Advertisement

ಆ್ಯಂಬುಲೆನ್ಸ್‌ನಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

08:48 PM Feb 18, 2023 | Team Udayavani |

ರೈಸನ್‌: ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಆ್ಯಂಬುಲೆನ್ಸ್‌ನಲ್ಲಿ 24 ವರ್ಷದ ಗರ್ಭಿಣಿಯೊಬ್ಬರು ತ್ರಿವಳಿ ಗಂಡು ಶಿಶುಗಳಿಗೆ ಜನ್ಮ ನೀಡಿರುವ ಘಟನೆ ಮಧ್ಯಪ್ರದೇಶದ ರೈಸನ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

Advertisement

ಪಿಪ್ಲಿಯಾ ಗೋಲಿ ಗ್ರಾಮದ ಜ್ಯೋತಿ ಬಾಯಿ ಅವರು ಹೊಟ್ಟೆ ನೋವೆಂದು ಶುಕ್ರವಾರ ಸಂಜೆ ಗೋಹರ್‌ಗಂಜ್‌ ಪ್ರಾಥಮಿಕ ಆಸ್ಪತ್ರೆಗೆ ಬಂದಿದ್ದರು. ತಪಾಸಣೆ ನಡೆಸಿದ ವೈದ್ಯರು, ಮಹಿಳೆಯ ಪರಿಸ್ಥಿತಿ ಗಮನಿಸಿ, ಶೀಘ್ರ ಬೋಪಾಲ್‌ನ ಸುಲ್ತಾನಿಯಾ ಸರ್ಕಾರಿ ಆಸ್ಪತ್ರೆ ತೆರಳುವಂತೆ ತಿಳಿಸಿದರು.

ಅಲ್ಲದೇ 108 ಆ್ಯಂಬುಲೆನ್ಸ್‌ನಲ್ಲಿ ಸ್ವತಃ ಡಾ. ಸಂದೀಪ್‌ ಮಾರನ್‌ ಅವರು ಜತೆಯಲ್ಲಿ ತೆರಳಿದರು. ಮಾರ್ಗ ಮಧ್ಯದಲ್ಲೇ ಆಕೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ.

ತಾಯಿ-ಶಿಶುಗಳು ಆರೋಗ್ಯವಾಗಿದ್ದು, ಸದ್ಯ ಸುಲ್ತಾನಿಯಾ ಆಸ್ಪತ್ರೆಯ ನಿಗಾ ಘಟಕದಲ್ಲಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next