ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ಉಮಾಭಾರತಿ ಅವರು ರೈಸೆನ್ ಕೋಟೆಯಲ್ಲಿರುವ ಸೋಮೇಶ್ವರ ದೇಗುಲದ ಬಾಗಿಲನ್ನು ತೆರೆಯುವವರೆಗೂ ಅನ್ನ ತ್ಯಾಗ ನಡೆಸುವುದಾಗಿ ಸೋಮವಾರ ಘೋಷಿಸಿದ್ದಾರೆ.
ಉಮಾಭಾರತಿ ಅವರು ಸೋಮವಾರ ಸೋಮೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲೆಂದು ತೆರಳಿದ್ದರು. ಕ್ರಿ.ಶ.11ನೇ ಶತಮಾನದಲ್ಲಿ ಕಟ್ಟಲಾಗಿರುವ ಆ ದೇಗುಲವನ್ನು ಪ್ರತಿವರ್ಷ ಶಿವರಾತ್ರಿಯ ದಿನ ಮಾತ್ರವೇ ತೆರೆಯಲಾಗುತ್ತದೆ. ಅದೇ ಹಿನ್ನೆಲೆ ಜಿಲ್ಲಾಡಳಿತದವರು ದೇಗುಲದ ಬಾಗಿಲು ತೆರೆಯಲಾಗದು ಎಂದು ಉಮಾ ಭಾರತಿ ಅವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್‌ನ ಆಲಿಯಾ ಭಟ್ -ರಣಬೀರ್ ಕಪೂರ್ ಮದುವೆ ಮುಂದೂಡಿಕೆ?
ಈ ವಿಚಾರವಾಗಿ ಆಕ್ರೋಶ ಹೊರಹಾಕಿರುವ ನಾಯಕಿ, ಈ ದೇಗುಲದ ಬಾಗಿಲನ್ನು ತೆರೆಯುವವರೆಗೂ ನಾನು ಅನ್ನ ತ್ಯಾಗ ಮಾಡುವುದಾಗಿ ಹೇಳಿದ್ದಾರೆ. ದೇಗುಲದ ಬಾಗಿಲ ಬಳಿಯೇ ಗಂಗಾ ನೀರು ಹಾಕಿ, ಆರತಿ ಮಾಡಿ ತೆರಳಿದ್ದಾರೆ.
ಸೋಮೇಶ್ವರ ದೇಗುಲದ ಬಾಗಿಲನ್ನು ಪ್ರತಿ ದಿನ ತೆರೆಯಬೇಕೆಂದು ಇತ್ತೀಚೆಗೆ ಕೆಲ ಹಿಂದೂ ಪರ ಸಂಘಟನೆಗಳು ಸ್ಥಳೀಯ ಆಡಳಿತಕ್ಕೆ ಒತ್ತಡ ಹೇರುತ್ತಿದ್ದು, ಪ್ರತಿಭಟನೆ ನಡೆಸುತ್ತಿವೆ.