Advertisement
ರಾಯಚೂರು ಕಾಂಗ್ರೆಸ್ ಸಂಸದರಾಗಿರುವ ಕುಮಾರ್ ನಾಯಕ್ ಮುಡಾ ಹಗರಣ ನಡೆದ ಸಂದರ್ಭ ಮೈಸೂರು ಡಿಸಿಯಾಗಿದ್ದರು.
ಕುಮಾರ್ ನಾಯಕ್ ಅವರನ್ನು ಸುಮಾರು ಆರೂವರೆ ತಾಸುಗಳ ಕಾಲ ವಿಚಾರಣೆ ನಡೆಸಿದ್ದ ಇ.ಡಿ. ಅಧಿಕಾರಿಗಳು ಅಂದು ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಮುಡಾ ನಿವೇಶನದ ಸಂಬಂಧ ನಡೆದಿದ್ದ ಬೆಳವಣಿಗೆಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಕುಮಾರ್ ನಾಯಕ್ ಮೈಸೂರಿನಲ್ಲಿ 2002ರಿಂದ 2005ರ ವರೆಗೆ 3 ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿದ್ದರು.
Related Articles
Advertisement
ಸಿಎಂ ಖಾಸಗಿ ಆಪ್ತ ಕಾರ್ಯದರ್ಶಿಎಸ್.ಜಿ. ದಿನೇಶ್ ಕುಮಾರ್ ಮೈಸೂರಿನಲ್ಲಿ ಸಿಎಂಗೆ ಸೇರಿದ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಪಾರ್ವತಿ ಪರವಾಗಿ ಅರ್ಜಿ ವಿಲೇವಾರಿ ಮಾಡಿದ್ದರು. ಇವರು ಅರ್ಜಿ ಹಾಕಿ ಪಾರ್ವತಿಯವರ ಹೆಸರಿಗೆ ನಿವೇಶನ ಮಾಡಿಕೊಟ್ಟಿದ್ದರು ಎನ್ನಲಾಗಿದೆ. 2022ರಲ್ಲಿ ಖಾತೆಗಾಗಿ ಪಾರ್ವತಿಯವರ ಹೆಸರಿನಲ್ಲಿ ಹಾಕಲಾಗಿದ್ದ ಅರ್ಜಿಗೆ ಸಹಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು¤. ಇದೀಗ 14 ಸೈಟ್ ವಿಚಾರದ ಸಂಬಂಧ ಇಡಿ ಅಧಿಕಾರಿಗಳು ದಿನೇಶ್ ಅವರಿಂದ ಹಲವು ಮಾಹಿತಿ ಕಲೆ ಹಾಕಿ ಬೆವರಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಸಿಎಂ ಪತ್ನಿ ಪಾರ್ವತಿ 13 ಸೈಟ್ ಕೇಳಿದ್ದರು ಎನ್ನಲಾಗುತ್ತಿದೆ. ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ
ವಿಚಾರಣೆ ಬಳಿಕ ರಾಯಚೂರು ಸಂಸದ ಕುಮಾರ್ ನಾಯಕ್ ಸುದ್ದಿಗಾರರ ಜತೆಗೆ ಮಾತನಾಡಿ, ಇ.ಡಿ. ಅಧಿಕಾರಿಗಳು ಸಮನ್ಸ್ ನೀಡಿದ್ದ ಹಿನ್ನೆಲೆಯಲ್ಲಿ ಗೌರವದಿಂದ ಬಂದು ಹಾಜರಾಗಿದ್ದೇನೆ. ಇ.ಡಿ. ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಕೊಟ್ಟಿದ್ದೇನೆ. ನಾನು ಜಿಲ್ಲಾಧಿಕಾರಿಯಾಗಿದ್ದಾಗ ಯಾವ ಕೆಲಸ ಮಾಡಿದ್ದೆ ಎಂದು ತಿಳಿಸಿದ್ದೆ. ದಾಖಲೆಗಳ ಮೂಲಕ ಯಾವ ಮಾಹಿತಿ ನೀಡಬೇಕೋ ನೀಡಿದ್ದೇನೆ. ಮತ್ತೆ ನನ್ನನ್ನು ವಿಚಾರಣೆಗೆ ಕರೆದರೆ ಹೋಗುತ್ತೇನೆ. ಏನು ಉತ್ತರ ಕೊಡಬೇಕೋ ಕೊಟ್ಟಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ತಿಳಿಸಿದ್ದಾರೆ.