ಮಹಾವಿದ್ಯಾಲಯದ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ 2023-24ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಮಾಡುವ ಸಮಾಜ ಸೇವೆಯು ಜನರಿಗೆ ಅಗತ್ಯವಾಗಿರಬೇಕು ಮತ್ತು ಜನರ ಹೃದಯದಲ್ಲಿ ಉಳಿಯುವಂತೆ ಇರಬೇಕು ಎಂದರು.
Advertisement
ದೇಶದಲ್ಲಿ ಕೇವಲ ಸಂವಿಧಾನದ ಹಕ್ಕುಗಳನ್ನು ಪಡೆಯುವುದಕ್ಕೆ ಬದ್ಧತೆ ಇರಬಾರದು. ದೇಶಕ್ಕಾಗಿ ಮಾಡಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸಹ ಪ್ರಾಮಾಣಿಕವಾಗಿ ಮಾಡುವ ಮೂಲಕ ಸಮಾಜ ಮತ್ತು ದೇಶದ ಹಿತ ಕಾಯುವಂತಾಗಬೇಕುಎಂದರು.
ಪರಿವಾರದವರು ಕಳೆದ 8 ವರ್ಷಗಳಿಂದ ಸಮಾಜಕ್ಕಾಗಿ ಮಾಡಿರುವ ಕಾರ್ಯಗಳು ಶ್ಲಾಘನೀಯ ಎಂದರು. ಜಮಖಂಡಿಯ ಡಾ| ರಂಗಣ್ಣ ಎನ್. ಸೋನವಾಲಕರ ಮಾತನಾಡಿ, ಜೀವನದಲ್ಲಿ ಕೇವಲ ಹಣ ಗಳಿಕೆ, ಅಧಿ ಕಾರ ಮುಖ್ಯವಲ್ಲ.
ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸಹಾಯ ಮಾಡುವ ಮೂಲಕ ನಮ್ಮ ಬದುಕನ್ನು ಸಾರ್ಥಕ ಮಾಡಿಕೊಳ್ಳಬೇಕು. ಲಯನ್ಸ್ ಕ್ಲಬ್ ಸಂಘಟನೆ, ಒಗ್ಗಟ್ಟು ಹಾಗೂ ಸಮಾಜದಲ್ಲಿ ಬೆರೆಯುವುದನ್ನು ಕಲಿಸಿಕೊಡುತ್ತದೆ ಎಂದರು.
Related Articles
Advertisement
ನಿರ್ಗಮಿತ ಅಧ್ಯಕ್ಷ ಡಾ| ಎಸ್.ಎಸ್. ಪಾಟೀಲ, ನಿಕಟಪೂರ್ವ ಅಧ್ಯಕ್ಷ ಬಾಲಶೇಖರ ಬಂದಿ, ಕಾರ್ಯದರ್ಶಿ ಸಂಗಮೇಶ ಕೌಜಲಗಿ, ಖಜಾಂಚಿ ಶಿವಬೋಧ ಯರಝರ್ವಿ ವೇದಿಕೆಯಲ್ಲಿದ್ದರು. ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅನ್ನದಾಸೋಹ ಸೇವೆಗೈದ ದಾನಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಪೂರ್ವದಲ್ಲಿ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ವೆಂಕಟೇಶ ಸೋನವಾಲಕರ, ಡಾ| ಪ್ರಕಾಶ ನಿಡಗುಂದಿ, ಎನ್.ಟಿ. ಪಿರೋಜಿ, ಪುಲಕೇಶ ಸೋನವಾಲಕರ, ಸುರೇಂದ್ರ ಆದಪ್ಪಗೋಳ, ದುಂಡಪ್ಪ ಕಂಕಣವಾಡಿ, ಡಾ. ಮಲ್ಲಿಕಾರ್ಜುನ ಹಿರೇಮಠ, ವಿಶಾಲ ಶೀಲವಂತ, ಪ್ರಮೋದ ಪಾಟೀಲ, ಅಪ್ಪಣ್ಣ ಬಡಿಗೇರ, ಶಿವಬಸು ಈಟಿ, ಡಾ. ಸಚಿನ ಟಿ, ಡಾ. ಯಲ್ಲಾಲಿಂಗ ಮಳವಾಡ, ರಾಜಕುಮಾರ ವಾಲಿ, ವೀರಭದ್ರ ಜಕಾತಿ, ಮಹಾಂತೇಶ ಹೊಸೂರ, ಶಿವಾನಂದ ಗಾಡವಿ, ಗಿರೀಶ ಆಸಂಗಿ, ಸುರೇಶ ನಾವಿ, ಸಂದೀಪ ಸೋನವಾಲಕರ, ಇತರರಿದ್ದರು. ಪವಿತ್ರಾಕೊಣ್ಣೂರ ಪ್ರಾರ್ಥಿಸಿದರು. ಡಾ| ತಿಮ್ಮಣ್ಣ ಗಿರಡ್ಡಿ, ಡಾ| ಸಂಜಯ ಶಿಂದಿ ಹಟ್ಟಿ ಪರಿಚಯಿಸಿದರು. ಡಾ. ಎಸ್.ಎಸ್. ಪಾಟೀಲ ಸ್ವಾಗತಿಸಿದರು. ಶಿವಾನಂದ
ಕಿತ್ತೂರ, ಮಹಾವೀರ ಸಲ್ಲಾಗೋಳ, ಸೋಮಶೇಖರ ಹಿರೇಮಠ ನಿರೂಪಿಸಿದರು.