Advertisement
ಕೃಷಿಯತ್ತ ಆಸಕ್ತಿ ಹುಟ್ಟಿದ್ದು ಹೇಗೆ?ಸ್ವಾಮಿನಾಥನ್ ಅವರೇ ಹೇಳಿದ್ದಂತೆ ಅವರು ತಮ್ಮ ಯೌವನ ಕಾಲದಲ್ಲಿ ಬಹಳ ಆದರ್ಶವಾದಿ, ಸಿದ್ಧಾಂತ ವಾದಿಯಾಗಿದ್ದರು. 1942ರಲ್ಲಿ ಮಹಾತ್ಮ ಗಾಂಧಿ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ಆರಂಭಿಸಿ ದಾಗ, ಅದರಿಂದ ಬಹಳ ಪ್ರಭಾವಿತರಾಗಿ ದ್ದರು. ಅದೇ ಸಂದರ್ಭದಲ್ಲಿ ಅಂದರೆ 1942-43ರಲ್ಲಿ ಬಂಗಾಲದಲ್ಲಿ ತೀವ್ರ ಬರ ಬಂದಿತ್ತು. ಆಹಾರವಿಲ್ಲದೇ 20ರಿಂದ 30 ಲಕ್ಷ ಮಂದಿ ಮೃತಪಟ್ಟಿದ್ದರು. ಇವೆಲ್ಲವನ್ನೂ ನೋಡಿದ ಯುವಕ ಸ್ವಾಮಿನಾಥನ್‌ಗೆ ತಾನೇನು ಮಾಡಬಹುದು ಎಂಬ ಪ್ರಶ್ನೆ ಹುಟ್ಟಿತ್ತು.
ಬಂಗಾಳದಲ್ಲಿ ಬ್ರಿಟಿಷ್ ಸರಕಾರದ ನೀತಿಗಳಿಂದ ಜನರು ಹಸಿವಿನಿಂದ ಸಾಯತೊಡಗಿದರು. 2ನೇ ವಿಶ್ವ ಯುದ್ಧದಲ್ಲಿ ತೊಡಗಿದ್ದ ಬ್ರಿಟಿಷರು, ಸೈನಿಕರಿಗೆ ಆಹಾರ ನೀಡಲು ಜನರ ಆಹಾರವನ್ನು ಕಸಿದುಕೊಳ್ಳ ತೊಡಗಿ ದರು. ದೇಶದಲ್ಲಿ ಆಹಾರೋತ್ಪಾದನೆಯೂ ಕುಸಿದಿತ್ತು. ಇವೆಲ್ಲವನ್ನೂ ನೋಡಿದ ಸ್ವಾಮಿನಾಥನ್ ಬೆಳೆಯನ್ನು ಹೆಚ್ಚಿಸುವ, ಕಡಿಮೆ ಖರ್ಚಿನಲ್ಲಿ ಹೆಚ್ಚು ಫಸಲು ತೆಗೆಯುವ ತಳಿಗಳ ಸಂಶೋಧನೆ, ಅವುಗಳ ಬೆಳವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಯುರೋಪ್‌ನವರೆಗೆ ಯಾನ
ಸ್ವಾಮಿನಾಥನ್ ಸಂಶೋಧನೆಯಲ್ಲಿ ಪಕ್ವಗೊಂಡಂತೆ ಅವರಿಗೆ ಬೇರೆಬೇರೆ ದೇಶಗಳಿಂದ ಆಹ್ವಾನ ಬರತೊಡ ಗಿತು. 1954ರಲ್ಲಿ ಯೂರೋಪ್, ಅಮೆರಿಕದ ಹಲವು ಸಂಸ್ಥೆ ಗಳಿಗೆ ಭೇಟಿ ನೀಡಿದರು. ಒಡಿಶಾದ ಕಟಕ್‌ನಲ್ಲಿ ರುವ ಕೇಂದ್ರ ಅಕ್ಕಿ ಸಂಶೋಧನ ಸಂಸ್ಥೆಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಜಪೊನಿಕಾ, ಇಂಡಿಕಾ ತಳಿಯ ಅಕ್ಕಿಗಳು, ಅವುಗಳ ವಂಶವಾಹಿಯನ್ನು ಇನ್ನೊಂದು ತಳಿಗೆ ವರ್ಗಾಯಿಸುವ ಯತ್ನದಲ್ಲಿ ತೊಡಗಿದರು.
Related Articles
ಭಾರತದಲ್ಲಿ 1960ರ ದಶಕದಲ್ಲಿ ತೀವ್ರ ಬರಗಾಲವಿತ್ತು. ವಿದೇಶ ದಿಂದ ಗೋದಿಯನ್ನು ಆಮದು ಮಾಡಿಕೊಳ್ಳ ಬೇಕಾಗಿತ್ತು. ಕೆಲವು ತಜ್ಞರು, “ಭಾರತ ತನ್ನ ಬಾಯಿ ಯನ್ನು ತುಂಬಿ ಕೊಳ್ಳಲು ಒಂದು ಹಡಗನ್ನು ನಡೆಸುತ್ತಿದೆ’ ಎಂಬಂತೆ ವಿಶ್ಲೇಷಣೆ ಮಾಡಿದ್ದರು. ಅರ್ಥಾತ್ ಜೀವವು ಳಿಸಿ ಕೊಳ್ಳು ವುದೇ ಆಗಿನ ಪರಿಸ್ಥಿತಿ ಯಾ ಗಿತ್ತು. ಭಾರತ ಸ್ವತಂತ್ರ ಗೊಳ್ಳು ವಾಗ ವಾರ್ಷಿಕ ಗೋಧಿಉತ್ಪಾದನೆ 60 ಲಕ್ಷ ಟನ್‌ಗಳಾ ಗಿತ್ತು. 1962ರ ಹೊತ್ತಿಗೆ ಅದು 1 ಕೋಟಿ ಟನ್‌ಗಳಿ ಗೇರಿತು. 1964ರಿಂದ 68ರ ಹೊತ್ತಿಗೆ ವಾರ್ಷಿಕ ಗೋಧಿ ಉತ್ಪಾದನೆ 1.7 ಕೋಟಿ ಟನ್‌ಗಳಿಗೇರಿತು. ಆದ್ದ ರಿಂದಲೇ ಹಸಿರುಕ್ರಾಂತಿ ಎಂಬ ಪದ ಬಳಕೆಗೆ ಬಂತು. ಈ ಸಾಧ ನೆ ಯಲ್ಲಿ ಸ್ವಾಮಿನಾಥನ್ ಪಾತ್ರ ಅತ್ಯಂತ ಮಹತ್ವದ್ದು.
Advertisement
ಸ್ವಾಮಿನಾಥನ್ ಮಾಡಿದ ಪ್ರಯೋಗಗಳೇನು?ಆಗಿನ ಭಾರತದ ಗೋದಿ, ಅಕ್ಕಿ ತಳಿಯಲ್ಲಿ ಒಂದು ದೊಡ್ಡ ಸಮಸ್ಯೆಯಿತ್ತು. ತಳಿಗಳು ಎತ್ತರವಾಗಿ, ಆದರೆ ತೆಳುವಾಗಿ ಬೆಳೆಯುತ್ತಿದ್ದವು. ತೆನೆಗಳ ಭಾರ ತಡೆದು ಕೊಳ್ಳದೇ ನೆಲಕ್ಕೆ ಒರಗುತ್ತಿದ್ದವು. ಈ ಸಮಸ್ಯೆಯನ್ನು ಬಗೆಹರಿಸಲು ಸ್ವಾಮಿನಾಥನ್ ಅಮೆರಿಕಕ್ಕೆ ಹೋದರು. ಅಲ್ಲಿ ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದ ಖ್ಯಾತ ವಿಜ್ಞಾನಿ, ನಾರ್ಮನ್ ಬೋರ್ಲಾಗ್‌ರನ್ನು ಭೇಟಿ ಮಾಡಿದರು. ಅವರು ಕುಳ್ಳಗಿನ ತಳಿಯನ್ನು ಅಭಿವೃದ್ಧಿಪಡಿಸಿದ್ದರು. 1970ರಲ್ಲಿ ಅವರು ನೊಬೆಲ್ ಕೂಡ ಪಡೆದಿದ್ದರು. ಅವರಿಂದ ಸಲಹೆಗಳನ್ನು ಪಡೆದು ನಾರಿನ್-10 ತಳಿಯನ್ನು ಭಾರತಕ್ಕೆ ತಂದರು. ಅದರ ವಂಶವಾಹಿಗಳನ್ನು ಬಳಸಿ, ಇಲ್ಲಿನ ಭತ್ತ, ಗೋದಿಯ ತಳಿಯನ್ನು ಕುಳ್ಳಗೊಳಿಸುವ ಯತ್ನಕ್ಕೆ ಕೈಹಾಕಿದರು. ಅದರಲ್ಲಿ ಭಾರೀ ಯಶಸ್ಸು ಪಡೆದರು. ಪ್ರಶಸ್ತಿ, ಪದವಿ
1987ರಲ್ಲಿ ಅವರಿಗೆ ಜನರಲ್ ಫುಡ್ಸ್ ಪ್ರಾಯೋ ಜಕತ್ವದ “ವಿಶ್ವ ಆಹಾರ ಪ್ರಶಸ್ತಿ ಲಭಿಸಿತು. 1971ರಲ್ಲಿ ರೇಮನ್ ಮ್ಯಾಗ್ಸೆಸೆ, 1967ರಲ್ಲಿ ಪದ್ಮಶ್ರೀ, 1972ರಲ್ಲಿ ಪದ್ಮಭೂಷಣ, 1989ರಲ್ಲಿ ಪದ್ಮವಿಭೂಷಣ ಪುರಸ್ಕಾರ ಗಳು ಲಭಿಸಿದವು. ಐಎಆರ್‌ಐ ಸಂಸ್ಥೆಯ ಮುಖ್ಯಸ್ಥರಾ ಗಿದ್ದರು. ಐಸಿಎಆರ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಸಾಧನೆಗಳೇನು?
ಭಾರತದ ಅಕ್ಕಿ, ಗೋಧಿ ತಳಿಗಳ ದೌರ್ಬಲ್ಯವನ್ನು ಪತ್ತೆ ಮಾಡಿದರು. ಅವುಗಳ ಗುಣಮಟ್ಟವನ್ನು ವೃದ್ಧಿಸಲು ವಂಶವಾಹಿಗಳ ಕಸಿ ಮಾಡಿದರು.
ಉತ್ತಮ ತಳಿಗಳ ವಂಶವಾಹಿ ತಂದು ಭಾರತದ ತಳಿಗಳಿಗೆ ಜೋಡಿಸಿದರು.
ಭಾರತದಲ್ಲೇ ಹಲವು ವಿಧದ ಆಹಾರಧಾನ್ಯ ಸಸ್ಯ ತಳಿ ಬೆಳೆಸಿದರು.
ಎತ್ತರಕ್ಕೆ, ಕೃಶವಾಗಿ ಬೆಳೆಯುತ್ತಿದ್ದ ತಳಿಗಳನ್ನು ಅರೆ ಎತ್ತರಕ್ಕೆ ಸಮೃದ್ಧವಾಗಿ ಬೆಳೆಯುವಂತೆ ಮಾಡಿದರು.