Advertisement

ಮಾದರಿ ಜೀವನ ನಡೆಸಲು ಸಲಹೆ

03:48 PM May 08, 2019 | Naveen |

ಮುದಗಲ್ಲ: ಧಾರ್ಮಿಕ ಸಮಾರಂಭಗಳಲ್ಲಿ ನಡೆಸುವ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳು, ರೈತರು, ದಲಿತರಿಗೆ ವರದಾನವಾಗಿವೆ ಎಂದು ಆರ್ಹಾಳಮಠದ ಶ್ರೀ ವೇದಮೂರ್ತಿ ರುದ್ರಸ್ವಾಮೀಜಿ ಹೇಳಿದರು.

Advertisement

ಸಮೀಪದ ಯರದೊಡ್ಡಿ ಗ್ರಾಮದಲ್ಲಿ ನಡೆದ 18ನೇ ವರ್ಷದ ಆರ್ಹಾಳ ಶ್ರೀಗುರು ರುದ್ರಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು. ಶ್ರೀಮಂತರು ದುಂದುವೆಚ್ಚದ ಮದುವೆಗಳನ್ನು ಮಾಡುತ್ತಿದ್ದಾರೆ. ಬಡವರು ಮಕ್ಕಳ ಮದುವೆಗಾಗಿ ದುಂದುವೆಚ್ಚ ಮಾಡಿ ಸಾಲಕ್ಕೆ ಗುರಿಯಾಗುತ್ತಿದ್ದಾರೆ. ಇಂತಹ ಕ್ಷೇತ್ರಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಬೇಕು. ನವದಂಪತಿ ಚಿಕ್ಕ ಮತ್ತು ಚೊಕ್ಕ ಸಂಸಾರ ನಡೆಸಿ ಇತರರಿಗೆ ಮಾದರಿಯಾಗಬೇಕು ಎಂದರು.

ಸಮಾರಂಭದಲ್ಲಿ 13 ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು. ಬಸನಗೌಡ ಪಾಟೀಲ, ಶಿವಕುಮಾರ ಮಸ್ಕಿ, ಯಲ್ಲೋಜಿರಾವ್‌ ಕೊರೆಕರ್‌, ಅಮರೇಶ ರಾಠೊಡ ಅಡೆಭಾವಿ ತಾಂಡಾ, ದ್ಯಾವನಗೌಡ, ಗ್ರಾಪಂ ಉಪಾಧ್ಯಕ್ಷ ಶೇಷಪ್ಪ ಗುಡಿಹಾಳ, ಗ್ರಾಪಂ ಸದಸ್ಯ ಆನಂದಕುಮಾರ, ವೀರೇಶ ತಲೇಖಾನ ಇತರರು ಇದ್ದರು.

ಆರಾಧನೆ: 18ನೇ ವರ್ಷದ ಆರ್ಹಾಳ ಶ್ರೀ ಗುರು ರುದ್ರಸ್ವಾಮಿಗಳ ಪುಣ್ಯಾರಾಧನೆ ಅಂಗವಾಗಿ ಸೋಮುವಾರ ರಾತ್ರಿ ಶಿವಭಜನೆ ಜರುಗಿದರೇ, ಮಂಗಳವಾರ ಬೆಳಗ್ಗೆ ಶ್ರೀ ಗುರು ರುದ್ರಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರುತಿ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next