Advertisement
ಐಸೋಬ್ಯುಟೈಲ್ ಬೆಂಝೀನ್ (ಐಬಿಬಿ) ಅನ್ನು ತನ್ನದೇ ಆದ ವಿಧಾನಗಳಿಂದ ರೂಪಿಸಿ ಪೇಟೆಂಟ್ ಅನ್ನೂ ಪಡೆದಿದೆ. ಐಬಿಬಿ ಎನ್ನುವುದು ನೋವು ನಿವಾರಕ ಔಷಧಗಳಾದ ಐಬ್ರೂಫೆನ್, ಆಸ್ಪಿರಿನ್ ಮುಂತಾದವುಗಳ ಉತ್ಪಾದನೆಗೆ ಅಗತ್ಯವಿರುವ ಂಥದ್ದು. ಹಲವು ರೀತಿಯ ಆ್ಯಂಟಿ ಬಯಾಟಿಕ್ಸ್‌ಗಳಲ್ಲೂ ಬಳಸಲಾಗು ತ್ತದೆ. ಹಾಗೆಯೇ ಐಬಿಬಿಯನ್ನು ಪಾಲಿಕಾಬೊìನೇಟ್, ಪಾಲಿಸ್ಟಿರಿನ್ ಮತ್ತಿತರ ಪ್ಲಾಸ್ಟಿಕ್ ಉತ್ಪನ್ನಗಳ ತಯಾರಿಕೆ ಹಾಗೂ ಕೃತಕ ಸಿಂಥೆಟಿಕ್ ರಬ್ಬರ್ ಉತ್ಪಾದನೆಯಲ್ಲೂ ಬಳಸ ಲಾಗುತ್ತದೆ. ಈಗ ವಿಶ್ವ ದರ್ಜೆಯ ಐಬಿಬಿ ಉತ್ಪಾದನಾ ಸ್ಥಾವರವನ್ನು ತನ್ನ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. 2024ರಲ್ಲಿ ಘಟಕ ನಿರ್ಮಾಣ ಆರಂಭವಾಗಿ 2026 ರಲ್ಲಿ ಪೂರ್ಣಗೊಳ್ಳುವ ಸಂಭವವಿದೆ.
ಐಬಿಬಿ ವರ್ಣ ರಹಿತ ದ್ರವವಾಗಿದ್ದು, ಸಾಮಾನ್ಯ ವಾಗಿ ಸುವಾಸನೆ ಹೊಂದಿರಲಿದೆ ರಾಸಾಯನಿಕ ವಾಗಿ ಇದನ್ನು ಬೆಂಝೀನ್ ನಿಂದ ಪಡೆಯಲಾಗು ತ್ತದೆ. ಅತ್ಯಧಿಕ ಮೌಲ್ಯದ ಪೆಟ್ರೋಕೆ ಮಿಕಲ್ ಎಂದು ಪರಿಗಣಿಸಲ್ಪಟ್ಟಿರುವ ಬೆಂಝೀನ್ ಭವಿಷ್ಯದ ಕಚ್ಚಾ ವಸ್ತು ಎಂದೇ ಪರಿಗಣಿತವಾಗಿದ್ದು ಜಾಗತಿಕವಾಗಿ ಉನ್ನತ ಮೌಲ್ಯವನ್ನು ಹೊಂದುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಐಬಿಬಿಯನ್ನು ಆಯಾ ಕಾರ್ಖಾನೆಗಳು ತಮ್ಮ ನೆಲೆಯಲ್ಲೇ ಉತ್ಪಾದಿಸುತ್ತವೆ. ಆದರೆ ಎಂಆರ್‌ಪಿಎಲ್ ಪೆಟ್ರೋಲಿಯಂ ರಿಫೈನರಿಯಾಗಿದ್ದುಕೊಂಡು ತನ್ನಲ್ಲೇ ಲಭ್ಯವಾಗುವ ಕೆಲವು ಅಂಶಗಳನ್ನು ಬಳಸಿ ಉತ್ಪಾದಿಸಿದೆ. ಈ ಹಿನ್ನೆಲೆಯಲ್ಲೇ ಪೇಟೆಂಟ್ ಸಹ ಪಡೆದಿರುವುದು ವಿಶೇಷವಾಗಿದೆ. ಕಂಪೆನಿಯ ಆರ್ ಆ್ಯಂಡ್ ಡಿ ವಿಭಾಗವು ಒಟ್ಟು 19 ಪೇಟೆಂಟ್‌ಗಳಿಗೆ ಅರ್ಜಿ ಹಾಕಿ ಐಬಿಬಿ ಸೇರಿದಂತೆ ನಾಲ್ಕನ್ನು ಪಡೆದುಕೊಂಡಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮೋನೋಮರ್ ಆಗಿ ಪರಿವರ್ತಿಸುವ ವಿಧಾನಕ್ಕೂ ಪೇಟೆಂಟ್ ಲಭ್ಯವಾಗಿದೆ.
Related Articles
ಎಂಆರ್‌ಪಿಎಲ್‌ನ ಉದ್ದೇಶಿತ ಸ್ಥಾವರವು ವಿಶ್ವದಲ್ಲೇ ಬೃಹತ್ ಮಟ್ಟದ್ದಾಗಿದೆ. ವಾರ್ಷಿಕ 2 ಲಕ್ಷ ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ. ಪ್ರಸ್ತುತ ಭಾರತವು ಐಬಿಬಿಯನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದು, ಎಂಆರ್‌ಪಿಎಲ್‌ನವರ ಉತ್ಪಾದನೆಯಿಂದ ಆಮದು ಕಡಿಮೆಯಾಗಿ ವಿದೇಶಿ ವಿನಿಮಯ ಉಳಿತಾಯವಾಗಲಿದೆ.ಅಷ್ಟೇ ಅಲ್ಲ ಹೆಚ್ಚುವರಿ ಐಬಿಬಿಯನ್ನು ರಫ¤ ಮಾಡುವ ಮೂಲಕ ವಿದೇಶಿ ವಿನಿಮಯವನ್ನೂ ಗಳಿಸಬಹುದಾಗಿದೆ.
Advertisement
ವಿಶ್ವ ಮಟ್ಟದ ಐಬಿಬಿ ಸ್ಥಾವರ ನಿರ್ಮಿಸಲಿದ್ದು, ಇದು ಫಾರ್ಮಾ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ಕಂಪೆನಿಯು ತನ್ನದೇ ವಿಶೇಷ ಐಬಿಬಿ ಉತ್ಪಾದನಾ ವಿಧಾನದ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಲಿದೆ.– ಸಂಜಯ್ ವರ್ಮ,
ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್