Advertisement

ಮೂರು ನಾಯಿಗಳ ಜತೆ ಚೆಂಡಿನಾಟ ಆಡಿದ ಧೋನಿ

03:45 AM Feb 18, 2017 | |

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಇತ್ತೀಚೆಗೆ ತನ್ನ ಮಗಳು ಜೀವಾ ಜತೆ ಅಂಬೆಗಾಲಿಡುತ್ತ ತೆವಳುವ ವೀಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು, ಭರ್ಜರಿ ಸದ್ದು ಮಾಡಿತ್ತು. ಇದೀಗ ಧೋನಿ ತಾವು ಸಾಕಿರುವ ಮೂರು ನಾಯಿಗಳ ಜತೆ ಚೆಂಡಿನಾಟ ಆಡಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ಗೆ ಹಾಕಿದ್ದಾರೆ. ಇದನ್ನು ವೀಕ್ಷಿಸಿದ ಅಭಿಮಾನಿಗಳು ಭಾರೀ ಲೈಕ್‌ ಮತ್ತು ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ.

Advertisement

ವೀಡಿಯೋದಲ್ಲಿ ಏನಿದೆ:
ಧೋನಿ ತಮ್ಮ ಮನೆಯ ಮಹಡಿ ಮೇಲೆ ಚೆಂಡನ್ನು ನಾಯಿಗಳ ಮುಂದೆ ತೋರಿಸಿ ಎಸೆಯುತ್ತಾರೆ. ಮೂರು ನಾಯಿಗಳು ಚೆಂಡನ್ನು ಹಿಡಿದು ಪುನಃ ಧೋನಿಗೆ ತಂದು ನೀಡುತ್ತವೆ. ಕೆಲವು ಬಾರಿ ಧೋನಿ ಚೆಂಡನ್ನು ಎಸೆದಂತೆ ಮಾಡುತ್ತಾರೆ. ಆ ಸಮಯದಲ್ಲಿ ನಾಯಿಗಳು ಗೊಂದಲಕ್ಕೆ ಒಳಗಾಗುವುದನ್ನು ನೋಡಬಹುದು.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೆ.23 ರಿಂದ ಟೆಸ್ಟ್‌ ಆರಂಭವಾಗಲಿದೆ. ಆದರೆ ಧೋನಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ ವಿಶ್ರಾಂತಿ ಸಮಯವನ್ನು ಕುಟುಂಬದ ಜತೆ ಕಳೆಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next