Advertisement
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನಾಚರಣೆ ಸಂದರ್ಭ ಬಿಜೆಪಿ ರಾಜ್ಯ ಯುವ ಮೋರ್ಚಾ, ಜಿಲ್ಲಾ ಬಿಜೆಪಿ, ಉಡುಪಿ ನಗರ ಬಿಜೆಪಿ ಆಶ್ರಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರಕಾರದ “ಸುಶಾಸನ’ ಎನ್ನುವ ಪರಿಕಲ್ಪನೆಯಲ್ಲಿ ಮಣಿಪಾಲದಲ್ಲಿ ಶನಿವಾರ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
Related Articles
Advertisement
ಹಿಂದೂ ಪುನರುತ್ಥಾನದ ಕೆಲಸ:
ಸೋಮನಾಥ, ಅಯೋಧ್ಯೆ, ಕಾಶಿ ಸಹಿತ ದೇಶದಲ್ಲಿ ಈಗ ಹಿಂದೂ ಪುನರುತ್ಥಾನದ ಕೆಲಸ ಕಾರ್ಯಗಳು ನಡೆಯುತ್ತಿವೆ. ಸಮಾಜವನ್ನು ಒಟ್ಟಿಗೆ ಸೇರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಾಮಾನ್ಯ ಕಾರ್ಯಕರ್ತನೂ ಅಧ್ಯಕ್ಷ ಸಹಿತ ಮಹೋನ್ನತ ಹುದ್ದೆ ಅಲಂಕರಿಸುವ ಅವಕಾಶ ಇರುವ ಪಕ್ಷವೇ ಬಿಜೆಪಿ ಎಂದರು.
ಸನಾತನ ಧರ್ಮದ ಪುನರುತ್ಥಾನವಾಗಿ ಭಾರತ ದೇಶ ಜಗದ್ಗುರುವಾಗಿ ಎದ್ದೇಳಲು ಧಾರ್ಮಿಕ ಜೀರ್ಣೋದ್ಧಾರ ಮೋದಿಯವರ ಸುಶಾಸನ ಕಾರ್ಯಕ್ರಮದ ಮೂಲಕ ಆಗಿದೆ. ದೇವಸ್ಥಾನಗಳ ಪುನರುತ್ಥಾನ, ಸ್ಥಳೀಯ ಭಾಷೆ, ಸಂಸ್ಕೃತಿ ಅಭಿವೃದ್ಧಿಗೆ ಮೋದಿ ಸರಕಾರ ಒತ್ತು ನೀಡಿದೆ ಎಂದರು.
ಚಿಂತನೆ, ಸಂವಾದ :
ಈ ಗೋಷ್ಠಿಯಲ್ಲಿ ಸಮಾಜದ ವಿವಿಧ ಸಂಘಟನೆಗಳು ಮತ್ತು ವಿವಿಧ ವೃತ್ತಿಪರ ಕ್ಷೇತ್ರಗಳ ಪ್ರಮುಖ ಗಣ್ಯರು ಭಾಗವಹಿಸಿದ್ದರು. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಚಿಂತನೆ ಮತ್ತು ಸಂವಾದ ನಡೆಸಲಾಯಿತು.
ಶಾಸಕ ಕೆ. ರಘುಪತಿ ಭಟ್ ಪ್ರಸ್ತಾವನೆಗೈದರು. ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿ ಸಹಿತ ಪ್ರಮುಖರು ಉಪಸ್ಥಿತರಿದ್ದರು. ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ| ಸಂದೀಪ್ ಸ್ವಾಗತಿಸಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ವಂದಿಸಿದರು. ಪ್ರಸಾದ್ ಕುತ್ಯಾರು ಕಾರ್ಯಕ್ರಮ ನಿರೂಪಿಸಿದರು.
ಮತಾಂತರ ನಿಷೇಧ ಕಾಯ್ದೆ ಉತ್ತಮ ಬೆಳವಣಿಗೆ :
ಹೊರದೇಶಗಳಿಂದ ಬಂದು ಇಲ್ಲಿರುವ ಅನ್ಯಧರ್ಮದವರನ್ನು ಓಲೈಕೆ ಮಾಡಿ ಅವರ ಮೂಲಕ ಹಿಂದೂಗಳಿಗೆ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಸನಾತನ ಧರ್ಮ ಉಳಿಸಲು ಮತಾಂತರ ಕಾಯ್ದೆ ಉತ್ತಮ ನಿರ್ಧಾರವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.