Advertisement

MUDA Case: ಮೂರೇ ದಿನದಲ್ಲಿ ಪಿಎಂಎಲ್‌ಎ ಪ್ರಕರಣ ಹೇಗೆ ದಾಖಲಿಸಿದ್ರು?: ಅಭಿಷೇಕ್ ಸಿಂಘ್ವಿ 

11:01 PM Oct 01, 2024 | Team Udayavani |

ಹೊಸದಿಲ್ಲಿ: ಮುಡಾ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯಾಗಿಲ್ಲ, ಒಂದೇ ವಾರದ ಒಳಗೆ ಇಡಿ (ಜಾರಿ ನಿರ್ದೇಶನಾಲಯ)ಯಲ್ಲಿ ಹೇಗೆ ಪ್ರಕರಣ ದಾಖಲಿಸಲಾಗಿದೆ? ಅಕ್ರಮ ಹಣ ವರ್ಗಾವಣೆ ಎಂಬ ನಿರ್ಧಾರಕ್ಕೆ ಹೇಗೆ ಬಂದ್ರು? 3 ದಿನಗಳಲ್ಲಿ ಪಿಎಂಎಲ್‌ಎ (ಪ್ರಿವೆನ್ಷನ್‌ ಆಫ್‌ ಮನಿ ಲಾಂಡ್ರಿಂಗ್‌) ಕೇಸ್ ಹೇಗೆ ದಾಖಲು ಮಾಡಿದ್ರಿ? ಸಿದ್ದರಾಮಯ್ಯರನ್ನು ಹೆದರಿಸಲು ಈ ಪ್ರಕರಣ ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ  ಕಿಡಿಕಾರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮನು ಸಿಂಘ್ವಿ, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರು ನಿವೇಶನಗಳ ಹಿಂದಿರುಗಿಸುವ ತೀರ್ಮಾನವನ್ನು ಬಿಜೆಪಿ ಶ್ಲಾಘಿಸಬೇಕು, ಅದು ಬಿಟ್ಟು ಬಿಜೆಪಿಯವರು ದ್ವೇಷ ಮಾಡುತ್ತಿದ್ದಾರೆ. ತಮ್ಮ ಪತಿಯ ಸ್ವಚ್ಛ ರಾಜಕೀಯ ಜೀವನಕ್ಕೆ ಅಡ್ಡಿ ಆಗಬಾರದೆಂದು ಮುಡಾಗೆ 14 ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಬಿಜೆಪಿಯವರು ಈ ನಿರ್ಧಾರವನ್ನು ತಮಾಷೆ ಮಾಡುತ್ತಿದ್ದಾರೆ ಎಂದರು.

ಇಡಿ ಬಳಸಿಕೊಂಡು ವಿರೋಧಪಕ್ಷಗಳ ನಿಯಂತ್ರಿಸುತ್ತಿದೆ, ಬಿಜೆಪಿ ಸೇರುತ್ತೇವೆ ಎಂದವರ ಪ್ರಕರಣಗಳ ಮುಚ್ಚಾಲಾಗುತ್ತಿದೆ. ವಾಷಿಂಗ್ ಮೆಷಿನ್ ರೀತಿ ಇಡಿ ಕೆಲಸ ಮಾಡುತ್ತಿದೆ. ಅಜಿತ್ ಪವಾರ್, ಹಿಮಾಂತ್ ಬಿಸ್ವಾ ಶರ್ಮ ಹೀಗೆ ಅನೇಕ ನಾಯಕರು ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಬಿಜೆಪಿ ಜೊತೆ ಕೈ ಜೋಡಿಸಿದ್ರೆ ಕೇಸ್ ಕ್ಲೋಸ್ ಅಥವಾ ಜಾಮೀನಿಗೆ ವಿರೋಧವಿಲ್ಲ. ಇಲ್ಲದಿದ್ದರೆ ನಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜಕೀಯ ದ್ವೇಷದಿಂದಾಗಿ ಇಡಿಯಿಂದ ಪ್ರಕರಣ ದಾಖಲು: ಜೈರಾಂ ರಮೇಶ್‌
ಇ.ಡಿ. ಬಿಜೆಪಿಯ ಎಲೆಕ್ಷನ್‌ ಡಿಪಾರ್ಟ್‌ಮೆಂಟ್‌ ಆಗಿದೆ. ಕರ್ನಾಟಕದ ಜನರು ಬಿಜೆಪಿಗೆ ಬಹುಮತ ನೀಡದ ಕಾರಣ, ಸಿದ್ದರಾಮಯ್ಯ ಅವರ ಮೇಲೆ ದಾಳಿ ನಡೆಸಲಾಗಿದೆ. ಇ.ಡಿ. ದಾಖಲಿಸಿರುವ ಪ್ರಕರಣ ಸಂಪೂರ್ಣವಾಗಿ ರಾಜಕೀಯ ದ್ವೇಷದಿಂದ ಕೂಡಿದೆ. ಪ್ರಜಾಪ್ರಭುತ್ವದಿಂದ ಆಯ್ಕೆಯಾದ ಸರ್ಕಾರವನ್ನು ಉರುಳಿಸುವ ಕೆಲಸ ಮಾಡಲಾಗುತ್ತಿದೆ. ನಾವು ಇದಕ್ಕೆ ಹೆದರುವುದಿಲ್ಲ. ಸತ್ಯ ಆಚೆ ಬರುತ್ತದೆ. ನಾವು ನೀಡಿರುವ ಗ್ಯಾರಂಟಿಗಳ ಪೂರ್ಣಗೊಳಿಸುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌  ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next