Advertisement

Mpox: ಶಂಕಿತ ಪ್ರಕರಣಗಳ ಪ್ರತ್ಯೇಕ ಐಸೋಲೇಶನ್‌ಗೆ ಸೂಚನೆ

11:39 AM Aug 28, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಂಕಿಪಾಕ್ಸ್‌ ಸೋಂಕಿನ ಮುನ್ನೆಚ್ಚರಿಕೆ ಕ್ರಮವಾಗಿ ಸರ್ವೇಕ್ಷಣೆ ಕಣ್ಗಾವಲು ಪಡೆಯನ್ನು ಸಕ್ರಿಯಗೊಳಿಸಿದ್ದು, ಶಂಕಿತ ಪ್ರಕರಣಗಳನ್ನು ಪ್ರತೇಕ ಐಸೋಲೇಶನ್‌ ಹಾಗೂ ನಿರ್ವಹಣೆಗಾಗಿ ಬೆಂಗಳೂರಿನ ಇಂದಿ ರಾ ನ ಗ ರ ದ ಇಡಿ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯನ್ನು ರೆಫ‌ರಲ್‌ ಆಸ್ಪತ್ರೆಗಳಾಗಿ ಗುರುತಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ರಂದೀಪ ತಿಳಿಸಿದ್ದಾರೆ.

Advertisement

ವಿದೇಶದಲ್ಲಿ ಮಂಕಿಪಾಕ್ಸ್‌ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯದ ವಿಮಾನ ನಿಲ್ದಾಣ ಮತ್ತು ಬಂದರಿನಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಸೋಂಕಿತ ಪ್ರದೇಶದಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಜ್ವರ, ಚಳಿ, ಬೆವರುವಿಕೆ, ತಲೆ ನೋವು, ಮಾಂಸಖಂಡಗಳ ನೋವು, ಸುಸ್ತು, ಗಂಟಲ ಉರಿ, ಕೆಮ್ಮು, ಚರ್ಮದ ಮೇಲಿನ ದದ್ದುಗಳು ಮಂಕಿ ಪಾಕ್ಸ್‌ ಲಕ್ಷಣಗಳಾಗಿವೆ.

ಇವುಗಳಲ್ಲಿ ಯಾವುದಾದರೂ 2 ಲಕ್ಷಣಗಳು ಪ್ರಯಾಣಿಕರಲ್ಲಿ ಪತ್ತೆಯಾದರೆ ಅಂಥವರನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿ, ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಬೇಕಾಗಿದೆ ಎಂದರು.

21 ದಿನ ಐಸೋಲೇಶನ್‌: ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ವರದಿಯಾದರೆ ಕನಿಷ್ಠ 21 ದಿನಗಳ ವರೆಗೆ ಅಥವಾ ರಾಶ್‌ ಸಂಪೂರ್ಣವಾಗಿ ಗುಣಮುಖರಾಗುವ ತನಕ ಐಸೋಲೇಶನ್‌ನಲ್ಲಿ ಇರಬೇಕು. ಅವರಿಗೆ ಸೋಂಕಿತ ವ್ಯಕ್ತಿಗೆ ಕೇಂದ್ರ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಚಿಕಿತ್ಸೆ ನೀಡಲಾಗುತ್ತದೆ. ಆರೋಗ್ಯಾಧಿಕಾರಿಗಳು ಸೋಂಕಿತ ಪ್ರದೇಶದಿಂದ ಬರುವ ಸೋಂಕಿನ ಲಕ್ಷಣಗಳಿಲ್ಲದ ಪ್ರಯಾಣಿಕರ ಆರೋಗ್ಯದ ಮೇಲ್ವಿಚಾರಣೆಯನ್ನು 21 ದಿನಗಳ ವರೆಗೆ ನಿಗಾವಹಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next