Advertisement

ಮುದಗಲ್ಲ ಐತಿಹಾಸಿಕ ಮೊಹರಂಗೆ ಚಾಲನೆ

12:26 PM Sep 07, 2019 | Naveen |

ಮುದಗಲ್ಲ: ಇತಿಹಾಸ ಪ್ರಸಿದ್ಧ ಮುದಗಲ್ಲ ಮೊಹರಂ ಆಚರಣೆ ಆರಂಭವಾಗಿದೆ. ಸೆ.1ರಿಂದ ಆರಂಭವಾಗಿರುವ ಮುದಗಲ್ಲ ಮೊಹರಂ ಅಂಗವಾಗಿ ವಿವಿಧ ದರ್ಗಾಗಳಲ್ಲಿ ಪ್ರತಿಷ್ಠಾಪಿಸಲಾದ ಆಲಂಗಳಿಗೆ ವಿಶೇಷ ಪೂಜೆ ನೆರವೆರಿಸಲಾಗುತ್ತಿದೆ. ಗುರುವಾರ ಹಸನ್‌-ಹುಸೇನ್‌ ಆಲಂಗಳಿಗೆ ಜಿಹಾಲ್ ಕಾರ್ಯಕ್ರಮ ನಡೆಯಿತು.

Advertisement

ಕಿಲ್ಲಾದ ಹಜರತ್‌ ಹುಸೇನ್‌ ಆಲಂ ದರ್ಗಾವನ್ನು ಬಣ್ಣಗಳಿಂದ ಚಿತ್ರಿಸಲಾಗಿದ್ದು, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ವಿವಿಧ ಜಿಲ್ಲೆಗಳಿಂದ ಬಂದ ಆಲಂಗಳಿಗೆ ದರ್ಗಾದ ಹಿಂಬದಿಯಲ್ಲಿರುವ ಐತಿಹಾಸಿಕ ಬಾವಿ ಪವಿತ್ರ ನೀರಿನಲ್ಲಿ ಮಜ್ಜನ ಮಾಡಿಸಲಾಯಿತು. ಇತ್ತ ಪಟ್ಟಣದ ಪ್ರಮುಖ ರಸ್ತೆ, ಕಿಲ್ಲಾದಲ್ಲಿ ಅಚ್ಚೋಳ್ಳಿ ಬಾವಗಳ ನಾದ, ಹೆಜ್ಜೆ ಕುಣಿತ, ತಮಟೆ-ನಗಾರಿ ನಾದ ಗಮನಸೆಳೆಯುತ್ತಿದೆ.

ಅನುದಾನ ಕೊರತೆ: ಐತಿಹಾಸಿಕ ಹಬ್ಬ ಮುದಗಲ್ಲ ಮೊಹರಂ ಆಚರಣೆಗೆ ಪುರಸಭೆಯಲ್ಲಿ ಅನುದಾನದ ಕೊರತೆ ಉಂಟಾಗಿದೆ. ವಿಶೇಷ ಅನುದಾನದಲ್ಲಿ 12 ಲಕ್ಷ ರೂ ಹಣ ಬಿಡುವಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ವಿಶೇಷ ಅನುದಾನ ನೀಡಲು ಬರುವುದಿಲ್ಲ. ಅಂದಾಗ ಶಾಸಕರ ಸ್ಥಳೀಯ ನಿಧಿಯಲ್ಲಿ 7 ಲಕ್ಷ ರೂ. ನೀಡುವಂತೆ ಪುರಸಭೆ ಆಡಳಿತ ಮನವಿ ಮಾಡಿದೆ. ಆದರೆ ಅನುದಾನ ಬಿಡುಗಡೆ ಯಾಗಿಲ್ಲ ಹಾಗಾಗಿ ಮೊಹರಂ ಭಕ್ತರಿಗೆ ಸೌಕರ್ಯ ಕಲ್ಪಿಸಲು ತೊಂದರೆಯಾಗಬಹುದು ಎಂದು ಪುರಸಭೆ ಸದಸ್ಯರು ತಿಳಿಸಿದ್ದಾರೆ. ಪುರಸಭೆ ಸ್ಥಳೀಯ ಅನುದಾನದಲ್ಲಿ ಹಬ್ಬಕ್ಕೆ ಬರುವ ಭಕ್ತರಿಗೆ ಕುಡಿಯುವ ನೀರು, ಬೀದಿದೀಪ ವ್ಯವಸ್ಥೆ, ಕೋಟೆ ಜಂಗಲ್ಕಟಿಂಗ್‌, ವಾಹನ ಮತ್ತು ಅಂಗಡಿಕಾರರಿಗೆ ಜಾಗದ ವ್ಯವಸ್ಥೆ ಮಾಡಲಾಗುತ್ತಿದೆ. 23 ಜನ ಪುರಸಭೆ ಕಾರ್ಮಿಕರ ಜತೆಗೆ 12 ಜನ ಹೊರಗುತ್ತಿಗೆ ಕಾರ್ಮಿಕರನ್ನು ಪಡೆದು ಪಟ್ಟಣದ ಸ್ವಚ್ಛತೆ ಜತೆಗೆ ಮೊಹರಂಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಟಿ.ನರಸಂಹಮೂರ್ತಿ ತಿಳಿಸಿದ್ದಾರೆ.

ಶಾಸಕರ ಭೇಟಿ: ಕಿಲ್ಲಾದ ಹಸನ್‌ ಆಲಂ ದರ್ಗಾಕ್ಕೆ ಭೇಟಿ ನೀಡಿದ ಶಾಸಕ ಡಿ.ಎಸ್‌. ಹೂಲಗೆರಿ ಆಲಂ ದರ್ಶನ ಪಡೆದು ಮೊಹರಂ ವ್ಯವಸ್ಥೆ ಪರಿಶೀಲಿಸಿದರು. ಕುಡಿಯುವ ನೀರು, ಲೈಟ್, ಪಾರ್ಕಿಂಗ್‌ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯಕ್ಕೆ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಊಟದ ವ್ಯವಸ್ಥೆ: ಮೊಹರಂಗೆ ಆಗಮಿಸುವ ಭಕ್ತರಿಗೆ ಪಟ್ಟಣದ ಹುಸೇನಿ ಆಲಂ ಅಶುರ್‌ ಖಾನ್‌ ಕಮಿಟಿ ವತಿಯಿಂದ ಊಟದ ವ್ಯವಸ್ಥೆ ಜತೆಗೆ ದೂರದ ಊರುಗಳಿಂದ ಬರುವ ಭಕ್ತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಸಮಿತಿ ಪತ್ರಿಕೆಗೆ ತಿಳಿಸಿದೆ.

Advertisement

ಹೆಜ್ಜೆ ಸ್ಪರ್ಧೆ: ಮೊಹರಂ ಅಂಗವಾಗಿ ಸೆ. 9ರಂದು ದಿ. ನಾರ್ಥ್ ಕರ್ನಾಟಕ ಟೆಂಟ್ ಡೆಕೋರೇಟರ್ ವೆಲ್ಫೇರ್‌ ಅಸೋಸಿಯೇಷನ್‌, ವಿಜಯಪುರ ಹಾಗೂ ಭಾರತ ಇವೆಂಟ್ಸ್‌, ಮ್ಯಾನೇಜಮೆಂಟ್ ಹಾಗೂ ಲಿಂಗಸುಗೂರು ತಾಲೂಕು ಟೆಂಟ್ ಡೆಕೋರೇಟರ್ ಕ್ಷೇಮಾಭಿವೃದ್ಧಿ ಸಂಘ ಮತ್ತು ಮುದಗಲ್ಲ ಪತ್ರಕರ್ತರ ಸಂಘ ಜಂಟಿ ಸಂಯುಕ್ತಾ ಆಶ್ರಯದಲ್ಲಿ ಹೆಜ್ಜೆ ಕುಣಿತ ಸ್ಪರ್ಧೆ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮಹಿಬೂಬ್‌ ಬೆಳ್ಳಿಕಟ್( 9483168416) ಅವರು ಸಂಪರ್ಕಿಸಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ ತಂಡಗಳಲ್ಲಿ ಪ್ರಥಮ ಸ್ಥಾನ 11,000ರೂ. ದ್ವಿತಿಯ ಸ್ಥಾನ 5001ರೂ. ತೃತಿಯ ಸ್ಥಾನ 3001ರೂ. ಬಹುಮಾನ ವಿತರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next