Advertisement

ಮನ್‌ಪ್ರೀತ್‌: ಹಾಕಿ ಅಂಗಳದ ಮಿಸ್ಟರ್‌ ಕೂಲ್‌!

11:45 AM Mar 03, 2018 | |

ಆ ಬಾಲಕನಿಗೆ ಆಗಿನ್ನೂ 10ನೇ ವಯಸ್ಸು. ಅಮ್ಮನಿಗೆ ತನ್ನ ಮಗ ಪ್ರಥಮ ರ್‍ಯಾಂಕ್‌ ಬರಲೇಬೇಕು ಅನ್ನುವ ಹಟ, ಆಸೆ. ಆದರೆ, ಆ ಬಾಲಕನಿಗೆ ಹಾಕಿ ಆಟದ ಮೇಲೆ ಪ್ರೀತಿ,ಯಾವಾಗ ನೋಡಿದರೂ ಕ್ರೀಡಾಂಗಣದ ಲ್ಲಿಯೇ ಇರುತ್ತಿದ್ದ. ಹೀಗಾಗಿ ಆ ಅಮ್ಮ ಮಗನನ್ನು ಕೊಣೆಯಲ್ಲಿ ಕೂಡಿ ಹಾಕಿ ಅಭ್ಯಾಸ ಮಾಡು ವಂತೆ ಹೆದರಿಸುತ್ತಿದ್ದಳು. ಆದರೆ ಆ ತುಂಟ ಅದ್ಯಾವುದೋ ನೆಪ ಮಾಡಿ ಬಾಗಿಲನ್ನು ತೆಗೆಸಿ ಕ್ರೀಡಾಂಗಣಕ್ಕೆ ಓಡಿ ಹೋಗಿ ಬಿಡುತ್ತಿದ್ದ.

Advertisement

ಈ ಬಾಲಕನೇ ಇಂದಿನ ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌. ಪಂಜಾಬ್‌ನ ಹಳ್ಳಿಯೊಂದರಲ್ಲಿ ಜನಿಸಿದ ಮನ್‌ಪ್ರೀತ್‌ಗೆ ಬಾಲ್ಯದಲ್ಲಿಯೇ ಹಾಕಿ ಎಂದರೆ ತುಂಬಾ ಪ್ರೀತಿ. ಇದರಿಂದಾಗಿ ಪ್ರಾಥಮಿಕ ಶಾಲೆಯಲ್ಲಿ ಇರುವಾಗಲೇ ನಿರಂತರ ಅಭ್ಯಾಸ ಮಾಡಲು ಆರಂಭಿಸಿದ. ದಿನದ ಹೆಚ್ಚಿನ ಸಮಯವನ್ನು ಹಾಕಿ ಕ್ರೀಡಾಂಗಣದಲ್ಲಿಯೇ ಕಳೆಯುತ್ತಿದ್ದ. ಮಗ ಅಭ್ಯಾಸ ಮಾಡುವುದಿಲ್ಲ ಎಂದು ಕುಟುಂಬದವರು ಮೊದಲು ಕ್ರೀಡಾಂಗಣಕ್ಕೆ ಹೋಗುವುದು ಬೇಡ ಎಂದು ಹೆದರಿಸುತ್ತಿದ್ದರು. ಆದರೆ ಆತ ತಾಲೂಕು, ಜಿಲ್ಲಾ ಮಟ್ಟದಲ್ಲಿ ಆಡಲು ಆರಂಭಿಸಿದ ಮೇಲೆ ಇಡೀ ಕುಟುಂಬವೇ ಮನ್‌ಪ್ರೀತ್‌ ಬೆಂಬಲಕ್ಕೆ ನಿಂತಿತು. ಆಟದ ಮೇಲೆ ಅವರಿಗಿರುವ ಪ್ರೀತಿ, ನಿರಂತರ ಶ್ರಮ ಇಂದು ಭಾರತ ತಂಡದ ನಾಯಕನ ಸ್ಥಾನದಲ್ಲಿ ತಂದು ನಿಲ್ಲಿಸಿದೆ.

19ನೇ ವರ್ಷದಲ್ಲಿಯೇ ಪದಾರ್ಪಣೆ ಭಾರತದ ಜೂನಿಯರ್‌ ತಂಡದಲ್ಲಿ ನಾಯಕನಾಗಿಯೂ ಯಶಸ್ವಿಯಾದ ಮನ್‌ಪ್ರೀತ್‌ಗೆ 19ನೇ ವರ್ಷದಲ್ಲಿಯೇ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಈತ, 2012 ಮತ್ತು 2016ರ ಒಲಿಂಪಿಕ್ಸ್‌ನಲ್ಲಿಭಾರತ ತಂಡವನ್ನು ಪ್ರತಿನಿಧಿಸಿದರು. ಚುರುಕಿನ ಆಟದಿಂದ ಇಡೀ ವಿಶ್ವದ ಹಾಕಿ ಪ್ರೇಮಿಗಳ ಗಮನ ಸೆಳೆದರು.

2017ರಲ್ಲಿ ನಾವಿಕನ ಪಟ್ಟ ಭಾರತ ಹಾಕಿ ತಂಡದಲ್ಲಿ ಹಲವು ಬದಲಾವಣೆಯನ್ನು ಕಂಡ ವರ್ಷ ಇದು. ಅನೇಕ ಅಂತಾರಾಷ್ಟ್ರೀಯ ಕೂಟದಲ್ಲಿ ಭಾರತ ಗೆಲುವು ಸಾಧಿಸಿತ್ತು. ತನ್ನ ಹಿಂದಿನ ವೈಫ‌ಲ್ಯದಿಂದ ಹೊರಬರುವಲ್ಲಿ ಯಶಸ್ವಿಯಾಗಿತ್ತು. ಇದೇ ಹಂತದಲ್ಲಿ ನಾಯಕ ಶ್ರೀಜೇಶ್‌ ಗಾಯದಿಂದ ಹೊರಬಿದ್ದರು. ಈ ಹಂತದಲ್ಲಿ ಯುವಕನಾಗಿದ್ದ ಮನ್‌ಪ್ರೀತ್‌ ಹೆಗಲಿಗೆ ನಾಯಕತ್ವದ ಹೊಣೆ ಬಿತ್ತು. ಈ ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮನ್‌ ಪ್ರೀತ್‌ ಮೇಲುಗೈ ಸಾಧಿಸಿದ. ಎಂಥ ಸಂದಿಗ್ಧ ಸಂದರ್ಭದಲ್ಲಿ ಈತ ಕೂಲ್‌ ಆಗಿ ತಂಡವನ್ನು ಮುನ್ನಡೆಸುವ ರೀತಿಯನ್ನು ನೋಡಿದ ಆಡಳಿತ ಮಂಡಳಿ ಮನ್‌ಪ್ರೀತ್‌ಗೆ ಕಾಯಂ ನಾಯಕ ಸ್ಥಾನ ನೀಡಿತು. ಈ ವರ್ಷ ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿಯೂ ಭಾರತ ತಂಡವನ್ನು ಮನ್‌ಪ್ರೀತ್‌ ಮುನ್ನಡೆಸಲಿದ್ದಾರೆ.

ರೊನಾಲ್ಡೊ ಮೇಲಿನ ಅಭಿಮಾನಕ್ಕೆ ನಂ.7 ಜೆರ್ಸಿ ಮನ್‌ಪ್ರೀತ್‌, ಫೋರ್ಚುಗಲ್‌ನ ಖ್ಯಾತ ಫ‌ುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊರ ದೊಡ್ಡ ಅಭಿಮಾನಿ. ರೊನಾಲ್ಡೊ ಅವರಂತೆಯೇ ಫಿಟೆಸ್‌ ಕಾಯ್ದುಕೊಳ್ಳಬೇಕು. ರೋಚಕ ಆಟ ಆಡಬೇಕು ಎಂಬ ಗುರಿಯನ್ನು ಹೊಂದಿರುವ ಈತ, ರೊನಾಲ್ಡೊ ಧರಿಸುವ ನಂ.7 ಜೆರ್ಸಿಯನ್ನೇ ತಾವೂ ಧರಿಸುತ್ತಾರೆ.

Advertisement

ಸೆಲ್ಫಿàಗೆ ಬಂದವಳು ಪ್ರೇಯಸಿಯಾದಳು 2013ರಲ್ಲಿ ಮಲೇಷ್ಯಾದಲ್ಲಿ ನಡೆದ ಸುಲ್ತಾನ್‌ ಅಜ್ಲಾನ್‌ ಷಾ ಟ್ರೋಫಿ ಯಲ್ಲಿ ಭಾರತ ಫೈನಲ್‌ ತಲುಪಿತ್ತು. ಆತಿಥೇಯ ತಂಡವಾಗಿದ್ದ ಮಲೇಷ್ಯಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿತ್ತು. ಈ ವೇಳೆ ಪಂದ್ಯ ನೋಡಲು ಬಂದ ಯುವತಿಯೊಬ್ಬಳು ಸ್ಪುರದ್ರೂಪಿಯಾಗಿರುವ ಮನ್‌ಪ್ರೀತ್‌ ಬಳಿ ಬಂದು ಸೆಲ್ಫಿ ತೆಗೆಸಿಕೊಂಡಿದ್ದಾಳೆ. ಆ ಚೆಲುವೆಯನ್ನು ನೋಡಿ ಮನ್‌ಪ್ರೀತ್‌ ಮನಸ್ಸೂ ಕರಗಿದೆ. ಅಲ್ಲಿಂದಲೇ ಅವರಿಬ್ಬರ ಪ್ರೇಮ ಆರಂಭವಾಗಿದೆ. 

ಕ್ರಿಕೆಟಿಗ ಎಂ.ಎಸ್‌.ಧೋನಿಯಂತೆ ಮನ್‌ಪ್ರೀತ್‌ ಕೂಡ “ಮಿಸ್ಟರ್‌ ಕೂಲ್‌’ ನಾಯಕರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಈತ ಮಹತ್ವದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮುಂಬರುವ ವಿಶ್ವಕಪ್‌ನಲ್ಲಿ ಭಾರತ ತಂಡ ಈತನ ನೇತೃತ್ವದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ.
 ಧನರಾಜ್‌ ಪಿಳೈ, ಮಾಜಿ ಆಟಗಾರ

Advertisement

Udayavani is now on Telegram. Click here to join our channel and stay updated with the latest news.

Next