Advertisement
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ,ಯಾದಗಿರಿಯಲ್ಲಿ ನಾನು ಸಭೆ ನಡೆಸಿದ ಕಾರಣವನ್ನು ಮುಂದಿಟ್ಟುಕೊಂಡು, ಅಧಿಕಾರಿಗಳ ವಿರುದ್ಧ ಹಕ್ಕುಚ್ಯುತಿಗೆ ಪರಿಶೀಲಿಸುವ ಕುರಿತು ಹೇಳಿಕೆ ನೀಡಿದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರು ಜನಪರ ಸಭೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು, ನನ್ನ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಲು ನನಗೆ ಅಧಿಕಾರವಿದೆ ಇದನ್ನು ಹಿರಿಯರಾದ ಕಂದಕೂರ ಅವರು ಅರಿತುಕೊಳ್ಳಬೇಕು.
Related Articles
Advertisement
ಇದನ್ನು ಹೊರತು ಪಡಿಸಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಅಧಿಕಾರಿಗಳನ್ನು ಕರೆದು ರಾಜಕಾರಣ ಮಾಡುವಷ್ಟ ಸಣ್ಣತನ ನಾನು ಮಾಡುವುದಿಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದರು.
ನೀವು ನಿಮ್ಮ ಜವಾಬ್ದಾರಿ ಅರಿಯಿರಿ. ಒಬ್ಬ ಜನಪ್ರತಿನಿಧಿ ಜನಪರ ಸಮಸ್ಯೆ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳ ಸಭೆ ನಡೆಸಿದ್ದು ಅಕ್ಷಮ್ಯ ಎಂದು ಬಿಂಬಿಸುವುದರ ಜತೆಗೆ ಅಧಿಕಾರಿಗಳನ್ನು ಹೆದರಿಸಲು ಉದ್ದೇಶಿಸದಂತೆ ತಮ್ಮ ಪತ್ರಿಕಾ ಹೇಳಿಕೆಗಳನ್ನು ಗಮನಿಸಿದ್ದೇನೆ ಎಂದಿದ್ದಾರೆ.
ನನ್ನ ಜತೆಗೆ ಕರ್ನಾಟಕ ರಾಜ್ಯ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಇದ್ದ ಕಾರಣ ತಾವು ಅಪಾರ್ಥ ಮಾಡಿಕೊಳ್ಳುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಉಮೇಶ ಜಾಧವ ಅವರು ಬಾಬುರಾವ್ ಚಿಂಚನಸೂರು ಮಾಜಿ ಸಚಿವರು, ಹಲವು ಬಾರಿ ಶಾಸಕರಾದವರು. ನಿಗಮ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವಿ ನಾಯಕರಾಗಿದ್ದಾರೆ. ಅವರಿಗೆ ನನ್ನ ಮುಖಾಂತರ ಅಧಿಕಾರಿಗಳಿಗೆ ಹೇಳಿಸಿ ಕೆಲಸ ಮಾಡಿಸಿಕೊಳ್ಳುವ ದುಸ್ಥಿತಿ ಬಂದಿಲ್ಲ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರಿಂದ ತಾವು ಚಿಂತಿತರಾಗಬೇಕಿಲ್ಲ ಎಂದು ಟಾಂಗ್ ನೀಡಿದರು.
ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ಜನಪರ ಸಮಸ್ಯೆ ಚರ್ಚಿಸಿದರೆ ತಪ್ಪಾಗುವುದಿಲ್ಲ ಇದರಲ್ಲಿ ರಾಜಕೀಯ ಹುಡುಕಬೇಡಿ ಚುನಾವಣೆ ಬಂದಾಗ ರಾಜಕಾರಣ ಮಾಡೋಣ ಎಂದು ಕಿವಿಮಾತು ಹೇಳಿದ್ದಾರೆ.