Advertisement

ಎಂಆರ್‌ಪಿಎಲ್‌: ಪರಿಸರ ಪ್ರೇಮಿ ತುಳಸಿ ಗೌಡರಿಗೆ ಸಮ್ಮಾನ

01:40 AM Jun 05, 2022 | Team Udayavani |

ಸುರತ್ಕಲ್‌: ಒಎನ್‌ಜಿಸಿ ಎಂಆರ್‌ಪಿಎಲ್‌ ವತಿಯಿಂದ ಪರಿಸರ ದಿನಾಚರಣೆ ಸಂಸ್ಥೆಯ ಟೌನ್‌ಶಿಪ್‌ನಲ್ಲಿರುವ ಸಭಾಂಗಣದಲ್ಲಿ ಶನಿವಾರ ಜರಗಿತು.

Advertisement

ಪರಿಸರ ಉಳಿಸುವ ನಿಟ್ಟಿನಲ್ಲಿ ಲಕ್ಷಾಂತರ ಸಸಿ ನೆಟ್ಟು ಪೋಷಿಸಿ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಾರವಾರದ ತುಳಸಿ ಗೌಡ ಅವರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.

ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ತುಳಸಿ ಅವರು, ಮಕ್ಕಳು ಸಸಿ ನೆಟ್ಟು ಬೆಳೆಸಬೇಕು. ಇದರಿಂದ ಎಲ್ಲರಿಗೂ ಒಳಿತಾಗುತ್ತದೆ ಎಂದರು.

ಪರಿಸರ ಪ್ರೇಮಿ ಹಾಗೂ ನಿಸರ್ಗ ಛಾಯಾಚಿತ್ರ ಗ್ರಾಹಕರಾದ ಎಂ. ದಿನೇಶ್‌ ನಾಯಕ್‌ ಅವರು ಅಳಿವಿ ನಂಚಿನಲ್ಲಿರುವ ಔಷಧೀಯ ಗುಣ ಗಳುಳ್ಳ ಸಸಿಗಳನ್ನು ಮತ್ತೆ ನೆಡುವ ಮೂಲಕ ನಮ್ಮ ಪರಿಸರದ ರಕ್ಷಣೆಗೆ ಮುಂದಾಗಬೇಕಿದೆ ಎಂದರಲ್ಲದೆ, ವಿದ್ಯಾರ್ಥಿ ಸಮುದಾಯಕ್ಕೆ ಸಸ್ಯ ಪ್ರಬೇಧಗಳ ಮಹತ್ವ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವೈ. ದಿನೇಶ್‌ ನಾಯಕ್‌ ಅವರು ವಿದ್ಯಾರ್ಥಿಗಳು ಪ್ರದರ್ಶಿಸಿದ ಪರಿಸರ ಸ್ನೇಹಿ ವಿದ್ಯುತ್‌ ವ್ಯವಸ್ಥೆ, ನಗರಗಳು, ಪರಿಸರ ಮಾಲಿನ್ಯ ಹೀರಿಕೊಳ್ಳ ಬಲ್ಲ ನಗರ ನಿರ್ಮಾಣ ಮತ್ತಿತರ ಯೋಜನೆಗಳನ್ನು ಪ್ರಶಂಸಿಸಿದರಲ್ಲದೆ, ಪರಿಸರವನ್ನು ಉಳಿಸಲು ನಾಗರಿಕರ ಕೊಡುಗೆ ಅಗತ್ಯವಾಗಿದೆ ಎಂದರು.

Advertisement

ನಿರಂತರ ಕೊಡುಗೆ
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ನಿರ್ದೇಶಕ ಎಂ. ವೆಂಕಟೇಶ್‌ ಅವರು ಒಎನ್‌ಜಿಸಿ ಎಂಆರ್‌ಪಿಎಲ್‌ ಸಂಸ್ಥೆ ಗ್ರೀನ್‌ ಬೆಲ್ಟ್ ನಿರ್ಮಾಣ ಸಹಿತ ಹಸುರು ವಲಯದ ಬೆಳವಣಿಗೆಗೆ ನಿರಂತರ ಕೊಡುಗೆ ನೀಡುತ್ತಾ ಬರುತ್ತಿದೆ ಎಂದರು.

ರಿಫೈನರಿ ಡೈರೆಕ್ಟರ್‌ ಸಂಜಯ್‌ ವರ್ಮ, ರಿಫೈನರಿ ವಿಭಾಗದ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕಾಮತ್‌, ಪ್ರಾಜೆಕ್ಟ್ ವಿಭಾಗದ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಬಿಎಚ್‌ವಿ ಪ್ರಸಾದ್‌, ಪರಿಸರ ಅಧಿಕಾರಿ ಕೆ. ಕೀರ್ತಿ ಕುಮಾರ್‌ ಉಪಸ್ಥಿತರಿದ್ದರು. ಸಿಜಿಎಂ ಸುದರ್ಶನ್‌ ಎಂ. ಸ್ವಾಗತಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next