Advertisement

ಅತಿ ನಿಧಾನದ ಅರ್ಧಶತಕ: ಗಂಗೂಲಿ ದಾಖಲೆ ಮುರಿದ ಧೋನಿ!

03:45 AM Jul 04, 2017 | Team Udayavani |

ನಾರ್ಥ್ ಸೌಂಡ್‌: ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ 4ನೇ ಏಕದಿನ ಪಂದ್ಯದಲ್ಲಿ ಎಂ.ಎಸ್‌.ಧೋನಿ ಅರ್ಧಶತಕ ಬಾರಿಸಲು 108 ಎಸೆತ ತೆಗೆದುಕೊಳ್ಳುವ ಮೂಲಕ ಅತಿ ನಿಧಾನಗತಿಯ ಅರ್ಧಶತಕ ಗಳಿಸಿದ ದಾಖಲೆ ನಿರ್ಮಿಸಿದ್ದಾರೆ. ಈ ಮೊದಲು ಭಾರತ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಅರ್ಧಶತಕ ಬಾರಿಸಲು 105 ಎಸೆತ ತೆಗೆದುಕೊಂಡಿದ್ದು ದಾಖಲೆಯಾಗಿತ್ತು.

Advertisement

ಧೋನಿ ಒಟ್ಟು 114 ಎಸೆತದಲ್ಲಿ 54 ರನ್‌ ಬಾರಿಸಿ ಔಟ್‌ ಆದರು. ಅರ್ಧಶತಕವನ್ನು ಬಾರಿಸಲು 108 ಎಸೆತ ತೆಗೆದುಕೊಂಡಿದ್ದರು. 2005ರಲ್ಲಿ ಸೌರವ್‌ ಗಂಗೂಲಿ ಶ್ರೀಲಂಕಾ ವಿರುದ್ಧ ಅರ್ಧಶತಕ ಬಾರಿಸಲು 105 ಎಸೆತ ತೆಗೆದುಕೊಂಡಿದ್ದು, ದಾಖಲೆಯಾಗಿತ್ತು. ಉಳಿದಂತೆ 2007ರಲ್ಲಿ ಬಾಂಗ್ಲಾ ವಿರುದ್ಧ ಸೌರವ್‌ ಗಂಗೂಲಿ ಅರ್ಧಶತಕ ದಾಖಲಿಸಲು 104 ಎಸೆತ ತೆಗೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next