Advertisement

ಧೋನಿ ನಾಯಕನಾಗದೇ ಇದ್ದರೆ ಆತನ ದಾಖಲೆಗಳು ಇನ್ನೂ ಹೆಚ್ಚಿನದಾಗಿರುತ್ತಿತ್ತು: ಗಂಭೀರ್

11:53 AM Jun 14, 2020 | keerthan |

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಒಂದು ವೇಳೆ ಟೀಂ ಇಂಡಿಯಾ ನಾಯಕತ್ವ ವಹಿಸದೇ ಇದ್ದರೆ ಅವರ ದಾಖಲೆಗಳು ಬೇರೆಯದೇ ಆಗಿರುತ್ತಿತ್ತು ಎಂದು ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

Advertisement

ಸ್ಟಾರ್ ಸ್ಪೋರ್ಟ್ ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ಒಂದು ವೇಳೆ ಧೋನಿ ನಾಯಕತ್ವದ ಹೊರತಾಗಿ ಮೂರನೇ ಕ್ರಮಾಂಕದಲ್ಲಿ ಆಡುವ ನಿರ್ಧಾರ ಮಾಡಿದ್ದರೆ ಅವರು ವಿಶ್ವದ ಅತ್ಯಂತ ರೋಮಾಂಚನಕಾರಿ ಕ್ರಿಕೆಟರ್ ಆಗಿರುತ್ತಿದ್ದರು ಎಂದು ಹೇಳಿದ್ದಾರೆ.

2004ರಲ್ಲಿ ಟೀಂ ಇಂಡಿಯಾ ಎಂಟ್ರಿ ನೀಡಿದ ಧೋನಿ ಮೊದಲ ಕೆಲವು ಪಂದ್ಯಗಳಲ್ಲಿ ವಿಫಲರಾಗಿದ್ದರು. ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಧೋನಿ ತಾನೇನುಂಬುವುದನ್ನು ತೋರಿಸಿದರು. ಪಾಕಿಸ್ಥಾನ ಮತ್ತು ಲಂಕಾ ವಿರುದ್ಧ ಭರ್ಜರಿ ಶತಕದಗಳಿಂದ ಧೋನಿ ವಿಶ್ವದಲ್ಲಿ ಮನೆ ಮಾತಾಗಿದ್ದರು.

ಮೂರನೇ ಕ್ರಮಾಂಕದಲ್ಲಿ ಧೋನಿ 16 ಪಂದ್ಯಗಳನ್ನಾಡಿದ್ದು, ಅದರಲ್ಲಿ 82ರ ಸರಾಸರಿಯಲ್ಲಿ 993 ರನ್ ಗಳಿಸಿದ್ದರು. ಆದರೆ ನಾಯಕತ್ವ ವಹಿಸಿದ ನಂತರ ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡಿದ ಧೋನಿ ಏಕದಿನ ಕ್ರಿಕೆಟ್ ನಲ್ಲಿ 10773 ರನ್ ಗಳಿಸಿದ್ದಾರೆ.

ಧೋನಿ ಮೂರನೇ ಕ್ರಮಾಂಕದಲ್ಲಿ ಆಡುವುದನ್ನು ನೋಡುವ ಅವಕಾಶವನ್ನು ವಿಶ್ವ ಕ್ರಿಕಟ್ ತಪ್ಪಿಸಿಕೊಂಡಿದೆ. ಮೂರನೇ ಕ್ರಮಾಂಕದಲ್ಲಿ ಆಡಿದ್ದರೆ ಅವರು ಇನ್ನಷ್ಟು ರನ್ ಗಳಿಸುತ್ತಿದ್ದರು. ಇನ್ನಷ್ಟು ದಾಖಲೆಗಳನ್ನು ಮುರಿಯುತ್ತಿದ್ದರು ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next