Advertisement
ಬುಧವಾರ ಮಧ್ಯಾಹ್ನ ಆದೇಶವಾದ ಬಳಿಕ ಆದೇಶ ಪ್ರತಿ ಬರಬಹುದೆಂಬ ನಿರೀಕ್ಷೆಯಲ್ಲಿ ಸಂಜೆಯವರೆಗೂ ಕಚೇರಿಯಲ್ಲೇ ಇದ್ದ ಲೋಕಾಯುಕ್ತ ಎಸ್‌ಪಿ ಎಫ್ಐಆರ್ ದಾಖಲಿಸಲು ಸಿದ್ಧತೆ ನಡೆಸಿದ್ದರು. ಗುರುವಾರ ಬೆಳಗ್ಗೆ ಆದೇಶ ಪ್ರತಿ ಸಂಗ್ರಹಿಸಿಕೊಂಡು ಬರಲು ಖುದ್ದಾಗಿ ಬೆಂಗಳೂರಿಗೆ ತೆರಳಿದ್ದು, ಲೋಕಾಯುಕ್ತ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಮಾರ್ಗದರ್ಶನದೊಂದಿಗೆ ಕಾನೂನು ಸಲಹೆ ಪಡೆದಿದ್ದಾರೆ ಎನ್ನಲಾಗಿದೆ.
ಮುಡಾ ಹಗರಣ ಸಂಬಂಧ ಸಿಎಂ ವಿರುದ್ಧ ಬುಧವಾರ ಜೆಡಿ ಎಸ್ ನಿಯೋ ಗ ದೊಂದಿಗೆ ದೂರು ನೀಡಲು ಆಗಮಿಸಿದ್ದ ವಕೀಲ ಪ್ರದೀಪ್ ಕುಮಾರ್, ಲೋಕಾ ಯುಕ್ತ ಎಸ್ಪಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಲು ಆಗಮಿಸಿದ್ದರು. ಆದರೆ ಎಸ್‌ಪಿ ಉದೇಶ್ ಇರದ ಕಾರಣ ಬರಿಗೈಯಲ್ಲಿ ಹಿಂದಿರುಗಿದರು. ಲೋಕಾಯುಕ್ತ ಎಸ್ಪಿ ನಾಪತ್ತೆ: ಸ್ನೇಹಮಯಿ ಕೃಷ್ಣ ಆರೋಪ
ಸಿಎಂ ಸಿದ್ದರಾಮಯ್ಯ ವಿರುದ್ಧ ದೂರುದಾರ, ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಕೋರ್ಟ್ ಆದೇಶದ ಪ್ರತಿಯೊಂದಿಗೆ ಮೈಸೂರು ಲೋಕಾ ಯುಕ್ತ ಕಚೇರಿಗೆ ಮತ್ತೂಮ್ಮೆ ದೂರು ನೀಡಲು ಗುರುವಾರ ಆಗಮಿಸಿದ್ದು ಸಂಜೆವರೆಗೂ ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಭೇಟಿಗಾಗಿ ಕಾದು ಕುಳಿತರೂ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.
Related Articles
Advertisement