Advertisement

ಭೂ ಸ್ವಾಧೀನ ಜಮೀನಿಗೆ ಮಾರುಕಟ್ಟೆ ದರ ಪರಿಗಣಿಸಲು: ಮನವಿ

11:26 AM Dec 14, 2018 | Team Udayavani |

ಮಹಾನಗರ : ಎಂಆರ್‌ಪಿಎಲ್‌ 4ನೇ ಹಂತದ ಯೋಜನೆಗೆ ಭೂಸ್ವಾಧೀನಗೊಳ್ಳುವ ಜಮೀನಿಗೆ 2013ರ ಹೊಸ ಕಾಯ್ದೆಯಂತೆ ಮಾರುಕಟ್ಟೆ ದರವನ್ನು ಪರಿಗಣಿಸಿ ಭೂ ದರ ನಿಗದಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಸಂಯಕ್ತ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Advertisement

ಮನವಿ ಸ್ವೀಕರಿಸಿ ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಭೂ ಸ್ವಾದೀನ ಕಾಯಿದೆ 2013ರ ಕಾಲಂ 26ರ ತಕರಾರಿನಲ್ಲಿ ನಿಗದಿಪಡಿಸಲು ಈ ಬಗ್ಗೆ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ. ಭೂಮಿಯನ್ನು ನೀಡಿರುವ ರೈತರಿಗೆ ರಾಜ್ಯ ಸರಕಾರ ಮದ್ಯ ಪ್ರವೇಶಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೈಗಾರಿಕೆಗಳಿಗೆ ಎಚ್ಚರಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

4ನೇ ಹಂತದ ವಿಸ್ತರಣೆಗೆ ಸುಮಾರು 1050 ಎಕ್ರೆ ಭೂಮಿಯನ್ನು ವಶಪಡಿಸುವಂತೆ ತೀರ್ಮಾನಿಸಲಾಗಿದ್ದು, 70ಎಕ್ರೆ ಅಧಿಕ ಖಾಸಗಿ ಭೂಮಿಯನ್ನು ವಶಪಡಿಸು ವಂತೆ 2013ರ ಒಪ್ಪಂದದ ಕಾಯಿದೆಯಂತೆ ನೀಡದೇ ಸ್ವಾದೀನ ಪಡಿಸಿಕೊಳ್ಳುವಲ್ಲಿ ಹಿಂದಿನ ಪರಿಹಾರದ ಖಾಯಿದೆ ಒಪ್ಪಂದದ ಮೂಲಕ ರೈತರ ಸಂಕಷ್ಟ ಜಿಲ್ಲಾಡಳಿತ ತೀರ್ಮಾನಕೈಗೊಳ್ಳುವಂತೆ ವಿನಂತಿ ಮಾಡಲಾಯಿತು. ಮಾರುಕಟ್ಟೆ ದರಕ್ಕಿಂತ 4 ಪಟ್ಟು ದರದಿಂದ ಕನಿಷ್ಠ 3 ಪಟ್ಟು ದರ ನಿಗದಿ ಮಾಡಬೇಕೆಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಇದೇ ವೇಳೆ ಸಂಯುಕ್ತ ನಾಗರಿಕಾ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ರೋನಾಲ್ಡ್‌ ಫ‌ರ್ನಾಂಡಿಸ್‌, ಕಾರ್ಯದರ್ಶಿ ದೀಪಕ್‌ ಪೆರ್ಮುದೆ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next