Advertisement

ಅಂತರಂಗದ ಅರಿವಿನಿಂದ ಬದುಕು ಸುಂದರ

05:17 PM May 08, 2019 | Naveen |

ಮುದಗಲ್ಲ: ಮನುಷ್ಯ ಅಂತರಂಗ ಅರಿವಿನಿಂದ ಬದುಕಿದಾಗ ಮಾತ್ರ ಜೀವನ ಸುಂದರವಾಗಿರಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಹೇಳಿದರು.

Advertisement

ಸಮೀಪದ ತಿಮ್ಮಾಪುರ ಕಲ್ಯಾಣಾಶ್ರಮದ ಜನಮನ ಕಲ್ಯಾಣ ಜಾತ್ರೆಯ ನಿಮಿತ್ತ ನಡೆದ ಕಲ್ಯಾಣಶ್ರೀ ಪ್ರಶಸ್ತಿ ಪುರಸ್ಕಾರ ಹಾಗೂ ಮಹಿಳೆ ಮಕ್ಕಳು ಸಮಾಜ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯ ಅಜ್ಞಾನದ ಪೊರೆಯಿಂದ ಹೊರಬರಬೇಕು. ಬಾಹ್ಯದ ವಿಷಯಕ್ಕಿಂತ ಅಂತರಂಗದ ಅರಿವಿನಿಂದ ಸುಂದರವಾಗಿ ಬದುಕಬೇಕು. ಅಂತರಂಗದ ಜ್ಞಾನದಿಂದ ಸತ್ಯವನ್ನು ನೋಡಬಹುದು ಎಂದರು.

ಇಲಕಲ್ಲಿನ ಗುರು ಮಹಾಂತ ಸ್ವಾಮೀಜಿ ಮಾತನಾಡಿ, ಹಿಂದೊಮ್ಮೆ ಸಮಾಜ ಮಹಿಳೆಯರನ್ನು ಶೂದ್ರರಂತೆ ಕಾಣುತಿತ್ತು. ಮಹಿಳಿಗೆ ಸಂಸ್ಕಾರ ಕೊಡುತ್ತಿರಲಿಲ್ಲ. 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರ ಪರವಾಗಿ ಹೋರಾಟ ಮಾಡಿದರು. ಅದರ ಫಲವಾಗಿ ಮಹಿಳೆ ಸಶಕ್ತವಾಗಿ ಬೆಳೆಯಲು ಸಾಧ್ಯವಾಯಿತು. ಗಂಡು-ಹೆಣ್ಣೆಂಬ ತಾರತಮ್ಯ ಮಾಡಬಾರದು. ಸಮಾಜದಲ್ಲಿ ಹೆಣ್ಣಿಗೆ ಗೌರವ ನೀಡಬೇಕು ಎಂದರು.

ಕಲ್ಯಾಣಾಶ್ರಮದ ಮಹಾಂತ ಸ್ವಾಮೀಜಿ ಸಾಲಿಮಠ, ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮಹಾಂತೇಶ ಮಸ್ಕಿ, ಹಿರಿಯ ಸಾಹಿತಿ ಡಾ| ಬಸವಲಿಂಗ ಸೊಪ್ಪಿಮಠ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಚಿಂತಕರು, ಸಾಹಿತಿಗಳಾದ, ಯುಗಾವತಾರಿ ಬಸವ ಮಹಾಕಾವ್ಯದ ಕರ್ತೃ ಮಂಡ್ಯದ ಡಾ| ಪ್ರದೀಪಕುಮಾರ ಹೆಬ್ರಿ ಅವರಿಗೆ ಕರುನಾಡು ಕಲ್ಯಾಣಶ್ರೀ ಪ್ರಶಸ್ತಿ ಹಾಗೂ ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು. ಇದೇ ವೇಳೆ ಹೆಬ್ರಿಯವರ ಬಸವಗೀತೆ ಮತ್ತು ಅಕ್ಕ ಕೇಳವ್ವ ಕೃತಿ ಬಿಡುಗಡೆ ಮಾಡಲಾಯಿತು. ಅತಿಥಿಗಳು, ಗಣ್ಯರನ್ನು ಗೌರವಿಸಲಾಯಿತು.

Advertisement

ವಚನಗೀತೆಗೆ ಭರತನಾಟ್ಯ ಮಾಡಿದ ಧಾರವಾಡದ ರಕ್ಷಾ ರಾಜೇಶ ಜೋಶಿ ನೋಡುಗರ ಗಮನ ಸೆಳೆದರು. ಕಲರ್ಸ್‌ ಕನ್ನಡ ಚಾನಲ್ ಕನ್ನಡ ಕೋಗಿಲೆಯ ಕರಿಬಸವ ತಡಕಲ್ ಮಾನ್ವಿ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಶಿವಾನಂದ ಮಂದವಾಲೆ ಹಾಗೂ ರಮೇಶ ಕಟ್ಟಿಶಿಗ್ಗಾವಿ ವಚನಗಾಯನ ಹಾಡಿದರು. ಮುದಗಲ್ ಸತ್ಸಂಗ ಬಳಗದಿಂದ ಭಜನ ಕಾರ್ಯಕ್ರಮ ನಡೆಯಿತು. ಕಮತಗಿ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ. ಬೇಡರ ಕಾರಲಕುಂಟಿ ಕಾಲಜ್ಞಾನ ಮಠದ ಬಸವರಾಜ ಸ್ವಾಮೀಜಿ. ಡಾ| ಶಿವಶರಣಪ್ಪ ಇತ್ಲಿ. ಸುರೇಶಗೌಡ ಪಾಟೀಲ. ಮಹಾಂತೇಶ ಪಾಟೀಲ. ಚೆನ್ನಬಸನಗೌಡ ಕನ್ನಾಳ. ಶಿವಪ್ಪ ಸುಂಕದ ಹಾಗೂ ಭಕ್ತರು, ಗಣ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next