Advertisement

MS Swaminathan ಕೃಷಿಗೆ ಕಸುವು ತುಂಬಿದ್ದ ವಿಜ್ಞಾನಿ ಸ್ವಾಮಿನಾಥನ್‌

12:45 AM Sep 29, 2023 | Team Udayavani |

ಹಸುರು ಕ್ರಾಂತಿಯ ಪರಿಣಾಮದಿಂದ ಆಹಾರ ಸ್ವಾವಲಂಬನೆ ಆಯಿತು. ಆದರೆ ಕೃಷಿ ವಲಯ ಸದೃಢ ಆಯಿತೇ? ರೈತ ವಲಯದಲ್ಲಿ ಸುಧಾರಣೆ ಆಯಿತೇ ಎನ್ನುವ ಪ್ರಶ್ನೆಗಳಿಗೆ ಯಾರೂ ಉತ್ತರ ಕಂಡುಕೊಂಡಿರಲಿಲ್ಲ. ಆಹಾರ ಭದ್ರವಾದರೂ ರೈತರ ಆದಾಯ ಭದ್ರವಾಗದೆ ಆತ್ಮಹತ್ಯೆ ದಾರಿ ಹಿಡಿದ ಅನ್ನದಾತನಿಗೆ ಅವರ ಮನಸ್ಸು ಮಿಡಿದಿತ್ತು. ರಾಷ್ಟ್ರೀಯ ರೈತರ ಆಯೋಗದ ಅಧ್ಯಕ್ಷರಾಗಿ ಸಾಕಷ್ಟು ಅಧ್ಯಯನ ನಡೆಸಿದರು. ಆಹಾರ ಭದ್ರತೆಯ ಜತೆಗೆ ರೈತರ ಸಂಕಟ ನಿವಾರಿಸುವುದೂ ಮುಖ್ಯವೆನಿಸಿತ್ತು. ಈ ವಿಚಾರದಲ್ಲಿ ಅವರು ಕೊಟ್ಟ ವರದಿಯ ಪಾತ್ರ ಹಿರಿದು. ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಎಲ್ಲ ಸರಕಾರಗಳಂತೆ ಕರ್ನಾಟಕ ಸರಕಾರವೂ ಕಾಲ-ಕಾಲಕ್ಕೆ ಅವರ ಸಲಹೆಗಳನ್ನು ಪಡೆದುಕೊಂಡಿದೆ.

Advertisement

ಅಂತಾರಾಷ್ಟ್ರೀಯ ಖ್ಯಾತಿಯ ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿ ನಾಥನ್‌ ಅವರಿಂದು ಭೌತಿಕವಾಗಿ ನಮ್ಮೊಡನೆ ಇಲ್ಲ. 98 ವರ್ಷಗಳ ಸುದೀರ್ಘ‌ ಜೀವನ ನಡೆಸಿದ ಅವರ ನಿಧನದಿಂದ ಕೃಷಿ ಸಂಶೋ ಧನ ವಲಯಕ್ಕೆ ಆಗಿರುವ ನಷ್ಟ ಎಷ್ಟೆಂಬು ದನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ.

ನಾವೆಲ್ಲರೂ ಅವರನ್ನು ಕೇವಲ ವಿಜ್ಞಾನಿ ಹಾಗೂ ಸಂಶೋ ಧಕರಾಗಿಯಷ್ಟೇ ನೋಡಿದ್ದೇವೆ. ಅದ ರೊಂದಿಗೆ ವಿಜ್ಞಾನ, ಸಂಶೋಧನೆಗಳನ್ನು ಕಾರ್ಯ ರೂಪಕ್ಕೆ ತಂದ ಸಮರ್ಥ ಆಡಳಿ ತಗಾರರೂ ಹೌದು. ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ಕೃಷಿ ಇಲಾಖೆ ಯ ಅತ್ಯುನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದವರು. ದೇಶದ ಅನೇಕ ಕೃಷಿ ಸಂಸ್ಥೆಗಳಿಗೆ ಮಾರ್ಗ ದರ್ಶ ಕರಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸೇವೆ ಮಾಡಿದ್ದಾರೆ. ವಿಜ್ಞಾನ, ತಂತ್ರಜ್ಞಾನಗಳು ಸಂಶೋ ಧನ ವಸ್ತುವಾಗಿ ಪ್ರಯೋ ಗಾಲಯಕ್ಕೆ ಸೀಮಿತವಾಗ ಬಾರದು. ಜನಸಾಮಾನ್ಯರ ಬಳಕೆಗೆ ಬರಬೇಕು ಎಂಬ ಸಾಧನೆಯನ್ನು ಸಾಧಿಸಿದ ಕ್ರಾಂತಿ ಕಾರ ಅವರು.

ತಮಗಿದ್ದ ವಿಜ್ಞಾನ-ತಂತ್ರಜ್ಞಾನಗಳ ಅಪಾರ ಸಾಮರ್ಥ್ಯ ಹಾಗೂ ಚಾಣಾಕ್ಷ ಆಡಳಿತ ವೈಖರಿಯಿಂದ ಈ ದೇಶದಲ್ಲಿ ಹಸುರು ಕ್ರಾಂತಿಯನ್ನೇ ಸೃಷ್ಟಿ ಸಿದ ಹರಿಕಾರರು. ಭಾರತೀಯ ಕೃಷಿಗೆ ಅವರು ಕೊಟ್ಟಿರುವ ಕಾಣೆR ಅಷ್ಟಿಷ್ಟಲ್ಲ. ಕೃಷಿ, ಆಹಾರದ ಸ್ವಾವಲಂಬನೆ ಮತ್ತು ರೈತರ ಆದಾಯ ಭದ್ರತೆಯ ವಿಚಾ ರದಲ್ಲಿ ಅವರು ವಹಿಸಿದ ಕಾಳಜಿ ಅಪಾರ. ಈ ದಿಸೆಯಲ್ಲಿ ಅವರು ರೈತಾಪಿ ವರ್ಗದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿ ದ್ದಾರೆ. ಅವರಿಗೆ ಗೌರವಪೂರ್ಣ ವಿದಾಯ ಹೇಳುವ ಹೊಣೆ ಗಾರಿಕೆ ಈಗ ಸರಕಾರದ ಮೇಲಿದೆ. ರಾಷ್ಟ್ರೀಯ ಕೃಷಿ ಆಯೋಗದ ಅಧ್ಯಕ್ಷರಾಗಿ 2006ರಲ್ಲಿ ಅವರು ನೀಡಿದ್ದ ಆರೇಳು ಸಂಪುಟಗಳ ವರದಿಯನ್ನು ಅನುಷ್ಠಾನಕ್ಕೆ ತರುವ ಮೂಲಕ ಗೌರವಿಸಬೇಕಿದೆ. ರೈತರ ಉತ್ಪನ್ನಗಳಿಗೆ ಉತ್ಪಾದನ ವೆಚ್ಚದ ಮೇಲೆ ಶೇ.5ರಷ್ಟು ಲಾಭಾಂಶ ಸಿಗುವಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಎಲ್ಲ ನೌಕರರಂತೆ ರೈತರೂ “ಟೇಕ್‌ಹೋಮ್‌’ ಪಡೆಯುವಂತಾಗಬೇಕು. ರೈತರ ಆದಾಯ ಭದ್ರತೆಗೆ ಅಭದ್ರತೆ ಬಂದರೆ ಆಹಾರ ಭದ್ರತೆಗೂ ತೊಂದರೆ ಉಂಟಾಗುತ್ತದೆ.

ಇಂತಹದೊಂದು ಅಪಾಯದ ಮುನ್ಸೂಚನೆ ಹಾಗೂ ಎಚ್ಚರಿಕೆಯನ್ನು ಸ್ವಾಮಿ ನಾಥನ್‌ ಅವರು ಇಡೀ ದೇಶಕ್ಕೆ ಕೊಟ್ಟು ಹೋ ಗಿದ್ದಾರೆ. ಆಳುವ ವರು ಎಚ್ಚೆತ್ತುಕೊಳ್ಳಬೇಕಿದೆ. ಸ್ವಾಮಿನಾಥನ್‌ ಅವರ ಶಿಫಾರಸು ಗಳನ್ನು ಅನು ಷ್ಠಾನಕ್ಕೆ ತರಲು ಇಚ್ಛಾಶಕ್ತಿ ಪ್ರದರ್ಶಿ ಸಬೇಕಿದೆ. ಸ್ವಾಮಿ ನಾಥನ್‌ ಅವರು ಸೃಷ್ಟಿಸಿದ ಹಸುರು ಕ್ರಾಂತಿ, ಆಹಾರ ಕ್ರಾಂತಿ ಮರೆಯಾಗಿ “ಆಮದು ಕ್ರಾಂತಿ’ ಯಂತಹ ಮೂರ್ಖತನಕ್ಕೆ ಜೋತು ಬೀಳಬೇಕಾಗುತ್ತದೆ.

Advertisement

ಭತ್ತದ ತಳಿಯ ಸಂಶೋಧನೆಯಲ್ಲಿ ಬತ್ತದ ಚಿಲುಮೆ: ಸ್ವಾಮಿನಾಥನ್‌ ಅವರು ಭತ್ತದ ತಳಿ ವಿಜ್ಞಾನಿ. ಅಂತಾರಾಷ್ಟ್ರೀಯ ಭತ್ತ ಸಂಶೋಧನ ಸಂಸ್ಥೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದವರು. ವಿದೇಶಿ ಹಡಗುಗಳ ಮೂಲಕ ಆಹಾರ ಬಂದರಷ್ಟೇ ಹೊಟ್ಟೆ ತುಂಬುವ ಹೀನಾಯ ಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಆಹಾರದಲ್ಲಿ ಸಮೃದ್ಧತೆ ಸಾಧಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟವರು ಸ್ವಾಮಿನಾಥನ್‌. ವಿಶ್ವ ಆಹಾರ ಪ್ರಶಸ್ತಿ, ರೋಮನ್‌ ಮ್ಯಾಗ್ಸೆಸೆ ಪ್ರಶಸ್ತಿ, ಪದ್ಮವಿಭೂಷಣ ಹೀಗೆ ಅನೇಕ ಪ್ರಶಸ್ತಿಗಳು ಅರಸಿ ಅವರ ಮುಡಿ ಸೇರಿವೆ. ತಮಗೆ ಸಂದ ಅನೇಕ ಪ್ರಶಸ್ತಿ ಮೊತ್ತಗಳಿಗೆ ಹಣ ಸೇರಿಸಿ ಚೆನ್ನೈಯಲ್ಲಿ ಡಾ| ಎಂ.ಎಸ್‌. ಸ್ವಾಮಿನಾಥನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸ್ಥಾಪಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರು ಮತ್ತು ರೈತರನ್ನು ಒಳಗೊಂಡ ಅನೇಕ ಪ್ರಯೋಗಗಳಿಗೆ ಇದು ದಾರಿ ಮಾಡಿಕೊಟ್ಟಿತು. ಕೃಷಿ ಕ್ಷೇತ್ರಕ್ಕೆ ಅಸಾಧ್ಯ ಕೊಡುಗೆಗಳನ್ನು ಅವರು ನೀಡಿದ್ದಾರೆ.

ಟೀಕೆಗಳಿಗೆ ಸುಧಾರಣೆಯೇ ಉತ್ತರ
ಹಸುರು ಕ್ರಾಂತಿಯ ಪರಿಣಾಮದಿಂದ ಅತಿಯಾದ ರಾಸಾಯನಿಕ ಬಳಕೆ, ಪರಿಸರ ಮಾಲಿನ್ಯ ಆಗುತ್ತಿದೆ. ಕೃಷಿಯ ಸುಸ್ಥಿರತೆಗಿಂತ ಅಸ್ಥಿರತೆ ಸೃಷ್ಟಿಯಾಗಿದೆ ಎಂಬ ಟೀಕೆಗಳಿವೆ. ಜೈವಿಕ ತಂತ್ರಜ್ಞಾನದ ಬಗ್ಗೆ ವಿರೋಧಗಳಿವೆ. ಸುಸ್ಥಿರ ಕೃಷಿಗೆ ಮಾರಕವಾದ ಸಂಶೋಧನೆಗಳ ವಿಚಾರದಲ್ಲಿ ಸ್ವಾಮಿನಾಥನ್‌ ಮೌನ ವಹಿಸುವ ಮೂಲಕ ಸಮರ್ಥಿಸಿದ್ದರು ಎಂಬ ಆರೋಪಗಳಿವೆ. ದೇಶೀಯ ಭತ್ತದ ತಳಿಯ ದುರುಪಯೋಗಕ್ಕೂ ಕಾರಣರಾದರು ಎಂಬ ಟೀಕೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವೆ. ರೈತರಿಗೆ ಎಂಎಸ್‌ಪಿ ಕೊಡುವ ಅವರ ಶಿಫಾರಸಿನಿಂದ ಮಾರುಕಟ್ಟೆ ದಿಕ್ಕು ತಪ್ಪುತ್ತದೆ ಎನ್ನುವ ವಾದವೂ ಇದೆ. ಅದೆಲ್ಲ ಏನೇ ಇದ್ದರೂ ಅವರ ಪರಿಶ್ರಮದಿಂದ ಸಾಕಷ್ಟು ಸುಧಾರಣೆಗಳನ್ನು ದೇಶದ ಕೃಷಿ ವಲಯ, ರೈತಾಪಿ ವರ್ಗ ಕಂಡಿದೆ ಎಂಬುದು ಸುಳ್ಳಲ್ಲ.

ಕನಿಷ್ಠ ಬೆಂಬಲ ಬೆಲೆ ಜಾರಿಯಾಗಬೇಕು
ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಗಬೇಕು. ಉತ್ಪಾದನ ವೆಚ್ಚದ ಮೇಲೆ ಶೇ.5 ರಷ್ಟಾದರೂ ಲಾಭಾಂಶ ದಕ್ಕಬೇಕು. ಇದಕ್ಕೆ ಕಾನೂನಿನ ಬಲಬೇಕು. ರೈತರಿಗೂ ಮನೆಗೆ ಕೊಂಡೊಯ್ಯಬಲ್ಲ (ಟೇಕ್‌ ಹೋಮ್‌) ಆದಾಯ ಸಿಗಬೇಕು ಎಂದು ಯೋಚಿಸಿದವರು ಸ್ವಾಮಿನಾಥನ್‌. ರೈತರ ಆದಾಯಕ್ಕೆ ಭದ್ರತೆ ಬೇಕು. ಇಲ್ಲದಿದ್ದರೆ ದೇಶದ ಆಹಾರ ಭದ್ರತೆ ನಿರ್ನಾಮ ಆಗುತ್ತದೆ ಎಂದು ಅವರು ಎಚ್ಚರಿಸಿದ್ದರು. ಯುಪಿಎ-2 ಅವಧಿಯಲ್ಲಿ ಸ್ವತಃ ರಾಜ್ಯಸಭಾ ಸದಸ್ಯರಾಗಿದ್ದ ಸ್ವಾಮಿನಾಥನ್‌ ಅವರು ತಮ್ಮ ವರದಿ ಬಗ್ಗೆ ಮೌನ ವಹಿಸಿದ್ದರು. ಹಠ ಹಿಡಿದು ಅನುಷ್ಠಾನಕ್ಕೆ ತರಬಹುದಿತ್ತು. ಆಹಾರ ಭದ್ರತೆಗೆ ಭದ್ರ ಅಡಿಪಾಯ ಹಾಕಿಕೊಟ್ಟ ಸ್ವಾಮಿನಾಥನ್‌ ಅವರ ವರದಿಗೆ ಅಪಾಯ ಬಂದೊದಗಿದೆ. ಕೃಷಿ ವಲಯ ಬಿಕ್ಕಟ್ಟಿನಲ್ಲಿದೆ. ಆಹಾರ ಭದ್ರತೆಯ ಅವಗಣನೆ, ಆಮದು ಮಾಡಿಕೊಳ್ಳ ಬಹುದೆಂಬ ಹುಚ್ಚು ಭಾವನೆಗಳು ಒಳ್ಳೆಯದಲ್ಲ.

ಬಂಗಾಲದ ಬರವೇ ಕೃಷಿ ಕ್ಷೇತ್ರಕ್ಕೆ ಬರಲು ಪ್ರೇರಣೆ
“ಬಂಗಾಲದಲ್ಲಿ ಕಂಡು ಬಂದಿದ್ದ ಬರಗಾಲ ದೇಶದ ಕೃಷಿ ಕ್ಷೇತ್ರವನ್ನು ಅಧ್ಯಯನ ನಡೆಸಿ, ಅದರ ಪುನರುತ್ಥಾನಕ್ಕೆ ಕೊಡುಗೆ ನೀಡಬೇಕು ಎಂದು ನಿರ್ಧಾರ ಮಾಡಿದೆ. ಹೀಗಾಗಿ, ವೈದ್ಯಕೀಯ ಪದವಿ ಪಡೆಯುವ ಮಹತ್ತರವಾದ ಆಸೆ ಬದಿಗಿಟ್ಟು ಕೊಯಮತ್ತೂರಿನಲ್ಲಿರುವ ಕೃಷಿ ಕಾಲೇಜಿಗೆ ಬಂದೆ’ ಗುರುವಾರ ನಿಧನರಾದ ಖ್ಯಾತ ಕೃಷಿ ವಿಜ್ಞಾನಿ ಡಾ| ಮೊಂಕೊಂಬು ಸಾಂಬ ಶಿವನ್‌ ಸ್ವಾಮಿನಾಥನ್‌ ಮಾತುಗಳಿವು.

ಅವರೇ ಸ್ಥಾಪಿಸಿರುವ ಎಂ.ಎಸ್‌.ಸ್ವಾಮಿ ನಾಥನ್‌ ರಿಸರ್ಚ್‌ ಫೌಂಡೇಶನ್‌ ಹಿಂದೊಮ್ಮೆ ಪ್ರಕಟಿಸಿದ್ದ ಸಂದರ್ಶನ ದಲ್ಲಿ ಅವರು ಕೃಷಿ ಕ್ಷೇತ್ರಕ್ಕೆ ಯಾವ ರೀತಿ ಪ್ರವೇಶ ಪಡೆದರು ಎಂಬ ಬಗ್ಗೆ ಹಿರಿಯ ವಿಜ್ಞಾನಿ ಹೇಳಿಕೊಂಡಿದ್ದರು. 1942-43ನೇ ಸಾಲಿನಲ್ಲಿ ಈಗಿನ ಪಶ್ಚಿಮ ಬಂಗಾಲ ವ್ಯಾಪ್ತಿ ಯಲ್ಲಿ ಭೀಕರ ಬರಗಾಲ ಆವರಿಸಿತ್ತು. ಅದ ರಿಂದಾಗಿ 20ರಿಂದ 30 ಲಕ್ಷ ಮಂದಿ ಅಸುನೀಗಿ ದ್ದರು. ಆ ಘಟನೆಯಿಂದಾಗಿ ಬರಗಾಲ ಮತ್ತು ಆಹಾರ ಕೊರತೆ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದೆ ಎಂದು ಹೇಳಿದ್ದರು. ದೇಶದ ಕೃಷಿ ಕ್ಷೇತ್ರದಲ್ಲಿ ವ್ಯಾಪಕ ಸಂಶೋಧನೆ ನಡೆಸಲೂ ತೀರ್ಮಾನಿಸಿದ್ದೆ ಎಂದಿದ್ದರು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಸಂದರ್ಭದಲ್ಲಿ ಕೇವಲ 6 ಮಿ.ಟನ್‌ ಗೋಧಿ ಉತ್ಪಾದನೆ ಮಾಡಲಾಗುತ್ತಿತ್ತು. 1962ರ ವೇಳೆಗೆ ಅದರ ಉತ್ಪಾದನೆ 10 ಮಿ. ಟನ್‌ಗೆ ಏರಿಕೆಯಾಗಿತ್ತು. 1964ರಿಂದ 1968ರ ನಡುವೆ ಗೋಧಿಯ ಉತ್ಪಾದನೆ 17 ಮಿ. ಟನ್‌ಗೆ ಹೆಚ್ಚಿತ್ತು. ಇದು ದೇಶದ ರೈತರಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಜತೆಗೆ ಕೃಷಿಯನ್ನು ಕೈ ಹಿಡಿದರೆ ಬಿಡುವುದಿಲ್ಲ ಎಂಬ ನಂಬಿಕೆಯನ್ನು ಮೂಡಿಸಿದ್ದು ಸುಳ್ಳಲ್ಲ. ಸರಕಾರಿ ಅಂಕಿ ಅಂಶಗಳ ಪ್ರಕಾರ ಈಗ ದೇಶದಲ್ಲಿ 109.6 ಮಿ. ಟನ್‌ ಗೋಧಿ ಉತ್ಪಾದನೆ ಮಾಡಲಾಗುತ್ತಿದೆ. ಜಗತ್ತಿನಲ್ಲಿಯೇ ನಮ್ಮ ದೇಶ 2ನೇ ಸ್ಥಾನದಲ್ಲಿದೆ. ಅದಕ್ಕೆ ಹಿರಿಯ ವಿಜ್ಞಾನಿ ಡಾ| ಎಂ.ಎಸ್‌.ಸ್ವಾಮಿನಾಥನ್‌ ಅವರೇ ಕಾರಣ ಎಂದರೆ ತಪ್ಪಾ ಗಲಾರದು. ಅದೇ ರೀತಿ ಅಕ್ಕಿಯ ಉತ್ಪಾದನೆಯಲ್ಲಿ ಕೂಡ ದೇಶ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರಕಾರದ ಮಾಹಿತಿ ಪ್ರಕಾರ ದೇಶದಲ್ಲಿ 2022-23ನೇ ಸಾಲಿನಲ್ಲಿ 135.52 ಮಿ. ಟನ್‌ ಅಕ್ಕಿ ಉತ್ಪಾದನೆಯಾಗಿತ್ತು. ಈ ಎರಡೂ ಸಾಧನೆಗಳಿಗೆ ಕೂಡ ಹಿರಿಯ ವಿಜ್ಞಾನಿ ಡಾ| ಎಂ.ಎಸ್‌.ಸ್ವಾಮಿನಾಥನ್‌ ಅವರು ಗೋಧಿ ಮತ್ತು ಅಕ್ಕಿಯಲ್ಲಿ ಉತ್ತಮ ಇಳುವರಿ ಕೊಡುವ ಹೊಸ ತಳಿಗಳ ಬಗ್ಗೆ ಸಂಶೋಧನೆ, ಅದನ್ನು ರೈತರು ಬೆಳೆಯುವಂತೆ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾದದ್ದೇ ಕಾರಣ. ಅವರ ಶ್ರಮದಿಂದಲೇ ದೇಶದಲ್ಲಿ ಪ್ರಮುಖ ಆಹಾರ ಧಾನ್ಯಗಳಾದ ಅಕ್ಕಿ ಮತ್ತು ಗೋಧಿ ಹೇರಳವಾಗಿ ಬೆಳೆಯುವಂತಾಗಿದೆ.

ತಮಿಳುನಾಡಿನ ಕಾವೇರಿ ಮುಖಜ ಭೂಮಿ ಪ್ರದೇಶ ಕುಂಭಕೋಣಂನಲ್ಲಿ 1925 ಆ.7ರಂದು ಜನಿಸಿದರು. ಅವರ ತಂದೆ ಡಾ| ಎಂ.ಕೆ.ಸಾಂಬಶಿವನ್‌ ಪ್ರಸಿದ್ಧ ವೈದ್ಯರು. ತಾಯಿ ಪಾರ್ವತಿ ತಂಗಮ್ಮಾಳ್‌. ಅವರು 2007ರಿಂದ 2013ರ ವರೆಗೆ ರಾಜ್ಯಸಭೆಯ ಸದಸ್ಯರೂ ಆಗಿದ್ದರು. 1979-1980ರಲ್ಲಿ ಕೃಷಿ ಖಾತೆಯ ಪ್ರಧಾನ ಕಾರ್ಯದರ್ಶಿ, ಹಿಂದಿನ ಯೋಜನಾ ಆಯೋಗದ ಹಂಗಾಮಿ ಮುಖ್ಯಸ್ಥ (1980-1982), ಫಿಲಿಪ್ಪೀನ್ಸ್‌ನ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನ ಸಂಸ್ಥೆಯ ಮಹಾನಿರ್ದೇಶಕ (1982-1988)ರಾಗಿದ್ದರು. ಅವರ ಸಾಧನೆಗಾಗಿ 1971ರಲ್ಲಿ ರೇಮನ್‌ ಮ್ಯಾಗ್ಸೆಸೆ, 1986ರಲ್ಲಿ ಅಲ್ಬರ್ಟ್‌ ಐನ್‌ಸ್ಟಿàನ್‌ ಪ್ರಶಸ್ತಿ, ಟೈಮ್‌ ನಿಯತಕಾಲಿಕ ಪ್ರಕಟಿಸಿದ್ದ 20ನೇ ಶತಮಾನದ 20 ಅತ್ಯಂತ ಪ್ರಭಾವಶಾಲಿಗಳಲ್ಲಿ ಸ್ವಾಮಿನಾಥನ್‌ ಹೆಸರೂ ಸೇರ್ಪ ಡೆಯಾಗಿತ್ತು. ದೇಶ ಮತ್ತು ವಿದೇಶಗಳ ಹಲವು ಸಂಸ್ಥೆಗಳು ಕೃಷಿ ಕ್ಷೇತ್ರದಲ್ಲಿನ ಅವರ ಸಾಧನೆಗೆ 84 ಗೌರವ ಡಾಕ್ಟರೆಟ್‌ಗಳನ್ನು ನೀಡಿವೆ.

-ಪ್ರಕಾಶ್‌ ಕಮ್ಮರಡಿ

Advertisement

Udayavani is now on Telegram. Click here to join our channel and stay updated with the latest news.

Next