Advertisement

ಪಂಚತಂತ್ರ; ಗ್ರಾಪಂ ನೌಕರರು ಅತಂತ್ರ

12:47 PM Jul 22, 2019 | Team Udayavani |

ಮುದಗಲ್ಲ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಪಂಚತಂತ್ರದಲ್ಲಿ ಗ್ರಾಪಂ ನೌಕರರನ್ನು ನೋಂದಣಿ ಮಾಡಿದ್ದಲ್ಲಿ ಸರ್ಕಾರದ ನಿಧಿಯಿಂದ ಇಎಫ್‌ಎಂಎಸ್‌ ಮೂಲಕ ನೇರವಾಗಿ ಗ್ರಾಪಂ ನೌಕರರ ಖಾತೆಗೆ ವೇತನ ಪಾವತಿಸಲಾಗುತ್ತಿದೆ.

Advertisement

ಆದರೆ ಲಿಂಗಸುಗೂರ ತಾಲೂಕಿನ 38 ಗ್ರಾಮ ಪಂಚಾಯಿತಿಗಳಲ್ಲಿ 202 ಸಿಬ್ಬಂದಿಇದ್ದು, ಅದರಲ್ಲಿ ಸುಮಾರು 102 ಗ್ರಾಪಂ ನೌಕರರ ಮಾಹಿತಿಯನ್ನು ಆಯಾ ಪಿಡಿಒ ಹಂತದಲ್ಲಿ ಪಂಚತಂತ್ರದಲ್ಲಿ ಅಳವಡಿಸಲಾಗಿತ್ತು, ಅವುಗಳಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈಗಾಗಲೇ ಸುಮಾರು 70 ಜನ ನೌಕರರ ದಾಖಲೆಗಳನ್ನು ಪರಿಶೀಲಿಸಿ ಕೇವಲ 18 ಜನ ನೌಕರರಿಗೆ ಮಾತ್ರ ಅನುಮೋದನೆ ನೀಡಿದ್ದಾರೆ. ಇನ್ನುಳಿದ 52ಜನ ನೌಕರರ ಮಾಹಿತಿಯನ್ನು ತಿರಸ್ಕರಿಸಿದ್ದಾರೆ. ಉಳಿದ 52 ಜನ ನೌಕರರ ಪರಿಸ್ಥಿತಿ ಅಯೋಮಯವಾಗಿದೆ. ಇವರಲ್ಲಿ ಬಹಳಷ್ಟು ನೌಕರರು ಸುಮಾರು 10-15 ವರ್ಷಗಳಿಂದ ಕನಿಷ್ಠ ವೇತನ ಇಲ್ಲದೇ ಸೇವೆ ಸಲ್ಲಿಸಿದ್ದಾರೆ. ಹೆಚ್ಚಿನವರು ಅನಕ್ಷರಸ್ಥರಿದ್ದಾರೆ. ಇವರ ಶೈಕ್ಷಣಿಕ ದಾಖಲೆಗಳಿಲ್ಲ. ಹೀಗಾಗಿ ಜಿಲ್ಲಾ ವೈದ್ಯಕಿಯ ಮಂಡಳಿಯಿಂದ ಪಡೆದ ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಆಧಾರದ ಮೇಲೆ ಅನುಮೋದಿಸಬೇಕೆಂದು ಗ್ರಾಪಂ ನೌಕರರ ಸಂಘಟನೆ ಆಗ್ರಹಿಸಿದೆ. 30-40 ತಿಂಗಳುಗಳಿಂದ ವೇತನವಿಲ್ಲದೇ ನೀರಗಂಟಿ ಕೆಲಸ, ಗ್ರಾಪಂ ಸಫಾಯಿ ಹಾಗೂ ಗ್ರಾಪಂ ಅಟೆಂಡರ್‌ ಕೆಲಸ ನಿರ್ವಹಿಸುತ್ತಿರವ ನೌಕರರ ಬದುಕು ತುಂಬಾ ಶೋಚನಿಯವಾಗಿದೆ. ಗ್ರಾಮ ಪಂಚಾಯಿತಿಗಳು ಕರ ವಸೂಲಾತಿ ಹಣದಲ್ಲಿ ಶೇ. 40ರಷ್ಟು ಸಿಬ್ಬಂದಿ ವೇತನ ನೀಡುತ್ತಿಲ್ಲ ಹಾಗೂ ವೇತನ ನೀಡುವ ಭರವಸೆ ಕೂಡಾ ಇರುವುದಿಲ್ಲ. ಕಾರಣ ತಾಲೂಕು ಪಂಚಾಯಿತಿ ಅಧಿಕಾರಿಗಳು ಈಗಾಗಲೇ ತಿರಸ್ಕರಿಸಿದ ನೌಕರರ ಮಾಹಿತಿಯನ್ನು ಪಿಡಿಒ ಲಾಗಿನ್‌ನಿಂದ ತಮ್ಮ ಲಾಗಿನ್‌ಗೆ ತರಿಸಿಕೊಂಡು ಸಾಧ್ಯವಾದಷ್ಟು 5-6 ವರ್ಷಕ್ಕೂ ಮೆಲ್ಪಟ್ಟು ಸೇವೆ ಸಲ್ಲಿಸಿದ ನೌಕರರಿಗೆ ಸರಕಾದ ನಿಧಿಯಿಂದ ವೇತನ ದೊರೆಯುವಂತೆ ಮಾಡಬೇಕೆಂದು ಗ್ರಾಪಂ ಸಿಬ್ಬಂದಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next