ಬೆಂಗಳೂರು: ತವರಿನಲ್ಲಿ ಆರ್ ಸಿಬಿ ತಂಡ ಮತ್ತೊಮ್ಮೆ ಮುಗ್ಗರಿಸಿದೆ. ರೋಚಕ ಹೋರಾಟದಲ್ಲಿ ಕೆಕೆಆರ್ ತಂಡ ಗೆಲುವಿನ ದಡವನ್ನು ಮುಟ್ಟಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ವಿರಾಟ್ ಬಳಗಕ್ಕೆ ಕೆಕೆಆರ್ ಆಟಗಾರರು ಬಲಿಷ್ಠ ಬ್ಯಾಟಿಂಗ್ ನಿಂದ ಬೌಲರ್ ಗಳ ಬೆವರಿಳಿಸಿದ್ದರು. ಅಂತಿಮವಾಗಿ ಕೆಕೆಆರ್ 21 ರನ್ ಗಳ ಅಂತದಿಂದ ಪಂದ್ಯವನ್ನು ತನ್ನದಾಗಿಸಿಕೊಂಡು ಅಂಕಪಟ್ಟಿಯಲ್ಲಿ 2 ಅಂಕವನ್ನು ಪಡೆದುಕೊಂಡಿದೆ.
201 ರನ್ ಗಳನ್ನು ಬೆನ್ನಟ್ಟಲು ಆರ್ ಸಿಬಿ ಆಟಗಾರರು ವಿಫಲರಾಗಿದಕ್ಕೆ, ಪಂದ್ಯವನ್ನು ಯಾಕೆ ಸೋತರು ಎನ್ನುವುದಕ್ಕೆ ಮಾಜಿ ಇಂಗ್ಲೆಂಡ್ ಬ್ಯಾಟರ್ ಕೆವಿನ್ ಪೀಟರ್‌ಸನ್ ಕಾರಣವನ್ನು ಕೊಟ್ಟು, ಒಂದಷ್ಟು ಸಲಹೆಯನ್ನು ಕೊಟ್ಟಿದ್ದಾರೆ.
“ಸಿಎಸ್‌ಕೆ ನಾಯಕ ಎಂಎಸ್ ಧೋನಿ ಅವರ ಚೇಸಿಂಗ್ ಮಂತ್ರವು ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಮಾತನಾಡುವ ವಿಚಾರಗಳಲ್ಲಿ ಒಂದಾಗಿದೆ. ಧೋನಿಯ ಚೇಸಿಂಗ್ ಮಂತ್ರವೆಂದರೆ ಫಿನಿಶರ್ ಆಟವನ್ನು ಆಳವಾಗಿ ತೆಗೆದುಕೊಂಡು ಹೋಗುವುದು. ದುರ್ಬಲ ಬೌಲರ್‌ಗಳನ್ನು ಗುರಿಯಾಗಿಸಿ, ಆ ಓವರ್ ನಲ್ಲಿ ಹೆಚ್ಚು ರನ್ ಗಳನ್ನು ತರುವುದು. ನೀವು 200+ ರನ್ ಗಳನ್ನು ಚೇಸಿಂಗ್ ಮಾಡುವಾಗ ಗೇಮ್ ನ್ನು ಆಳವಾಗಿ ತೆಗದುಕೊಂಡು ಹೋಗಬೇಕು. ಇದನ್ನು ಧೋನಿ ಅವರು ಎಷ್ಟು ಸಲಿ ಮಾಡಿದ್ದಾರೆ. ಅದಕ್ಕೆ ಅವರನ್ನು ಕಿಂಗ್ ಆಫ್ ಚೇಸಿಂಗ್ ಎನ್ನುವುದು. 18,19, ಅಥವಾ 20 ಓವರ್ ವರೆಗೂ ಗೇಮ್ ತೆಗೆದುಕೊಂಡು ಹೋಗಿ” ಎಂದು ಸ್ಟಾರ್ ಸ್ಫೋರ್ಟ್ಸ್ ನಲ್ಲಿ ಪಂದ್ಯ ಮುಗಿದ ಬಳಿಕ ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿಧಾನ-ಕದನ 2023: ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್-BJP ನಡುವೆಯೇ ನೇರ ಫೈಟ್!
ಮುಂದುವರೆದು ಮಾತನಾಡಿದ ಅವರು, ಈಗಿನ ಯುವ ಬ್ಯಾಟರ್ ಗಳು 200 ರನ್ನಿನ ಪಂದ್ಯವನ್ನು 12,13 ನೇ ಓವರ್ ನಲ್ಲಿ ಮುಗಿಸಲು ಯತ್ನಿಸುತ್ತಾರೆ. ವಿರಾಟ್ ಕೊಹ್ಲಿ ಅವರು ಧೋನಿ ಅವರ ಚೇಸಿಂಗ್ ಮಂತ್ರವನ್ನು ಅನುಸರಿಸಿ ಪಂದ್ಯವನ್ನು ಕೊನೆಯ ಹಂತದವರೆಗೆ ತರಲು ಯತ್ನಿಸಿದರು. ಆದರೆ ವೆಂಕಟೇಶ್ ಆಯ್ಯರ್ ಅವರ ಅದ್ಭುತ ಫೀಲ್ಡಿಂಗ್ ನಿಂದ ಅದು ಸಾಧ್ಯವಾಗಿಲ್ಲ” ಎಂದರು.
ಆರ್ ಸಿಬಿ ತನ್ನ ಮುಂದಿನ ಪಂದ್ಯವನ್ನು ಲಕ್ನೋ ವಿರುದ್ಧ ಮೇ.1 ರಂದು ಆಡಲಿದೆ.