Advertisement

ಪಿಡಬ್ಲ್ಯೂಡಿ ಖಾಸಗಿ ಕಂಪನಿಯಾ?: ಅಧಿಕಾರಿಗಳಿಗೆ ಸಂಸದ ಉಮೇಶ ಜಾಧವ್ ತರಾಟೆ

01:05 PM Jan 17, 2022 | Team Udayavani |

ಕಲಬುರಗಿ: ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಮಾಡುತ್ತಿರುವುದನ್ನು ನೋಡಿದರೆ ಲೋಕೋಪಯೋಗಿ ಇಲಾಖೆಯನ್ನು ಪ್ರೈವೇಟ್ ಕಂಪನಿ ಎಂದು ತಿಳಿದುಕೊಂಡಿದ್ದೀರಾ? ಎಂದು ಸಂಸದ ಡಾ. ಉಮೇಶ ಜಾಧವ್ ಖಾರವಾಗಿ ತರಾಟೆಗೆ ತೆಗೆದುಕೊಂಡರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕೇಂದ್ರದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿ ಎಲ್ಲ ಟೆಂಡರ್ ಗಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು.

ಚಿತ್ತಾಪುರ ತಾಲೂಕಿನ ಯಾಗಾಪುರದಲ್ಲಿ ಆಗಿರುವ ಟೆಂಡರ್ ಯಾಕೆ ರದ್ದು ಮಾಡಿದ್ದೀರಿ? ಲೆಸ್ ಹೋಗಿದ ಮಾತ್ರಕ್ಕೆ ರದ್ದು ಮಾಡುವುದಾದರೆ ಇದು ಯಾವ ನ್ಯಾಯ? ಹೆಚ್ಚುವರಿ ಮೊತ್ತದ ಕಾಮಗಾರಿಯೆ ಮಾಡಬೇಕೆಂಬ ನಿಯಮ‌ ಬಂದಿದೆಯಾ? ಟೆಂಡರ್ ಇಲ್ಲದೆಯೇ ಕಾಮಗಾರಿ ನಡೆಯುತ್ತಿವೆ. ಟೆಂಡರ್ ಆಗಿ ಹಲವು ತಿಂಗಳಾದರೂ ಕಾಮಗಾರಿ ಶುರು ಆಗುತ್ತಿಲ್ಲ. ಒಟ್ಟಾರೆ ಇಲಾಖೆಯನ್ನು ಖಾಸಗಿ ಕಂಪನಿ ಎಂದುಕೊಂಡಿರಾ? ಎಂದು ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಸಂಸದ ಡಾ.‌ಉಮೇಶ ಜಾಧವ್ ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ:ಸೋಂಕು ಲಕ್ಷಣ ಇಲ್ಲದವರೇ ಹೆಚ್ಚು; ಎಲ್ಲೆಂದರಲ್ಲಿ ಅಲೆದಾಟ

ಸಭೆಗೆ ಸೇಡಂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಅಭಿಯಂತರರು ಗೈರು ಹಾಜರಾಗಿದ್ದಕ್ಕೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರದ ಸಚಿವ ಭಗವಂತ ಖೂಬಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Advertisement

ಉತ್ಸವ ಮಾಡಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ಕಾಮಗಾರಿ ಮುಗಿದ ನಂತರ ನೀರು ಪ್ರಾರಂಭವನ್ನು ಉತ್ಸವ ರೀತಿಯಲ್ಲಿ ಮಾಡುವಂತೆ ಸಚಿವ ಖೂಬಾ ನಿರ್ದೇಶನ ನೀಡಿದರು.

ಪ್ರಧಾನಮಂತ್ರಿಯವರು ಎಲ್ಲ ಜನರಿಗೆ ಶುದ್ದ ಕುಡಿಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಕಾಮಗಾರಿಯಲ್ಲಿ ಎಳ್ಳು ಕಾಳಷ್ಟು ನಿರ್ಲಕ್ಷ್ಯ ಸಲ್ಲದು ಎಂದರು.

ಸರ್ವಿಸ್ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿ: ಮಹಾನಗರದ ವರ್ತುಲ ರಸ್ತೆಯ ಸರ್ವಿಸ್ ರಸ್ತೆಯು ಹಲವೆಡೆ ಅತಿಕ್ರಮಣವಾಗಿದ್ದು, ಸರ್ವಿಸ್ ರಸ್ತೆ ಮೇಲೆ ಕಟ್ಟಿಗೆ ಅಡ್ಡೆ ಸೇರಿ ಇತರ ದಂಧೆಗಳು ನಡೆಯುತ್ತಿವೆ. ಈ ಕೂಡಲೇ ಪೊಲೀಸ್ ಅಧಿಕಾರಿಗಳೊಂದಿಗೆ ಈ ಕೂಡಲೇ ತೆರವುಗೊಳಿಸುವಂತರ ಹಾಗೂ ಸರ್ವಿಸ್ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಚಿವರು ಹಾಗೂ ಸಂಸದರು ಸೂಚಿಸಿದರು.

ಶಾಸಕರ ಗೈರು: ಪ್ರಮುಖವಾಗಿ ಕೇಂದ್ರದ ಸಚಿವರ ಅಧ್ಯಕ್ಣತೆಯಲ್ಲಿ ದಿಶಾ ಸಭೆ ನಡೆಯುತ್ತಿದ್ದರೂ ಇಬ್ಬರು ಶಾಸಕರು ಬಿಟ್ಟರೆ ಉಳಿದ ಶಾಸಕರು ಗೈರು ಹಾಜರಾಗಿರುವುದು ಕಂಡು ಬಂತು. ಸಭೆಯಲ್ಲಿ ಹೆಚ್ಚಾಗಿ ಚಿಂಚೋಳಿ, ಆಳಂದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆಯಾಯಿತು.

ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಜಿಲ್ಲಾಧಿಕಾರಿ ವಿ.ವಿ‌.ಜೋತ್ಸ್ನಾ, ಜಿ.ಪಂ ಸಿಇಓ ದಿಲಿಶ್ ಸಸಿ ಸರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next