Advertisement

MRPL ‘ಸ್ಟಾರ್ಟ್‌ ಅಪ್‌ ಇಂಡಿಯಾ’ಅಭಿಯಾನಕ್ಕೆ ಅರ್ಜಿ ಆಹ್ವಾನ

03:40 AM Jul 05, 2018 | Karthik A |

ಮಂಗಳೂರು: MRPL (ಮಂಗಳೂರು ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್‌ ಲಿಮಿಟೆಡ್‌) ಕಂಪೆನಿ ನವೀನ ಉದ್ದಿಮೆ ಕೈಗೊಳ್ಳುವಂತೆ ಪ್ರೋತ್ಸಾಹಿಸಲು ‘ಸ್ಟಾರ್ಟ್‌ ಅಪ್‌ ಇಂಡಿಯಾ’ ಅಭಿಯಾನದ 2ನೇ ಹಂತವನ್ನು ಜು. 1ರಿಂದ ಪ್ರಾರಂಭಿಸಿದೆ. ಕೇಂದ್ರ ಸರಕಾರದ ಯೋಜನೆಗೆ ಪೂರಕವಾಗಿ ವಿವಿಧ ತೈಲ ಕಂಪೆನಿಗಳು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದ್ದು MRPL ಕೂಡ ಅರ್ಜಿ ಆಹ್ವಾನಿಸಿದೆ. ಅರ್ಜಿಗಳ ಪರಿಶೀಲನೆಗೆ NITKಯ ಆಯ್ದ ಅಧಿಕಾರಿಗಳ ಸಹಾಯ ಪಡೆದುಕೊಳ್ಳಲಾಗಿದೆ. ಆಯ್ದ ಅರ್ಜಿದಾರರಿಗೆ ನವೀನ ಉದ್ದಿಮೆ ಸ್ಥಾಪನೆಗೆ ಹಾಗೂ ಈಗಾಗಲೇ ಉದ್ದಿಮೆ ಶುರು ಮಾಡಿದವರಿಗೆ ಅದರ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಿದೆ.

Advertisement

ಮೊದಲ ಹಂತದಲ್ಲಿ 25 ಅರ್ಜಿ
ಮೊದಲ ಹಂತದಲ್ಲಿ ಸುಮಾರು 25 ಅರ್ಜಿಗಳು ಬಂದಿದ್ದರೂ ಕೇವಲ 5 ಅರ್ಜಿಗಳಷ್ಟೇ ಪರಿಶೀಲನೆ ಅಂತಿಮ ಹಂತಕ್ಕೆ ಬಂದಿವೆ. ಒಟ್ಟು ಮೂರು ವರ್ಷಗಳ ಅವಧಿಗೆ 10 ಕೋಟಿ ರೂ. ಹಣವನ್ನು ಈ ಯೋಜನೆಗೆ ಕಂಪೆನಿ ಮೀಸಲಿಟ್ಟಿದೆ.

ಉದ್ಯೋಗ ಸೃಷ್ಟಿಸಬಲ್ಲ ಉದ್ಯಮ
ಯೋಜನೆ ಮೂಲಕ ಹಣದ ನೆರವು ಪಡೆಯಬೇಕಾದರೆ, ಉದ್ಯಮ ಹೊಸತನದಿಂದ ಕೂಡಿರಬೇಕು, ಲಾಭದಾಯಕ ಮತ್ತು ಉದ್ಯೋಗಗಳನ್ನು ಸೃಷ್ಟಿಸುವಂತಿರಬೇಕು. ಈಗಾಗಲೇ ಪ್ರಾರಂಭಿಸಿದ ಉದ್ದಿಮೆಗೂ ಧನಸಹಾಯ ಪಡೆದುಕೊಳ್ಳಬಹುದು. ಆದರೆ, ಉದ್ದಿಮೆ ಪ್ರಾರಂಭವಾಗಿ 7 ವರ್ಷ ಕಳೆದಿರಬಾರದು. ಹೆಚ್ಚಿನ ಮಾಹಿತಿಗೆ 
https//:startup.mrpl.co.in ಸಂಪರ್ಕಿಸಬಹುದೆಂದು ಕಂಪೆನಿ ತಿಳಿಸಿದೆ.

ಸ್ಥಳೀಯ ಯುವಕರಿಗೆ ಅವಕಾಶ
MRPL ಜನರಲ್‌ ಮ್ಯಾನೇಜರ್‌ ಸುಧೀರ್‌ ಪೈ ಉದಯವಾಣಿ ಜತೆ ಮಾತನಾಡಿ, ‘2ನೇ ಹಂತದಲ್ಲಿ ಹೆಚ್ಚಾಗಿ ಸ್ಥಳೀಯ ಯುವಕರನ್ನೇ  ಕೇಂದ್ರೀಕರಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತದೆ. 2ನೇ ಹಂತಕ್ಕೆ 2 ಅರ್ಜಿಗಳು ಬಂದಿದ್ದು ಪರಿಶೀಲಿಸಲಾಗುತ್ತಿದೆ. ಯುವಕರು ಪ್ರಯೋಜನ ಪಡೆದುಕೊಳ್ಳಲು ಮುಂದೆ ಬರಬೇಕು’ ಎಂದು ಹೇಳಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next