Advertisement

MUDA Scam: ಪಾರದರ್ಶಕ ತನಿಖೆಗಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಸಂಸದ ಗದ್ದಿಗೌಡರ್‌

09:16 PM Sep 24, 2024 | Team Udayavani |

ರಬಕವಿ-ಬನಹಟ್ಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳಷ್ಟು ನುರಿತ, ಅನುಭವಿ ರಾಜಕಾರಣಿಯಾಗಿದ್ದು, ಹಿಂದಿನ ಪರಂಪರೆ ಅವಲೋಕಿಸಿದಾಗ ಇಂತಹ  ತೀರ್ಮಾನ ಬಂದ ಸಂದರ್ಭದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗೆ ಅವಕಾಶ ನೀಡಬೇಕು ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್‌ ಹೇಳಿದರು.

Advertisement

ಮಂಗಳವಾರ ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಸಾಮಾಜಿಕ ನ್ಯಾಯದ ವಿರುದ್ಧವಿದೆ ಎಂದು ಹೇಳಿದ್ದು ಸರಿಯಲ್ಲ. ಅವರ ಆಡಳಿತದಲ್ಲಿ ಹಲವು ಪ್ರಕರಣಗಳ ನೋಡಿದಾಗ ಕಾಂಗ್ರೆಸ್ ಪಕ್ಷವೇ ಸಾಮಾಜಿಕ ನ್ಯಾಯದ ವಿರುದ್ಧವಿದೆ ಎಂಬುದು ಗೊತ್ತಾಗುತ್ತದೆ ಎಂದು ಗದ್ದಿಗೌಡರ್‌ ತಿಳಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ಇದು ಸತ್ಯಕ್ಕೆ ಜಯವಾಗಿದೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡಿದ್ದು, ರಾಜ್ಯವನ್ನು ಅಧೋಗತಿಗೆ ತಂದು ಬಿಟ್ಟಿದೆ. ಬಿಜೆಪಿ ಮಿತ್ರ ಪಕ್ಷಗಳು ಮುಖಮಂತ್ರಿ ಸಿದ್ಧರಾಮಯ್ಯ ರಾಜೀನಾಮೆಗೆ ಹೋರಾಟ ಮಾಡುತ್ತವೆ. ಕೇವಲ ಮುಡಾ ಹಗರಣ ಮಾತ್ರವಲ್ಲ, ಎಸ್.ಟಿ ನಿಗಮದ ಹಣ ಲೂಟಿ ಹೊಡೆದಿದ್ದಾರೆ.

ಖರ್ಗೆಯವರು ಕೂಡ ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿ ತಮ್ಮ ಕುಟುಂಬಕ್ಕೆ ಐದು ಎಕರೆ ಭೂಪ್ರದೇಶ ಪಡೆದಿದ್ದು ಇದು ಕೂಡ ತನಿಖೆಯಾಗಲಿ. ಕಾಂಗ್ರೆಸ್‌ ಸರ್ಕಾರದಿಂದ ಯಾವುದೇ  ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಸರಿಯಾದ ಹಂಚಿಕೆ ಆಗುತ್ತಿಲ್ಲ ಈ ಮೂಲಕ ಸರ್ಕಾರ ನಾಟಕ ಆಡುತ್ತಿದೆ. ಸಿಎಂ ಸಿದ್ಧರಾಮಯ್ಯರಿಗೆ ರಾಜ್ಯದ ಜನರ ಬಗ್ಗೆ ಪ್ರೀತಿ ವಿಶ್ವಾಸವಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಶಾಸಕ ಸಿದ್ದು ಸವದಿ ಆಗ್ರಹಿಸಿದರು.
ಡಾ.ಎಂ.ಎಸ್.ದಡ್ಡೆನ್ನವರ, ಗೋವಿಂದ ಡಾಗಾ, ಶ್ರೀಶೈಲ ಯಾದವಾಡ, ಲಕ್ಕಪ್ಪ ಪಾಟೀಲ, ಶ್ರೀಶೈಲ ಬೀಳಗಿ, ಚಿದಾನಂದ ಹೊರಟ್ಟಿ, ಭೀಮಶಿ ಪಾಟೀಲ ಸೇರಿದಂತೆ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next