Advertisement

ಲಕ್ಷಾಂತರ ಖರ್ಚಾದರೂ ನೀರಿಲ್ಲ

11:58 AM Feb 29, 2020 | Naveen |

ಮುದಗಲ್ಲ: ಸಮೀಪದ ನಾಗಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಪಿಕಳಿಹಾಳ ಗ್ರಾಮದಲ್ಲಿ ಸರಕಾರ ಲಕ್ಷಾಂತರ ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಪಿಕಳಿಹಾಳ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಜನಸಂಖ್ಯೆ ಹೊಂದಿದೆ. ಸದರಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗಿದೆ. ಘಟಕದ ಸೂತ್ತಲು ಎತ್ತರವಾದ ಕಾಂಪೌಂಡ್‌ ಗೊಡೆ ಕಟ್ಟಿಸಲಾಗಿದೆ. ಆದರೆ ಘಟಕದ ಹಿಂಬದಿಯ ಬಯಲು ಜಾಗವನ್ನು ಮಹಿಳೆಯರು, ಮಕ್ಕಳು ಶೌಚಾಲಯಕ್ಕೆ ಬಳಕೆ ಮಾಡಿಕೊಳ್ಳುವದುರಿಂದ ಘಟಕ ಆರಂಭಿಸುವುದು ಬೇಡ ದುರ್ವಾಸನೆ ಜನರು ಹೈರಾಣಾಗಿ ನೀರು ಪಡೆಯಲು ಬರುವುದಿಲ್ಲ. ಆದ್ದರಿಂದ ಸದರಿ ಘಟಕ ಸ್ಥಳಾಂತರಿಸಬೇಕೆಂಬ ಕಾರಣಕ್ಕಾಗಿ ಕಳೆದ 4-5ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ನಿರ್ಲಕ್ಷದಿಂದ ಗ್ರಾಮದ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಸಾಕಷ್ಟು ಫ್ಲೋರೈಡ್‌ ಯುಕ್ತ ನೀರು ಕುಡಿಯಬೇಕಾಗಿದೆ ಎಂದು ಪಿಕಳಿಹಾಳ ಗ್ರಾಮಸ್ಥರು ಆರೋಪಿಸಿದ್ದಾರೆ.

ಪಿಕಳಿಹಾಳ ಗ್ರಾಮಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಿ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಬೇಕು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

ಪಿಕಳಿಹಾಳ ಗ್ರಾಮದ ಜನರು ಫ್ಲೋರೈಡ್‌ಯುಕ್ತ ನೀರು ಕುಡಿದು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದು, ತಾಪಂ ಅಧಿಕಾರಿಗಳು ಗಮನ ಹರಿಸಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಿ ಗ್ರಾಮದ ಜನರಿಗೆ ಕುಡಿಯಲು ಶುದ್ಧ ನೀರು ಕೊಡಬೇಕು.
ಬಸವರಾಜ ಮಾಕಾಪುರ,
ಮಾಜಿ ಅಧ್ಯಕ್ಷರು, ತಾಪಂ ಲಿಂಗಸುಗೂರ

Advertisement

Udayavani is now on Telegram. Click here to join our channel and stay updated with the latest news.

Next