Advertisement
ಆದರೆ ಪಂದ್ಯದ ಬಳಿಕ ತಂಡದ ಬೌಲರ್ ಗಳ ಮೇಲೆ ನಾಯಕ ಎಂ ಎಸ್ ಧೋನಿ ಹರಿಹಾಯ್ದರು. ಪಂದ್ಯದ ಬಳಿಕ ಮಾತನಾಡಿದ ಅವರು, ವೇಗದ ಬೌಲಿಂಗ್ ನಲ್ಲಿ ನಾವು ಸುಧಾರಣೆ ಮಾಡಬೇಕಿದೆ. ಪರಿಸ್ಥಿತಿಗೆ ಅನುಗುಣವಾಗಿ ಬೌಲ್ ಮಾಡಬೇಕಾಗುತ್ತದೆ. ಎದುರಾಳಿ ಬೌಲರ್ ಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯ. ಇನ್ನೊಂದು ವಿಷಯವೆಂದರೆ ಅವರು ಅಷ್ಟೊಂದು ನೋ-ಬಾಲ್ ಅಥವಾ ಹೆಚ್ಚುವರಿ ವೈಡ್‌ಗಳನ್ನು ಬೌಲ್ ಮಾಡಬಾರದು ಅಥವಾ ಅವರು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ. ಇದು ನನ್ನ ಎರಡನೇ ಎಚ್ಚರಿಕೆ ಇಲ್ಲದಿದ್ದರೆ ನಂತರ ನಾನು ಹೊರಗೆ ಉಳಿಯ ಬೇಕಾಗುತ್ತದೆ” ಎಂದು ಅವರು ಹೇಳಿದರು.
Related Articles
Advertisement
ಮೊದಲು ಬ್ಯಾಟಿಂಗ್ ಮಾಡಿದ್ದ ಚೆನ್ನೈ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಮಾಡಿದರೆ, ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ ಗಳಲ್ಲಿ 205 ರನ್ ಮಾತ್ರ ಮಾಡಿತು.