Advertisement

ಎಂಆರ್‌ಪಿ ಮದ್ಯದ ಅಂಗಡಿಗೆ ಕನ್ನ

02:55 PM Apr 07, 2020 | Suhan S |

ಮಾಲೂರು: ತಾಲೂಕಿನ ಕರಿನಾಯಕನ ಹಳ್ಳಿ ಬಳಿಯಲ್ಲಿನ ಎಂಆರ್‌ಪಿ ಮದ್ಯದ ಅಂಗಡಿಗೆ ಹಿಂಬದಿಯಿಂದ ಕನ್ನ ಹಾಕಿರುವ ಖದೀಮರು, ಅಂಗಡಿಯ ಲ್ಲಿದ್ದ ಮದ್ಯವನ್ನು ದೋಚಿದ್ದಾರೆ. ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿ ಕೊಂಡಿರುವ ಕರಿನಾಯಕನಹಳ್ಳಿಯಲ್ಲಿ ಎಂಆರ್‌ಪಿ ಮದ್ಯದ ಅಂಗಡಿಯನ್ನು ತೆರೆಯಲಾಗಿದ್ದು, ರಾತ್ರಿ ಅಂಗಡಿಯ ಹಿಂಭಾಗದಲ್ಲಿ ಗೋಡೆ ಕೊರದೆ ಮದ್ಯ ದೋಚಲಾಗಿದೆ.

Advertisement

ಲಾಕ್‌ಡೌನ್‌ ಮಾಡಿದ್ದ ದಿನವೇ ಹೆಚ್ಚಿನ ಪ್ರಮಾಣದ ಮದ್ಯವನ್ನು ದಾಸ್ತಾನು ಮಾಡಿದ್ದು, ಅಂಗಡಿಯಲ್ಲಿನ ಕಾರ್ಮಿಕರೇ ಕಳವು ಮಾಡಿ ದುಬಾರಿ ಬೆಲೆಗೆ ಮಾರಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕಡಿಮೆಬೆಲೆಯ 180 ಎಂ.ಎಲ್‌ ಮದ್ಯ 800 ರಿಂದ 1000 ಸಾವಿರ ರೂ.ವರೆಗೂ ಮಾರಾಟವಾಗುತ್ತಿರುವ ಕಾರಣ ಎಂಆರ್‌ಪಿ ಸೆಂಟರ್‌ನಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಸಿಬ್ಬಂದಿಗಳೇ ಕೃತ್ಯ ನಡೆಸಿ ರುವ ಶಂಕೆಯನ್ನು ಪೊಲೀಸರೂ ವ್ಯಕ್ತ ಪಡಿಸಿದ್ದಾರೆ. ಅಪರಾಧ ವಿಭಾಗದ ಪಿಎಸ್‌ಐ ರಂಗಲಕ್ಷ್ಮೀ ನೇತೃತ್ವದ ಪೊಲೀಸರ ತಂಡ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next