Advertisement
ಅಪರ ಕಾರ್ಯಾಲಯ ಕಲಬುರಗಿ, ಜಿಪಂ, ಸಾರ್ವಜನಿಕಶಿಕ್ಷಣ ಇಲಾಖೆ ರಾಯಚೂರು ಹಾಗೂ ಮಹ್ಮದಿಯಾ
ಶಿಕ್ಷಣ ಸೇವಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ
ಮದರ್ ಥೆರೇಸಾ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ
ರವಿವಾರ ನಡೆದ ಕಲಬುರಗಿ ವಿಭಾಗ ಮಟ್ಟದ ಪ್ರಾಥಮಿಕ
ಮತ್ತು ಪ್ರೌಢಶಾಲೆಗಳ ಬಾಲಕ, ಬಾಲಕಿಯರ ಹೊನಲು
ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನೆ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು. ರಾಷ್ಟ್ರೀಯ ಮಟ್ಟದಲ್ಲಿ ಪ್ರೊ.
ಕಬಡ್ಡಿ ಆರಂಭವಾದಾಗಿನಿಂದ ದೇಶಿ ಕಬಡ್ಡಿ ಆಟಕ್ಕೆ ಹೆಚ್ಚು
ಪ್ರಚಾರ ಸಿಕ್ಕಿದೆ. ಈಗ ನಡೆದ ಪ್ರೊ ಕಬಡ್ಡಿಯಲ್ಲಿ ಮಹಾನ್
ಕ್ರೀಡಾಪಟುಗಳು ಮಿಂಚುತ್ತಿದ್ದಾರೆ ಎಂದರು.
ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಡಿ.ಎಸ್.
ಹೂಲಗೇರಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ
ಕಾಲದಿಂದಲೂ ಮುದಗಲ್ಲ ನಗರ ಐತಿಹಾಸಿಕತೆಗೆ
ಹೆಸರಾಗಿದೆ. ಇತ್ತೀಚಿಗೆ ವಿಭಾಗ ಮಟ್ಟದ ಕ್ರೀಡಾಕೂಟ
ನಡೆಸುವ ಮೂಲಕ ಪಟ್ಟಣ ಕ್ರೀಡಾ ಕ್ಷೇತ್ರದಲ್ಲೂ ಹೆಸರು
ಮಾಡುತ್ತಿದೆ. ಕೆಕೆಆರ್‌ಡಿಬಿ ಯೋಜನೆಯಡಿ 2 ಕೋಟಿ
ರೂ.ಮೀಸಲಿರಿಸಿ ಲಿಂಗಸುಗೂರು ತಾಲೂಕು ಕ್ರೀಡಾಂಗಣ
ಅಭಿವೃದ್ಧಿಪಡಿಸಲಾಗುವುದು ಎಂದರು.
ಕ್ರೀಡಾಪಟುಗಳು ಉತ್ತಮ ಆಟ ಪ್ರದರ್ಶಿಸುವ
ಜೊತೆಗೆ ನಿರ್ಣಾಯಕರ ನಿರ್ಣಯಕ್ಕೆ ಬದ್ದರಾಗಿರಬೇಕು.
ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದರು.
ಮದರ್ ಥೆರೇಸಾ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ, ನಿವೃತ್ತ
ಡಿಐಜಿಪಿ ಟಿ.ಆರ್. ನಾಯ್ಕ ಮಾತನಾಡಿ, ವಿಭಾಗ ಮಟ್ಟದ
ಕ್ರೀಡಾಕೂಟ ಏರ್ಪಡಿಸಲು ಅವಕಾಶ ಕೊಟ್ಟ ಇಲಾಖೆ
ಅಧಿ ಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ದೈಹಿಕ ಶಿಕ್ಷಣ
ಅ ಧೀಕ್ಷಕ ಜಯಪ್ರಕಾಶರೆಡ್ಡಿ ಪ್ರಾಸ್ತಾವಿಕ ಮಾತನಾಡಿ, ಕಬಡ್ಡಿ
ಕ್ರೀಡಾಕೂಟದಲ್ಲಿ ಕಲಬುರಗಿ ವಿಭಾಗದ ಆರು ಜಿಲ್ಲೆಗಳ 24
ತಂಡಗಳ 500ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ
ಎಂದರು.
ನೀಲಂಗಾ ಷರೀಫ್ ಆನೆಹೊಸೂರಿನ ಸೈಯ್ಯದ್ ಹೈದರ್
ಪಾಷಾ ಖಾದ್ರಿ ಸಾನಿಧ್ಯ ವಹಿಸಿದ್ದರು. ಜಿಪಂ ಸ್ಥಾಯಿ ಸಮಿತಿ
ಅಧ್ಯಕ್ಷ ಬಸನಗೌಡ ಕಂಬಳಿ, ತಾಲೂಕು ಶಿಕ್ಷಣಾ ಧಿಕಾರಿ
ಅಶೋಕಕುಮಾರ ಶಿಂಧೆ, ಅಕ್ಷರ ದಾಸೋಹ ಯೋಜನಾಧಿ
ಕಾರಿ ಚಂದ್ರಶೇಖರ, ಮುಖಂಡರಾದ ಅಶೋಕಗೌಡ
ಪಾಟೀಲ, ಮಹಾಂತೇಶ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ದಾವೂದ್‌ಸಾಬ್, ಡಾ| ದೇವಿಕಾ ಪಾಟೀಲ, ಜಿಲ್ಲಾ ಜನಜಾಗೃತಿ
ವೇದಿಕೆ ಅಧ್ಯಕ್ಷ ಶಶಿಕಲಾ ಭೋವಿ, ಪುರಸಭೆ ಸದಸ್ಯರಾದ
ದುರುಗಪ್ಪ ಕಟ್ಟಮನಿ, ಅಜ್ಮಿàರ್‌ಸಾಬ್, ನಾಗರಾಜ ತಳವಾರ,
ಮಲ್ಲಿಕಾರ್ಜುನ ಗೌಡರ, ಶಿಕ್ಷಣ ಇಲಾಖೆ ಅ ಧಿಕಾರಿಗಳು
ಹಾಗೂ ದೈಹಿಕ ಶಿಕ್ಷಣಾ ಧಿಕಾರಿಗಳು, ಗಣ್ಯರು ಇದ್ದರು.