Advertisement
ಹೀಗಾಗಿ ಸಿಎಂಗೆ ಮತ್ತೂಂದು ಸಂಕಷ್ಟ ಎದು ರಾಗಿದೆ. ಸರಕಾರ-ರಾಜಭವನದ ನಡುವೆ ಶೀತಲ ಸಮರ ನಡೆಯುತ್ತಲೇ ಇದ್ದು,ರಾಜ್ಯಪಾಲರು ತಮ್ಮ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವು ದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
Related Articles
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ಹಾಗೂ ಪಕ್ಕದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಸಿಎಂ ಮೌಖಿಕ ಆದೇಶದ ಮೇರೆಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 387 ಕೋಟಿ ರೂ.ಗಳನ್ನು ಕಾಮಗಾರಿಗಳನ್ನು ನಿಯಮಬಾಹಿರವಾಗಿ ಕೈಗೊಂಡಿದೆ. ಪ್ರಾಧಿಕಾರದಲ್ಲಿ ಹಣಕಾಸಿನ ಕೊರತೆ ಇದ್ದರೂ ಸಿಎಂ ಅವರ ಮೌಖಿಕ ಸೂಚನೆ ಮೇರೆಗೆ ಕಾಮಗಾರಿ ಕೈಗೊಂಡಿದ್ದು, ಇದು ಕರ್ನಾಟಕ ನಗರಾಭಿವೃದ್ಧಿ ವಿಧೇಯಕ 1987ರ ಸೆಕ್ಷನ್ 15 ಮತ್ತು 25ರ ವಿರುದ್ಧವಾದ ಕಾಮಗಾರಿಯಾಗಿದೆ. ಅಧಿಕಾರ ದುರ್ಬಳಕೆಯೂ ಆಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ದೂರುದಾರ ನಟರಾಜ್ ಅವರು ರಾಜ್ಯಪಾಲರಿಗೆ ಕೋರಿದ್ದರು.
Advertisement
ಸಿಎಸ್ ಉತ್ತರ?ರಾಜಭವನದ ಈ ಪತ್ರವನ್ನು ಉಲ್ಲೇಖಿಸಿದ ಮುಖ್ಯ ಕಾರ್ಯದರ್ಶಿ ಅವರು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಂದ ಉತ್ತರ ನೀಡುವಂತೆ ಸೂಚಿಸಿದ್ದು, ನಗರಾಭಿವೃದ್ಧಿ ಇಲಾಖೆಯಿಂದ ಬಂದ ಉತ್ತರವನ್ನು ರಾಜಭವನಕ್ಕೆ ತಲುಪಿಸಲು ನಿರ್ಧರಿಸಿದ್ದಾರೆ. ಏನಿದು ಪ್ರಕರಣ?
– ಶ್ರೀರಂಗಪಟ್ಟಣದಲ್ಲಿ ಮುಡಾದಿಂದ ನಿಯಮ ಬಾಹಿರ ಕಾಮಗಾರಿ
-ಒಟ್ಟು 387 ಕೋಟಿ ರೂ.ಗಳ ಕಾಮಗಾರಿ
-ಮೈಸೂರಿನ ಪಿ.ಎಸ್. ನಟರಾಜ್‌ರಿಂದ ರಾಜ್ಯಪಾಲರಿಗೆ ದೂರು
-ಸರಕಾರದ ಬಳಿ ಇರುವ ಮಾಹಿತಿ ನೀಡಲು ಸೂಚನೆ