Advertisement
“ಧೂಮ್‌ವಾಲಾ ಧೋನಿ’ಆರಂಭಿಕ ದಿನಗಳ ಧೋನಿ ಉದ್ದನೆಯ ತಲೆಗೂದಲನ್ನು ಹೊಂದಿದ್ದರು. ಅದು ಭುಜದ ತನಕ ಇಳಿದು ಬರುತ್ತಿತ್ತು. ಇದಕ್ಕೆ ಸ್ಫೂರ್ತಿ ಯಾರು ಗೊತ್ತೇ? ಗೆಳೆಯನೂ ನಟನೂ ಆಗಿರುವ ಜಾನ್ ಅಬ್ರಹಾಂ. ಅವರು “ಧೂಮ್’ ಚಿತ್ರದಲ್ಲಿ ಇಂಥದೇ ಹೇರ್‌ಸ್ಟೈಲ್ ಹೊಂದಿದ್ದರು. ಧೋನಿಗೆ ಇದು ಹುಚ್ಚು ಹಿಡಿಸಿತ್ತು. ಹೀಗಾಗಿ ಅವರು “ಧೂಮ್‌ವಾಲಾ ಧೋನಿ’ ಎನಿಸಿದರು. ಆರಂಭದ 3 ವರ್ಷಗಳ ತನಕ ಧೋನಿ ಇದೇ ಹೇರ್‌ಸ್ಟೈಲ್ ಹೊಂದಿದ್ದರು. ಬೇಕಿದ್ದರೆ 2007ರಲ್ಲಿ ಅವರು ಟಿ20 ವಿಶ್ವಕಪ್ ಎತ್ತಿ ಹಿಡಿದ ಚಿತ್ರವನ್ನು ಗಮನಿಸಬಹುದು.
ಬದುಕಿನಲ್ಲಿ ಹೆಚ್ಚು ಪ್ರಬುದ್ಧರಾಗುತ್ತ ಬಂದಂತೆ ಅವರ ಕೇಶ ವಿನ್ಯಾಸ ಕೂಡ ಬದಲಾಗತೊಡಗಿತು. 2007ರ ಬಳಿಕ ಕೂದಲು ಟ್ರಿಮ್ ಮಾಡಿಕೊಂಡು “ಸ್ಪೈಕ್‌ವಾಲಾ ಧೋನಿ’ ಆದರು. 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಕೂಡಲೇ ಇಡೀ ತಲೆಯನ್ನು ಕ್ಲೀನ್‌ಶೇವ್ ಮಾಡಿಕೊಂಡು “ಟಕ್ಲುವಾಲಾ ಧೋನಿ’ ಆದರು. ಬಳಿಕ ಮಾಮೂಲು ಶಿಷ್ಟಾಚಾರದಂತೆ ವಿನ್ಯಾಸ ಬದಲಿಸಿಕೊಂಡರು. ಆದರೆ ಅವರ ಫ್ಲಾಪ್ ಹೇರ್ ಸ್ಟೈಲ್ ಕೂಡ ಒಂದಿದೆ. ಅದು ಖ್ಯಾತ ನಟ ದೇವಾನಂದ್ ರೀತಿಯ ಕೇಶ ವಿನ್ಯಾಸವಾಗಿತ್ತು. ಇದನ್ನು “ಮಿಸ್ಟೇಕ್‌ವಾಲಾ ಧೋನಿ’ ಎಂದೇ ಕರೆಯಲಾಗುತ್ತದೆ. ಕಾರಣ, ಧೋನಿಗೆ ಆಗ ಕ್ರಿಕೆಟ್‌ನಲ್ಲಿ ದುರ್ದಿನಗಳು ಎದುರಾಗಿದ್ದವು!