಇನ್ನೂ ಕ್ರಮಜರಗಿಸಿಲ್ಲ ಎಂದು ದೂರಿದರು. ಈ ಬಗ್ಗೆ ತತ್‌ ಕ್ಷಣ ಕ್ರಮ ಜರಗಿಸುವುದಾಗಿ ಆರೋಗ್ಯ ನಿರೀಕ್ಷಕರು ತಿಳಿಸಿದರು.

ಸ್ವಾತಿ ಎಸ್‌. ಪ್ರಭು ಅವರು ಹನುಮಂತ, ವೆಂಕಟರಮಣ ದೇಗುಲ ಪರಿಸರದಲ್ಲಿ ವಿಶೇಷವಾಗಿ ಶನಿವಾರ, ರವಿವಾರ, ಸೋಮವಾರಗಳಲ್ಲಿ ತಲೆದೋರುವ ಪಾರ್ಕಿಂಗ್‌ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದರು. ಸ್ವರಾಜ್ಯಮೈದಾನದಲ್ಲಿ ಕ್ರಿಕೆಟ್‌ ಆಡುವ ಜಾಗವನ್ನು ಕನ್ನಡ ಭವನದ ಕಾರ್ಯಕ್ರಮಗಳ ವೇಳೆ ವಾಹನ ಪಾರ್ಕಿಂಗ್‌ಗೆ ನೀಡುವುದರಿಂದ ಕ್ರಿಕೆಟ್‌ ತಂಡಗಳಿಗೆ ಸಮಸ್ಯೆ ಆಗುತ್ತಿರುವುದರ ಬಗ್ಗೆ ಪ್ರಶ್ನೆ ಬಂದಾಗ ಈ ಬಗ್ಗೆ ಕ್ರೀಡಾ ಇಲಾಖೆಗೆ ಪತ್ರ ಬರೆಯುವುದಾಗಿ ಪ್ರಕಟಿಸಲಾಯಿತು.

ಉಪಾಧ್ಯಕ್ಷ ನಾಗ ರಾಜ್‌ ಪೂಜಾರಿ, ಪ್ರಸಾದ್‌ ಕುಮಾರ್‌, ಇಕ್ಬಾಲ್‌ ಕರೀಂ, ಇಮಾಯತುಲ್ಲಾ, ಪಿ.ಕೆ. ಥಾಮಸ್‌ ಮೊದಲಾದವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡಿದ್ದರು.

ಪುಟ್ಟ ಮಕ್ಕಳ ಕೈಯಲ್ಲಿ ವಾಹನ
ಪುಟ್ಟ ಮಕ್ಕಳೂ ದ್ವಿಚಕ್ರ ವಾಹನ ಬಿಡುತ್ತಿದ್ದಾರೆ ಏನು ಕ್ರಮ ಜರಗಿಸುತ್ತಿದ್ದೀರಿ ಎಂದು ರಾಜೇಶ್‌ ನಾೖಕ್‌ ಪ್ರಶ್ನಿಸಿದಾಗ ಪಿಎಸ್‌ಐ ಸಿದ್ದಪ್ಪ ಇದರಲ್ಲಿ ಮಕ್ಕಳ ಪೋಷಕರ ಪಾತ್ರ, ಜವಾಬ್ದಾರಿಯೂ ಇದೆ, ನಾವೂ ಕಂಡರೆ ಕ್ರಮ ತೆಗೆದುಕೊಳ್ಳುತ್ತೇವೆ, ನಂಬ್ರ ಸಹಿತ ದೂರು ಕೊಟ್ಟರೆ ಇನ್ನಷ್ಟು ಅನುಕೂಲ ಎಂದರು.

ದಾರಿದೀಪದ ದಫ್ತರಗಳೇ ಮಾಯ?
ವಾರ್ಡ್‌ಗಳಲ್ಲಿ ದಾರಿದೀಪ ವಿಸ್ತರಣೆಯ ಬಗ್ಗೆ ಪುರಸಭೆ ಸದಸ್ಯರ ಕೋರಿಕೆಯಂತೆ ಮೆಸ್ಕಾಂ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿದ್ದರೂ ಆ ಪ್ರಸ್ತಾವನೆಗಳಿನ್ನೂ ಕಾರ್ಯಗತವಾಗಿಲ್ಲ . ಹುಡುಕಿದಾಗ ಆ ಕುರಿತಾದ ಫೈಲುಗಳೇ ನಾಪತ್ತೆಯಾಗಿವೆ ಎಂದು ಸೌಮ್ಯಾ, ದಿವ್ಯಾ ಮೊದಲಾದವರು ಪ್ರಶ್ನಿಸಿದರು. ಈ ಬಗ್ಗೆ ಹಾಜರಿದ್ದ ಮೆಸ್ಕಾಂ ಎಸ್‌ಓ ಪ್ರವೀಣ್‌ ಸ್ಪಷ್ಟನೆ ನೀಡಿ, ನಿರ್ದಿಷ್ಟ ನೋಂದಣಿ ಸಂಖ್ಯೆ ಇದ್ದರೆ ಖಂಡಿತಾ ಫೈಲು ಎಲ್ಲಿದೆ, ಯಾವ ಸ್ಥಿತಿಯಲ್ಲಿದೆ ಎಂದು ಪರಿಶೀಲಿಸಲು ಸಾಧ್ಯವಾಗುವುದು, ನಮ್ಮಲ್ಲಿ ಯಾವುದೇ ಇಂಥ ಪ್ರಕರಣ ವಿಲೇವಾರಿಗೆ ಬಾಕಿ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next