Advertisement

ಕ್ರಿಕೆಟ್‌ಗೆ ಬ್ರೇಕ್‌; ಫ‌ುಟ್‌ಬಾಲ್‌ ಆಡಿದ ಧೋನಿ

06:00 AM Jul 27, 2018 | Team Udayavani |

ಹೊಸದಿಲ್ಲಿ: ಭಾರತೀಯ ಏಕದಿನ ಕ್ರಿಕೆಟ್‌ ತಂಡದ ವಿಕೆಟ್‌ಕೀಪರ್‌ ಎಂಎಸ್‌ ಧೋನಿ ಫ‌ುಟ್‌ಬಾಲ್‌ ಅಭಿಮಾನಿ. ಬಿಡುವಿನ ವೇಳೆ ಅವರು ಫ‌ುಟ್‌ಬಾಲ್‌ ಆಟದಲ್ಲಿ ಮಗ್ನರಾಗುವುದು ಸಾಮಾನ್ಯ.

Advertisement

ಇಂಗ್ಲೆಂಡ್‌ ವಿರುದ್ಧದ ಟ್ವೆಂಟಿ20 ಮತ್ತು ಏಕದಿನ ಸರಣಿ ಮುಗಿದ ಬಳಿಕ ಧೋನಿ ಕ್ರಿಕೆಟ್‌ಗೆ ಬ್ರೇಕ್‌ ನೀಡಿದ್ದು ಬಾಲಿವುಡ್‌ ನಟ ಧಡಕ್‌ ಸಿನಿಮಾದ ತಾರೆ ಇಶಾನ್‌ ಖಟ್ಟರ್‌ ಜತೆ ಫ‌ುಟ್‌ಬಾಲ್‌ ಆಡಿದರು. ಮಾತ್ರವಲ್ಲದೇ ಇಶಾನ್‌ಗೆ ಫ‌ುಟ್‌ಬಾಲ್‌ ಆಟದ ಬಗ್ಗೆ ಕೆಲವು ಟಿಪ್ಸ್‌ ನೀಡಿದ್ದಾರೆ. ಇಶಾನ್‌ ಅವರು ನಟ ಶಾಹಿದ್‌ ಕಪೂರ್‌ ಅವರ ಕಿರಿಯ ಸಹೋದರರಾಗಿದ್ದಾರೆ.ಈಗ ಫ‌ುಟ್‌ಬಾಲ್‌ ಸಮಯ ಎಂದು ಧೋನಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.

ಧೋನಿ ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದ 12ನೇ ಆಟಗಾರ ಎಂದೆನಿಸಿಕೊಂಡಿದ್ದರು. ಈ ಸಾಧನೆಗೈದ ಎರಡನೇ ವಿಕೆಟ್‌ಕೀಪರ್‌ ಆಗಿದ್ದಾರೆ. ಕುಮಾರ ಸಂಗಕ್ಕರ ಮೊದಲ ವಿಕೆಟ್‌ಕೀಪರ್‌ ಆಗಿದ್ದಾರೆ.
ಏಕದಿನದಲ್ಲಿ ಗರಿಷ್ಠ ರನ್‌ ಪೇರಿಸಿದವರಲ್ಲಿ ಸಚಿನ್‌ ತೆಂಡುಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ. ಅವರು 18,426 ರನ್‌ ಗಳಿಸಿದ್ದಾರೆ. ಸಂಗಕ್ಕರ (14,234), ಆಸ್ಟ್ರೇಲಿಯದ ರಿಕಿ ಪಾಂಟಿಂಗ್‌ (13,704), ಶ್ರೀಲಂಕಾದ ಸನತ್‌ ಜಯಸೂರ್ಯ (13,430) ಮತ್ತು ಮಾಹೇಲ ಜಯವರ್ಧನ (12,650) ಅನಂತರದ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next