Advertisement

Kollywood: ʼಕಾಂಚನಾ-4ʼ ಗೆ ʼಸೀತಾ ರಾಮಂʼ ಮೃಣಾಲ್?:‌ ವದಂತಿಗೆ ಸ್ಪಷ್ಟನೆ ನೀಡಿದ ಲಾರೆನ್ಸ್

03:40 PM Jun 09, 2024 | Team Udayavani |

ಚೆನ್ನೈ: ರಾಘವ ಲಾರೆನ್ಸ್ ಕಾಲಿವುಡ್‌ನ ಬೇಡಿಕೆಯ ನಟರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಅವರ ʼ ಕಾಂಚನಾ 4ʼ ಸಿನಿಮಾ ಅನೌನ್ಸ್‌ ಆಗಿದೆ. ಕಾಲಿವುಡ್‌ ನಲ್ಲಿ ಇದುವರೆಗೆ ಬಂದ ʼಕಾಂಚನಾʼ ಸರಣಿಗಳು ಹಿಟ್‌ ಆಗಿವೆ.

Advertisement

‘ಮುನ್ನಿʼ ಸಿರೀಸ್‌ ನಲ್ಲಿ ಬಂದ ʼಕಾಂಚನಾʼ ಇದುವರೆಗೆ ಮೂರು ಭಾಗಗಳಾಗಿ ತೆರೆಕಂಡಿದೆ. ಹಾರಾರ್‌ ಕಾಮಿಡಿ ಕಥಾಹಂದರದ ʼಕಾಂಚನಾʼ ಕ್ಕೆ ಪ್ರತ್ಯೇಕ ನೋಡುಗರ ವರ್ಗವೇ ಇದೆ. ರಾಘವ ಲಾರೆನ್ಸ್‌ ʼಕಾಂಚನಾʼದಲ್ಲಿ ಪ್ರಧಾನ ಪಾತ್ರದ ಜೊತೆ ನಿರ್ದೇಶಕನಾಗಿಯೂ ಕಾಣಿಸಿಕೊಂಡಿದ್ದಾರೆ.

ಇದೀಗ ಲಾರೆನ್ಸ್‌ ʼಕಾಂಚನಾ-4ʼ ಅನೌನ್ಸ್‌ ಮಾಡಿದ್ದಾರೆ. ಅನೌನ್ಸ್‌ ಬಳಿಕ ಸಿನಿಮಾದಲ್ಲಿ ಯಾರು ನಾಯಕಿಯಾಗಿ ಆಗಲಿದ್ದಾರೆ ಎನ್ನುವ ಬಗ್ಗೆ ಕಾಲಿವುಡ್‌ ರೀತಿ ನಾನಾ ರೀತಿಯ ಗಾಸಿಪ್‌ ಹರಿದಾಡಿದೆ.

ಈಗಾಗಲೇ ತನ್ನ ನಟನೆಯಿಂದ ಸೌತ್‌ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಮೃಣಾಲ್‌ ಠಾಕೂರ್‌ ಅವರ ಹೆಸರು ʼಕಾಂಚನಾ-4ʼ ಗಾಗಿ ಕೇಳಿ ಬರುತ್ತಿದೆ. ಮೃಣಾಲ್‌ ತೆಲುಗಿನ ʼಸೀತಾ ರಾಮಂʼ ಮತ್ತು  ‘ಹಾಯ್ ನಾನ್ನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ʼಕಾಂಚನಾ-4ʼ ಮೂಲಕ ಕಾಲಿವುಡ್‌ ಗೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಇದುವರೆಗೆ ಮಾಹಿತಿ ನೀಡಿಲ್ಲ.

Advertisement

ನಿರ್ದೇಶಕ, ನಟ ರಾಘವ ಲಾರೆನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಸಿಪ್‌ ಗೆ ಸ್ಪಷ್ಟನೆ ನೀಡಿದ್ದಾರೆ.

ʼʼಕಾಂಚನಾ 4  ಕಾಸ್ಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲಾ ಮಾಹಿತಿಗಳು ಕೇವಲ ವದಂತಿಗಳಷ್ಟೇ. ಏನೇಯಿದ್ದರೂ ಶೀಘ್ರದಲ್ಲಿ ರಾಘವೇಂದ್ರ ಪ್ರೊಡಕ್ಷನ್ ಮೂಲಕ ಅಧಿಕೃತ ಘೋಷಣೆಯಾಗಲಿದೆ” ಎಂದು ಲಾರೆನ್ಸ್‌ ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next