Advertisement

ಶ್ರೀ ಧ.ಮಂ. ಶಾಲೆ:  ನಾಟಿ ಪ್ರಾತ್ಯಕ್ಷಿಕೆ

02:40 AM Jul 14, 2017 | Team Udayavani |

ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನಾಟಿ ಪ್ರಾತ್ಯಕ್ಷಿಕೆ ನಡೆಸಿದರು.

Advertisement

ಶ್ರೀ ಧ. ಮಂ. ಶಿ. ಸಂಸ್ಥೆಯ  ಕಾರ್ಯದರ್ಶಿ ಡಿ. ಹಷೇìಂದ್ರ ಕುಮಾರ್‌ ಅವರು ಮಾತನಾಡಿ, ಜೀವನ ಪಾಠ ಆಗಬೇಕು. ಎರೆಹುಳು ಗೊಬ್ಬರದ  ಮಾಹಿತಿ, ಹಣ್ಣಿನ ತೋಟ, ಜಮಾ ಉಗ್ರಾಣ, ಕಾರ್‌ ಮ್ಯೂಸಿಯಂ, ಮಾದರಿಯಾದ ಗೋಶಾಲೆ, ಮಂಜೂಷಾ ವಸ್ತು ಸಂಗ್ರಹಾಲಯ ಹಾಗೂ ಕ್ಷೇತ್ರದ ವಿವಿಧ ಕಾರ್ಯಗಳ ಮಾಹಿತಿ ಸಿಗುವಂತಾಗಬೇಕು ಎಂದರು.

ಹಡೀಲು ಬಿದ್ದ ಕೃಷಿ ಭೂಮಿಯನ್ನು  ಹಸನಾಗಿಸಲು  ಧ.ಗ್ರಾ. ಯೋಜನೆಯ  ಮೂಲಕ  ನೂತನ ತಳಿ ಪದ್ಧತಿಯ ಬಗ್ಗೆ ರೂಪುರೇಷೆ ನೀಡಿ ಯೋಜನೆ ಕಾರ್ಯಗತಗೊಳಿಸಿ  ಕಾರ್ಯರೂಪಕ್ಕೆ ತರುವ ಮೂಲಕ  ಶ್ರೀ ಕ್ಷೇತ್ರದ  ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವ  ವಿದ್ಯಾರ್ಥಿಗಳಿಗೆ
ಕೃಷಿ ಪದ್ಧತಿಯ ನೈಜ ಚಿತ್ರಣದ  ಅರಿವು ಮೂಡಿಸಲು ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು.
 
ಶಿಕ್ಷಣ ಸಂಸ್ಥೆಯ ಸಲಹಾ  ಸಮಿತಿ ಅಧ್ಯಕ್ಷೆ  ಸುಪ್ರಿಯಾ ಹಷೇìಂದ್ರ ಕುಮಾರ್‌ ಉಪಸ್ಥಿತರಿದ್ದರು. ಕಾರ್ಯಕ್ರಮದ  ರೂಪುರೇಷೆ ಮತ್ತು ಮಾರ್ಗದರ್ಶನವನ್ನು  ಕೃಷಿ ವಿಭಾಗದ  ಶ್ಯಾನುಭೋಗ ರಾಜೇಂದ್ರ ರೈ ಕಾರ್ಯಕ್ರಮ ನಿರ್ವಹಿಸಿದರು.ನಾಟಿ ಕಾರ್ಯಕ್ರಮದ ನೇತೃತ್ವವನ್ನು ಶಾಲಾ ಮುಖ್ಯ ಶಿಕ್ಷಕ ಡಿ. ಧರ್ಣಪ್ಪ ವಹಿಸಿದ್ದರು. ಶಾಲಾ ಸಹ ಶಿಕ್ಷಕಿ ಮನೋರಮಾ, ಶೇಖರ ಗೌಡ ಮತ್ತು  ಸಂಜೀವ ಕೆ. ಅವರು ವಿದ್ಯಾರ್ಥಿಗಳಿಗೆ  ಸೂಕ್ತ ಮಾರ್ಗದರ್ಶನ ನೀಡಿ ಕಾರ್ಯಕ್ರಮಕ್ಕೆ  ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next