Advertisement

5 ವರ್ಷವಾದ್ರೂ ಮುಗಿಯದ ಕಾಮಗಾರಿ

05:24 PM Aug 24, 2019 | Team Udayavani |

ಮುಂಡಗೋಡ: ತಾಲೂಕಿನ ಸಾಲಗಾಂವ್‌ ಗ್ರಾಪಂ ಕಚೇರಿ ಕಟ್ಟಡದ ಕಾಮಗಾರಿ 2015 ರಿಂದ ಪ್ರಾರಂಭಗೊಂಡು 2019 ಆದರೂ ಮುಗಿಸಿಲ್ಲ ಎಂದು ಆರೋಪಿಸಲಾಗಿದೆ.

Advertisement

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಈ ಕಾಮಗಾರಿಗೆ 14ನೇ ಹಣಕಾಸಿನಲ್ಲಿ 8 ಲಕ್ಷ ರೂ. ಮಂಜೂರಾಗಿತ್ತು. ಇದಾದ ನಂತರ ಕಟ್ಟಡ ನಿಧಾನ ಗತಿಯಲ್ಲಿ ಸಾಗಿದೆ. ಮತ್ತೆ ಇದೇ ಕಾಮಗಾರಿಗೆ 14ನೇ ಹಣಕಾಸಿನಿಂದ 5 ಲಕ್ಷ ರೂ. ಮಂಜೂರು ಮಾಡಲು ತಿರ್ಮಾನಿಸಲಾಗಿದೆ. ಕಾರಣ ಈ ಕಟ್ಟಡ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರ್‌ಟಿಐ ಕಾರ್ಯಕರ್ತ ಸಂತೋಷ ತಳವಾರ ಈ ಹಿಂದೆ ಜಿಲ್ಲಾಧಿಕಾರಿಗಳ ವಾಟ್ಸ್‌ಆ್ಯಪ್‌ಗೆ ಕಳಪೆ ಗುಣಮಟ್ಟದ ಮರಳು ಬಳಸಿ ಕಾಮಗಾರಿ ನಡೆಸುತ್ತಿದ್ದಾರೆಂದು ದೂರಿದ್ದರು. ಆ ಮೇಲೆ ಜಿಲ್ಲಾಧಿಕಾರಿಯಿಂದ ಗ್ರಾಪಂ ಅಧಿಕಾರಿಗಳಿಗೆ ಪರೀಶಿಲನೆ ನಡೆಸಲು ಸೂಚನೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಗ್ರಾಪಂ ಅಧಿಕಾರಿ ಈ ಕಾಮಗಾರಿ ಯಾವುದೇ ರೀತಿ ಕಳಪೆಯಾಗಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ. ಹಾಗಾದರೆ ಕಾಮಗಾರಿ ಸ್ಥಳದಲ್ಲಿ ಕಳಪೆ ಗುಣಮಟ್ಟದ ಮರಳು ಯಾಕೆ ಇದೆ ಎಂಬುದು ತಿಳಿಯಬೇಕಾಗಿದೆ.

ಗ್ರಾಪಂ ಅಧಿಕಾರಿಗಳನ್ನು ವಿಚಾರಿಸಿದಾಗ ಗುತ್ತಿಗೆದಾರನಿಗೆ ಒಳ್ಳೆಯ ಗುಣಮಟ್ಟದ ಮರಳು ಬಳಸಲು ಸೂಚನೆ ನೀಡಲಾಗಿದೆ ಎಂದರು. ವಿಪರ್ಯಾಸ ಎಂದರೆ ಇಂತಹ ಅಧಿಕಾರಿಗಳ ಕುಮ್ಮಕ್ಕು ಗುತ್ತಿಗೆದಾರರಿಗೆ ಇರುವುದರಿಂದ ಕಳಪೆ ಕಾಮಗಾರಿ ನಡೆಯುತ್ತಿರುವದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸುತ್ತಿದೆ. ಅಲ್ಲಿನ ಸಾರ್ವಜನಿಕರನ್ನು ಕೇಳಿದಾಗ ನಮ್ಮ ಗ್ರಾಪಂಗೆ ಇಂತಹ ಅಭಿವೃದ್ಧಿ ಅಧಿಕಾರಿಗಳ ಅವಶ್ಯಕತೆಯಿಲ್ಲ. ಈ ಕಳಪೆ ಕಾಮಗಾರಿಗೆ ಇವರೇ ನೇರ ಕಾರಣರಾಗಿದ್ದು ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಮಾಡುತ್ತಿದ್ದವರ ಮೇಲೆ ಬಿಗಿ ಕ್ರಮ ಜಾರಿಗೆ ತಂದಾಗಿನಿಂದ ಮರಳು ಸಾಗಾಟಕಾರರಿಗೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟದ ಉಸುಕನ್ನು ಪರೀಶಿಲಿಸಿ ತೆಗೆದುಕೊಳ್ಳಬೇಕು ಎಂಬುದಾಗಿ ಸ್ಥಳೀಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next