Advertisement

MUDA Scam: ನನ್ನ ಪತ್ನಿ ಯಾವುದೇ ಪತ್ರ ಬರೆದಿಲ್ಲ: ಸಿಎಂ ಸಿದ್ದರಾಮಯ್ಯ

12:24 AM Aug 22, 2024 | Team Udayavani |

ಕೊಪ್ಪಳ: ಮುಡಾಗೆ ನನ್ನ ಪತ್ನಿ ಬರೆದ ಪತ್ರ ತಿದ್ದಿದ್ದಾರೆ ಎಂದು ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳೆಲ್ಲ ಸುಳ್ಳು. ನನ್ನ ಪತ್ನಿ ಯಾವುದೇ ಪತ್ರವನ್ನೂ ಬರೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಪತ್ರಕರ್ತರ ಜತೆ ಅವರು ಮಾತನಾಡಿ, ಪಾದಯಾತ್ರೆ ಮಾಡುವ ವೇಳೆಯೇ ಇದನ್ನೆಲ್ಲ ಏಕೆ ಮಾತನಾಡಲಿಲ್ಲ. ಕುಮಾರಸ್ವಾಮಿ ಯಾವ ವಿಷಯವನ್ನೂ ತಾರ್ಕಿಕ ಅಂತ್ಯಕ್ಕೆ ಒಯ್ಯಲ್ಲ. ಅವರದ್ದು ಯಾವಾಗಲೂ ಹಿಟ್‌ ಆ್ಯಂಡ್‌ ರನ್‌ ಕೇಸ್‌ ಅಷ್ಟೇ. ಹಿಂದೆ ನನ್ನ ಬಳಿ ಪೆನ್‌ಡ್ರೈವ್‌ ಇದೆ ಎಂದು ಜೇಬಲ್ಲಿ ಇಟ್ಟುಕೊಂಡು ತೆಗೆದು ತೋರಿಸಿದ್ದರು. ಅದನ್ನು ಏನಾದರೂ ಬಿಡುಗಡೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

ಮುಡಾ ವಿಚಾರಣೆ ಸೆ. 9ಕ್ಕೆ ಮುಂದೂಡಿಕೆ
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಲ್ಲಿಕೆಯಾಗಿದ್ದ ದೂರಿನ ವಿಚಾರಣೆಯನ್ನು ಹೈಕೋರ್ಟ್‌ ಸೂಚನೆ ಮೇರೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೆ. 9ಕ್ಕೆ ಮುಂದೂಡಿದೆ.

ಟಿ.ಜೆ.ಅಬ್ರಹಾಂ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ಸಂಬಂಧ ಬುಧವಾರ ನ್ಯಾ| ಗಜಾನನ ಭಟ್‌ ಅವರಿದ್ದ ನ್ಯಾಯಪೀಠ ವಿಚಾರಣೆ ಆರಂಭಿಸಿತ್ತು. ಆಗ ದೂರುದಾರ ಅಬ್ರಹಾಂ, ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರ ಕುರಿತು ತಡೆ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಜನಪ್ರತಿನಿಧಿಗಳ ನ್ಯಾಯಾಲಯವು ಈ ದೂರುಗಳ ಸಂಬಂಧ ಯಾವುದೇ ತೀರ್ಪು ನೀಡಬಾರದು ಎಂದು ನಿರ್ದೇಶಿಸಿತಲ್ಲದೇ ಈ ಅರ್ಜಿ ವಿಚಾರಣೆಯನ್ನು ಮುಂದಿನ ತಿಂಗಳು ನಡೆಸುವಂತೆ ಕೋರಿದರು. ಅದಕ್ಕೆ ಸಮ್ಮತಿಸಿದ ಕೋರ್ಟ್‌, ಸೆ. 9ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ಸೂಚಿಸಿದೆ.

Advertisement

ದಾಖಲೆ ತಿದ್ದುವ ಪರಿಸ್ಥಿತಿ ಬಂದಿಲ್ಲ
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲೆ ತಿದ್ದುವಂತ ಪರಿಸ್ಥಿತಿ ರಾಜ್ಯ ಸರಕಾರಕ್ಕೆ ಬಂದಿಲ್ಲ. ಅಂತ ನೀಚ ಕೆಲಸಕ್ಕೆ ಯಾರೂ ಇಳಿದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ.

ಕೇಂದ್ರ ಸಚಿವ ಎಚ್‌. ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ನಾನು ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಕುಮಾರಸ್ವಾಮಿಯವರು ಯಾವತ್ತೂ ಹೆಲಿಕಾಪ್ಟರ್‌ ಹತ್ತೇ ಇಲ್ವ? ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next