ತುಳು-ಕನ್ನಡಿಗ ಯುವ ಪ್ರತಿಭೆಗಳನ್ನು ಒಗ್ಗೂಡಿಸಿ ಆ ಮುಖೇನ ಪ್ಯಾಶನ್‌ಲೋಕದ ಅರಿವು, ಮಹತ್ವವನ್ನು ತಿಳಿಹೇಳಿ ಅವರ ಪ್ರತಿಭೆಗೆ ಸ್ಪೂರ್ತಿಯ ಜೊತೆಗೆ ಹೊಸ ವೇದಿಕೆಯನ್ನು ನೀಡುತ್ತಿರುವ ರುದ್ರ ಎಂಟರ್‌ಟೈನ್ ಈ ಬಾರಿ “ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ-2018′ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಿಕೊಂಡಿದೆ. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಇವರ ಸಾರಥ್ಯದಲ್ಲಿ ಕನ್ನಡ ವೆಲ್ಫೆàರ್ ಸೊಸೈಟಿ ಘಾಟ್‌ಕೋಪರ್ ಇವರ ಸಹಯೋಗದೊಂದಿಗೆ ಎ. 8 ರಂದು ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ -2018 ಸೌಂದರ್ಯ ಸ್ಪರ್ಧೆಯ ಗ್ರಾಂಡ್ ಫಿನಾಲೆಯು ವೈವಿಧ್ಯತೆಗಳೊಂದಿಗೆ ಜರಗಲಿದೆ.
ಮುಂಬಯಿಯಲ್ಲಿ ಪ್ರಪ್ರಥ ಬಾರಿಗೆ ತುಳು-ಕನ್ನಡಿಗ ಸರ್ವ ಜಾತೀಯ ಯುವಕ-ಯುವತಿಯವರಿಗಾಗಿ ಆಯೋಜಿಸಿಕೊಂಡಿರುವ ಈ ಸೌಂದರ್ಯ ಸ್ಪರ್ಧೆಯ ಎರಡು ಸುತ್ತಿನ ಆಯ್ಕೆ ಪ್ರಕ್ರಿಯೆಗಳು ಈಗಾಗಲೇ ಸಮಾಪನಗೊಂಡಿದ್ದು, ಆಯ್ಕೆಯಾದ ಸ್ಪರ್ಧಾಳುಗಳು ಕಾರ್ಯಕ್ರಮದ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ಆಡಿಷನ್ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಯುವಕರ ಸಾಲಿನಲ್ಲಿ ರೂಪೇಶ್ ಶೆಟ್ಟಿ, ಕ್ರಿತೇಶ್ ಅಮೀನ್, ಸಾಗರ್ ಬಂಗೇರ, ರಿತೇಶ್ ಕೋಟ್ಯಾನ್, ನಿನಾದ್ ಶೆಟ್ಟಿ, ಪ್ರಶಾಂತ್ ಪೂಜಾರಿ, ಅಕ್ಷಯ ಸುವರ್ಣ, ಪ್ರಸಾದ್ ಶೆಟ್ಟಿ, ಆಕಾಶ್ ಹಸೂÅರು, ಅವನೀಶ್ ದೇವಾಡಿಗ, ಜೈಕಿರಣ್ ರೈ, ತುಶಾಂತ್ ಕೋಟ್ಯಾನ್, ಪೃಥ್ವಿ ಪೂಜಾರಿ, ಆಕಾಶ್ ಪೂಜಾರಿ, ಸಂಕೇತ್ ಸುವರ್ಣ ಹಾಗೂ ಯುವತಿಯವರ ಸಾಲಿನಲ್ಲಿ ನಿಧಿ ಶೆಟ್ಟಿ, ಡಾ| ತಶ್ಮಿತಾ ಪೂಜಾರಿ, ಪೂಜಾ ಶೆಟ್ಟಿ ಮೂಡಬಿದ್ರೆ, ಶ್ರದ್ಧಾ ಶೆಟ್ಟಿ, ಡಾ| ಸ್ನೇಹಾ ಕೋಟ್ಯಾನ್, ಸ್ನೇಹಾ ರೈ, ನೇಹಾ ಸಾಲ್ಯಾನ್, ಅಮೃತಾ ಸುವರ್ಣ, ರೋಶ್ನಿ ಶೆಟ್ಟಿ, ಚೈತ್ರಾ ಶೆಟ್ಟಿ, ಅನ್ನಪೂರ್ಣಾ ಪೂಜಾರಿ, ಶ್ರೇಯಾ ಸಾಲ್ಯಾನ್, ನವ್ಯಶ್ರೀ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರಿಯಾಂಕಾ ಸಾಲ್ಯಾನ್ ಪುಣೆ ಇವರು ಗ್ರಾಂಡ್ ಫಿನಾಲೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಅದೃಷ್ಟಶಾಲಿಗಳು ವಿಜೇತ ಕಿರೀಟವನ್ನು ಮುಡಿಗೇರಿಸಿಕೊಳ್ಳಲಿದ್ದಾರೆ.
ಸ್ಪರ್ಧಾಕಣದಲ್ಲಿ ಮಹಾನಗರ ಸೇರಿದಂತು ಪುಣೆ ಹಾಗೂ ತವರೂರಿನಿಂದಲೂ ಸ್ಪರ್ಧಿಗಳು ಆಗಮಿಸಿ ಪಾಲ್ಗೊಳ್ಳುತ್ತಿರುವುದು ವಿಶೇಷತೆಯಾಗಿದೆ. ಮಿಸ್ಟರ್ ಆ್ಯಂಡ್ ಮಿಸ್ ಕರಾವಳಿ-2018 ಸೌಂದರ್ಯ ಸ್ಪರ್ಧಾ ಕಾರ್ಯಕ್ರಮದ ಮಧ್ಯೆ ಅಂತಾರಾಷ್ಟ್ರೀಯ ಮಟ್ಟದ ಚಿತ್ರ ಕಲಾವಿದ ಚಿತ್ರಮಿತ್ರ ಇವರಿಂದ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಹೆಸರಾಂತ ಕಲಾವಿದ ಗಾಯಕ ಲತೇಶ್ ಪೂಜಾರಿ ಬಳಗದ ಎಎಫ್‌ಎಂ ಮ್ಯಾಜಿಕ್ ತಂಟದಿಂದ ವೈವಿಧ್ಯಮಯ ಸಂಗೀತ ರಸಮಂಜರಿ ಹಾಗೂ ನಗರದ ನಾಮಾಂಕಿತ ನೃತ್ಯ ತಂಡದವರಿಂದ ನೃತ್ಯ ವೈಭವಗಳು ಮೆರುಗು ನೀಡಲಿದೆ. ವಿಶೇಷ ಆಮಂತ್ರಿತರಾಗಿ ಚಿತ್ರರಂಗ ಹಾಗೂ ಕಿರುತೆರೆಯ ನಟ-ನಟಿಯರು ಆಗಮಿಸಲಿದ್ದಾರೆ.
ಕಾರ್ಯಕ್ರಮ ನಿರೂಪಕರಾಗಿ ಕಲಾವಿದ ದೀಪಕ್ ಶೆಟ್ಟಿ ಮತ್ತು ಬಹುಮುಖ ಪ್ರತಿಭೆ ನಿತೇಶ್ ಕುಮಾರ್ ಮಾರ್ನಾಡ್ ಇವರು ಸಹಕರಿಸಲಿದ್ದಾರೆ. ಹೊಸತನದ ಛಾಯೆಯೊಂದಿಗೆ ಮಹಾನಗರದಲ್ಲಿ ತುಳು-ಕನ್ನಡಿಗರಿಗಾಗಿ ಆಯೋಜಿಸಿದ ಈ ಸೌಂದರ್ಯ ಸ್ಪರ್ಧೆಯು ಯುವ ಪ್ರತಿಭೆಗಳಿಗೆ ಹೊಸ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಫ್ಯಾಶನ್ ಲೋಕ ಒಳ ಹೊರಗುಗಳನ್ನು ಆಳವಾಗಿ ಅಭ್ಯಸಿಸಿ ಫ್ಯಾಶನ್ ಕೋರಿಯೋಗ್ರಾಫರ್ ಮಾತ್ರವಲ್ಲದೆ ಆಂಗ್ಲ ದೈನಿಕದ ಪತ್ರಕರ್ತನಾಗಿಯೂ ದುಡಿದು ಅನುಭವ ಇರುವ ಸನ್ನಿಧ್ ಪೂಜಾರಿ ಇವರ ಪರಿಕಲ್ಪನೆಯಾದ ರುದ್ರ ಎಂಟರ್‌ಟೈನ್‌ಮೆಂಟ್‌ನಲ್ಲಿ ಅವರಿಗೆ ಬೆನ್ನೆಲುಬಾಗಿ ಕಲಾ ಸಂಘಟಕ, ಅಭಿಷೇಕ್ ಪೂಜಾರಿ, ಐಶ್ವರ್ಯಾ ಪೂಜಾರಿ, ಕು| ನಿಶಾ ಪೂಜಾರಿ ಇವರು ಶ್ರಮಿಸುತ್ತಿದ್ದಾರೆ.
ಲೇಖಕ : ಪ್ರಭಾಕರ ಬೆಳುವಾಯಿ